ಆಟೋ ಚಾಲಕ ವಿಲ್ಲಾ ಖರೀದಿ ಪ್ರಕಣಕ್ಕೆ ಎಂಥಾ ಬಿಗ್ ಟ್ವಿಸ್ಟ್..! ಆ ಮಹಿಳೆ ಬಿಚ್ಚಿಟ್ಟ ಸತ್ಯ ಏನು?

Date:

ಬೆಂಗಳೂರಿನಲ್ಲಿ ಆಟೋ ಓಡಿಸಿ ಬದುಕು ಕಟ್ಟಿಕೊಂಡಿದ್ದ ಸುಬ್ರಮಣಿ ದಿಢೀರ್ ಆಗಿ ಶ್ರೀಮಂತನಾಗಿರುವ ಕಥೆಗೆ ಮೊನ್ನೆ ಮೊನ್ನೆಯಷ್ಟೇ ಟ್ವಿಸ್ಟ್​ ಸಿಕ್ಕಿತ್ತು..! ನಾನು ಶ್ರೀಮಂತನಾಗಲು ಕಾರಣ ವಿದೇಶಿ ಮಹಿಳೆ ಎಂದು ಸುಬ್ರಮಣಿ ಹೇಳಿಕೆಕೊಟ್ಟಿದ್ದ. ಈಗ ಅದು ಸತ್ಯ ಎನ್ನುವಂತೆ ವಿದೇಶಿ ಮಹಿಳೆಯೊಬ್ಬರು ಸುಬ್ರಮಣಿಗೆ ನಾನೇ ವಿಲ್ಲಾ ಕೊಡಿಸಿದ್ದು ಎಂದಿದ್ದಾರೆ.
ಆಟೋ ಚಾಲಕ ಇದ್ದಕ್ಕಿದ್ದಂತೆ ವಿಲ್ಲಾ ಖರೀದಿ ಮಾಡಿರುವ ಬಗ್ಗೆ ಸಾರ್ವಜನಿಕರು ದೂರು ನೀಡಿದ್ದರು. ಆಗ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ವಿಚಾರಣೆ ವೇಳೆ ನಾನು ದಿಢೀರ್ ವಿಲ್ಲಾ ಖರೀದಿ ಮಾಡಲು ಕಾರಣ ವಿದೇಶಿ ಮಹಿಳೆ ಎಂದಿದ್ದರು. 1.60 ಕೋಟಿ ಮೌಲ್ಯದ ವಿಲ್ಲಾ ಅದು.
ಈ ಬಗ್ಗೆ ಅಮೆರಿಕಾದ ಲಾರಾ ಎವಿಸನ್ ಎನ್ನುವ ಮಹಿಳೆ ದೂರವಾಣಿ ಮೂಲಕ ಸಂಪರ್ಕಿಸಿ ಐಟಿ ಇಲಾಖೆಗೆ ಸ್ಪಷ್ಟನೆ ನೀಡಿದ್ದಾರೆ. ವಿಲ್ಲಾ ಖರೀದಿ ಮಾಡಲು ನಾನೇ ದುಡ್ಡುಕೊಟ್ಟಿದ್ದು. ಅದಕ್ಕೆ ಸಂಬಂಧಿಸಿದ ಯಾವುದೇ ದಾಖಲೆ ಕೊಡಲು ಸಿದ್ಧ. ವೈಟ್​ಫೀಲ್ಡ್​ನಲ್ಲಿ ಕಂಪನಿಯೊಂದರಲ್ಲಿ ಕೆಲಸ ಮಾಡುವಾಗ ಸುಬ್ರಮಣಿ ಪರಿಚಯವಾಗಿತ್ತು. ಆತ ನನ್ನನ್ನು ಕಂಪನಿಗೆ ಕರೆದುಕೊಂಡು ಹೋಗುವುದು, ಮನೆಗೆ ಡ್ರಾಪ್ ಮಾಡುವುದನ್ನು ಮಾಡುತ್ತಿದ್ದರು. ಅವನ ಒಳ್ಳೆಯತನ ನೋಡಿ ದುಡ್ಡು ಕೊಟ್ಟೆ. ಆತನ ಮಕ್ಕಳ ಶಿಕ್ಷಣದ ಹೊಣೆಯನ್ನು ನಾನೇ ಹೊತ್ತಿದ್ದೇನೆ ಎಂದಿದ್ದಾರೆ.
ನನೆಗೆ 14 ವರ್ಷದಿಂದ ಪರಿಚಯ ಇರುವ ವಿದೇಶಿ ಮಹಿಳೆಯೊಬ್ಬರು ಈ ವಿಲ್ಲಾ ಕೊಡಿಸಿದ್ದಾರೆ. ವೈಟ್​ ಫೀಲ್ಡ್​ ಏರಿಯಾದಲ್ಲಿ ಅವರು ನಡೆದುಕೊಂಡು ಹೋಗುವಾಗ ನಾನು ಮಾತನಾಡಿಸಿ ಡ್ರಾಪ್ ನೀಡಿದ್ದೆ. ನನ್ನ ಮೇಲಿನ ವಿಶ್ವಾಸದಿಂದ ವಿಲ್ಲಾ ಕೊಡಿಸಿದ್ದಾರೆ ಎಂದು ಸುಬ್ರಮಣಿ ಹೇಳಿದ್ದರು.

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...