ರಟಕಲ್ ಗ್ರಾಮದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಮತ್ತೆ ಸಿಎಂ ಆಗಬೇಕು ಎಂಬ ಗೃಹ ಸಚಿವ ಎಂ.ಬಿ.ಪಾಟೀಲ್ ಹೇಳಿಕೆ ಕುರಿತು, ಜಿಲ್ಲೆಯ ರಟಕಲ್ ಗ್ರಾಮದಲ್ಲಿ ಪ್ರತಿಕ್ರಿಯೆ ನೀಡಿದ ಪರಮೇಶ್ವರ್, ಪಕ್ಷದ ನಾಯಕರು ಅವರವರ ಅಭಿಪ್ರಾಯ ಹೇಳುವುದರಲ್ಲಿ ತಪ್ಪೇನಿದೆ. ಇಂತಹ ಹೇಳಿಕೆಗಳನ್ನು ಕೊಡಬಾರದು ಎಂದು ಹೈಕಮಾಂಡ್ ಹೇಳಿದೆ. ಇದನ್ನು ಸಹ ಹೈಕಮಾಂಡ್ ನೋಡಿಕೊಳ್ಳುತ್ತದೆ ಎಂದು ಹೇಳಿದರು.
ಇನ್ನು ಸಿದ್ದರಾಮಯ್ಯರನ್ನು ಸೈಡ್ ಲೈನ್ ಮಾಡಲು ಕೈ ಪಕ್ಷದ ಯತ್ನವೆಂಬ ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಪರಮೇಶ್ವರ್, ಅವರದ್ದೇ ಪಕ್ಷದಲ್ಲಿ ಯಡಿಯೂರಪ್ಪ ಅವರನ್ನು ಸೈಡ್ ಲೈನ್ ಮಾಡೋಕೆ ಯತ್ನ ನಡೆಯುತ್ತಿದ್ದು, ಅದನ್ನು ಅವರು ಮೊದಲು ಹೇಳಲಿ, ಬಿಎಸ್ ವೈ ಸಿಎಂ ಆಗಬಾರದು ಎಂದು ಅವರ ಪಕ್ಷದಲ್ಲೇ ತುಳಿಯಲು ಹೊರಟಿದ್ದಾರೆ ಎಂದರು.