ತಡೆದುಕೊಳ್ಳಲಾಗದಷ್ಟು ಸೆಕೆ ಇದೆ. ಒಂದು ನಿಮಿಷ ಫ್ಯಾನ್ಸ್ ಅಥವಾ ಎಸಿ ಇಲ್ಲದೇ ಇರಲು ಸಾಧ್ಯವೇ ಇಲ್ಲ. ದೇವರಿಗೂ ಸೆಕೆ ಆಗುತ್ತಾ? ದೇವರಿಗೆ ಸೆಕೆ ಆಗುತ್ತದಂತೆ.. ಆದ್ದರಿಂದ ದೇವರಿಗೆ ಫ್ಯಾನ್ ಹಾಕಿದ್ದಾರೆ ಆ ಒಂದು ದೇವಸ್ಥಾನದಲ್ಲಿ.
ಏನು ದೇವರಿಗೆ ಸೆಕೆ ಆಗುತ್ತದೆ ಎಂದು ಫ್ಯಾನ್ ಅಳವಡಿಸಿದ್ದಾರೆ ಎಂದರೆ ನಂಬಲು ಸಾಧ್ಯ ಇಲ್ಲವೇ? ನಂಬಲೇ ಬೇಕು. ಇದು ಉತ್ತರ ಪ್ರದೇಶದ ಕಾನ್ಪುರ್ನಲ್ಲಿರುವ ಸಿದ್ಧಿವಿನಾಯಕ ಗಣೇಶ ದೇವಸ್ಥಾನದಲ್ಲಿನ ಕಥೆ. ಅಲ್ಲಿ ದೇವರಿಗೆ ಸೆಕೆ ಆಗುತ್ತದೆ. ಈ ಉರಿ ಬಿಸಿಲಿನಲ್ಲಿ ತಡೆದುಕೊಳ್ಳಲು ಆಗುವುದಿಲ್ಲ ಎಂದು ಫ್ಯಾನ್ ಮತ್ತು ಏರ್ ಕೂಲರ್ ಅಳವಡಿಸಿ ಬಿಟ್ಟಿದ್ದಾರೆ.
ದೇವರು ಕೂಡ ಮನುಷ್ಯರಂತೆ.. ದೇವರಿಗೂ ಸೆಕೆ ಆಗುತ್ತದೆ. ತುಂಬಾ ಉಷ್ಣತೆ ಇರುವುದರಿಂದ ಫ್ಯಾನ್, ಕೂಲರ್ ಅಳವಡಿಸಿದ್ದೇವೆ. ಅಷ್ಟೇ ಅಲ್ಲದೆ ತಿಳಿ ಬಣ್ಣದ ಬಟ್ಟೆಯನ್ನು ತೊಡಿಸಿದ್ದೇವೆ ಎನ್ನುತ್ತಾರೆ ಅಲ್ಲಿನ ಅರ್ಚಕ ಸುರ್ಜೀತ್ ಕುಮಾರ್.
ಒಟ್ಟಿನಲ್ಲಿ ದೇವರಿಗೂ ಸೆಕೆ ಅಂತ ಗರ್ಭಗುಡಿಗೂ ಎಸಿ, ಫ್ಯಾನ್ ಬಂದೇ ಬಿಟ್ಟಿತು..!
ದೇವರಿಗೆ ಸೆಕೆ ಆಗುತ್ತಂತ ಗರ್ಭಗುಡಿಗೇ ಫ್ಯಾನ್ ಹಾಕಿದ್ರು..!
Date: