ಬಡ ವಿದ್ಯಾರ್ಥಿನಿ ಕನಸ್ಸನ್ನು ಈಡೇರಿಸಿದ ಪ್ರಥಮ್..!

0
353

ಕನ್ನಡದ ಖಾಸಗಿ ವಾಹಿನಿಯ ಬಹುಜನಪ್ರಿಯ ಶೋ ಬಿಗ್ ಬಾಸ್ ಸೀಸನ್ 4 ವಿನ್ನರ್ ಆದ ಪ್ರಥಮ್ ಅವರು “ಪ್ರಥಮ್ ಅಂದ್ರೆ ನ್ಯಾಯಾ ನ್ಯಾಯಾ ಅಂದ್ರೆ ಪ್ರಥಮ್ “ಎಂಬ ಎಂಬುದನ್ನು ಹೇಳಿಕೊಂಡು ಜನಪ್ರಿಯತೆ ಪಡೆದುಕೊಂಡ ಇವರು  ಆ ಶೋ ನಲ್ಲಿ ಐವತ್ತು ಲಕ್ಷ ರೂಪಾಯಿಗಳನ್ನು ಗೆದ್ದರು, ಆ ಹಣವನ್ನು ಸಮಾಜಮುಖಿಯಾದ ಕೆಲಸ ಕಾರ್ಯಗಳಿಗೆ ಬಳಸೋದಾಗಿ ಪ್ರಥಮ್ ಹೇಳಿಕೊಂಡಿದ್ದರು.

ಅಂದಹಾಗೆ ಪ್ರಥಮ್ ಅವರು ಈಗ ನಿಜಕ್ಕೂ ಸಾರ್ಥಕವೆಂಬಂಥಾ ಕೆಲಸವೊಂದನ್ನು ಮಾಡಿದ್ದಾರೆ. ಬಡತನದ ಬೇಗೆಯಿಂದಾಗಿ ವಿದ್ಯಾಭ್ಯಾಸವನ್ನು ದ್ವಿತೀಯ ಪಿಯುಸಿಗೇ ಮೊಟಕುಗೊಳಿಸಿಕೊಳ್ಳುವ ಸ್ಥಿತಿಯಲ್ಲಿದ್ದ ಪ್ರತಿಭಾವಂತ ವಿದ್ಯಾರ್ಥಿನಿಯೊಬ್ಬಳಿಗೆ ಪ್ರಥಮ್ ಆರ್ಥಿಕ ಸಹಾಯ ಮಾಡಿದ್ದಾರೆ. ಆಕೆಯ ಓದಿನ ವೆಚ್ಚವನ್ನು ತಾವೇ ಭರಿಸುವ ವಾಗ್ದಾನ ನೀಡುವ ಮೂಲಕ ಎಲ್ಲರೂ ಮೆಚ್ಚುವಂಥಾ ಕೆಲಸ ಮಾಡಿದ್ದಾರೆ.

ಪ್ರತಿಭಾವಂತ ವಿದ್ಯಾರ್ಥಿನಿ ಮೇಘ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಹಲಗಾಪುರ ಗ್ರಾಮದ ಚಾಮರಾಜು ಮತ್ತು ರತ್ನಮ್ಮ ದಂಪತಿಯ ಪುತ್ರಿ, ದ್ವಿತೀಯ ಪಿಯುಸಿಯಲ್ಲಿ 91.5 ಪರ್ಸೆಂಟೇಜು ಅಂಕ ಗಳಿಸಿಕೊಂಡಿದ್ದಳು. ಅಲ್ಲಿನ ಬಂಡಳ್ಳಿ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡಿ 549 ಅಂಕಗಳೊಂದಿಗೆ ಗಮನಾರ್ಹ ಸಾಧನೆ ಮಾಡಿದ್ದರೂ ಹೆತ್ತವರ ಆರ್ಥಿಕ ಸಂಕಷ್ಟವೇ ಮೇಘಾಳ ಓದಿಗೆ ಕಂಟಕವಾಗಿತ್ತು.

ಇನ್ನೇನು ಪಿಯುಸಿಗೇ ತನ್ನ ವ್ಯಾಸಂಗ ನಿಲ್ಲಿಸ ಬೇಕೆಂದಿದ್ದ ಮೇಘಾಳಾ ಮನೆಗೆ ತೆರಳಿದ ಪ್ರಥಮ್ . ಹೆತ್ತವರಿಗೆ ಧೈರ್ಯ ತುಂಬಿ, ಮಗಳನ್ನು ಓದಿಸುವಂತೆ ಪ್ರೇರೇಪಿಸಿ ಆರಂಭಿಕವಾಗಿ ಹತ್ತು ಸಾವಿರದಷ್ಟು ಹಣ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ಮೇಘಾಳನ್ನು ಪೋಷಕರು ಯಾವ ಕಾಲೇಜಿಗೆ ಸೇರಿಸಿದರೂ ವಿದ್ಯಾಭ್ಯಾಸಕ್ಕೆ ನೆರವಾಗೋದಾಗಿಯೂ ಪ್ರಥಮ್ ವಾಗ್ದಾನ ನೀಡಿದ್ದಾರೆ. `ಮೇಘಾ ಕುಗ್ರಾಮದ ಹುಡುಗಿ. ಮನೆಯಲ್ಲಿ ಅಂಥಾ ಬಡತನವಿದ್ದರೂ ಇಷ್ಟೊಂದು ಅಂಕ ಗಳಿಸಿದ್ದೊಂದು ಸಾಧನೆ. ಈ ಹುಡುಗಿ ಬಡತನದ ಕಾರಣದಿಂದ ವಿದ್ಯಾಭ್ಯಾಸ ಮೊಟಕುಗೊಳಿಸಿಕೊಳ್ಳೋ ಸ್ಥಿತಿ ತಲುಪಿರೋದನ್ನು ಕೇಳಿ ಬೇಸರವಾಯ್ತು.

ಆದ್ದರಿಂದಲೇ ಸಹಾಯ ಮಾಡಿದ್ದೇನೆ. ಮುಂದೆಯೂ ಮೇಘಾ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುತ್ತೇನೆ.  ಬಿಗ್ ಬಾಸ್ ಶೋನಲ್ಲಿ ಗೆದ್ದ ಹಣ ಇಂಥಾ ಒಳ್ಳೆ ಕೆಲಸ ಕಾರ್ಯಗಳಿಗೇ ವಿನಿಯೋಗವಾಗಬೇಕೆಂಬುದು ನನ್ನ ಮಹದಾಸೆ ಅಂತ ಪ್ರಥಮ್ ಹೇಳಿಕೊಂಡಿದ್ದಾರೆ.

 

LEAVE A REPLY

Please enter your comment!
Please enter your name here