ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ, ರಾಧಿಕಾ ಪಂಡಿತ್ ಅಭಿನಯದ ಸಿನಿಮಾ ಅದ್ದೂರಿ. 2012ರಲ್ಲಿ ತೆರೆಕಂಡ ಈ ಸಿನಿಮಾ ಮೂಲಕ ಧ್ರುವ ಸ್ಯಾಂಡಲ್ವುಡ್ ಗೆ ಅದ್ದೂರಿಯಾಗಿಯೇ ಎಂಟ್ರಿಕೊಟ್ಟಿದ್ದರು. ಧ್ರುವ ತನ್ನ ಮೊದಲ ಚಿತ್ರದಲ್ಲೇ ಭಾರೀ ಯಶಸ್ಸನ್ನು ಕಂಡಿದ್ದರು, ಧ್ರುವ ಅವರ ಸಿನಿ ಜರ್ನಿ ಈ ಸಿನಿಮಾ ಮೂಲಕವೇ ಶುಭಾರಂಭಗೊಂಡಿತ್ತು. ರಾಧಿಕಾ ಪಂಡಿತ್, ಧ್ರುವ ನಟೆನಯ ಈ ಬ್ಲಾಕ್ ಬಸ್ಟರ್ ಮೂವಿಗೆ ಆ್ಯಕ್ಷನ್ ಕಟ್ ಹೇಳಿದ್ದರು ಎ.ಪಿ ಅರ್ಜುನ್.
ಈಗ ಅದ್ದೂರಿ 2 ಬರಲಿದೆ. ಒಂದು ಸಿನಿಮಾದ ಸೀಕ್ವೆಲ್ಸ್ ಬರುತ್ತದೆ ಎಂದರೆ ಅದೇ ಮೊದಲ ಭಾಗದ ಟೀಮೇ ಅದರಲ್ಲೂ ಅದೇ ಹೀರೋ ಇರುತ್ತಾರೆ ಎನ್ನುವುದು ಸಾಮಾನ್ಯ ಅಭಿಪ್ರಾಯ. ಆ ಅಭಿಪ್ರಾಯದಂತೆ ಅದ್ದೂರಿ 2ಗೆ ಧ್ರುವ ಅವರೇ ಹೀರೋ ಆಗುತ್ತಾರೆ ಎಂಬ ಮಾತು ಬರುವುದು ಕಾಮನ್. ಆದರೆ ಧ್ರುವ ಅಭಿಮಾನಿಗಳಿಗೆ ಇದು ಬೇಸರದ ಸುದ್ದಿ. ಏಕೆಂದರೆ ಧ್ರುವ ಅದ್ದೂರಿ 2 ನ ಹೀರೋ ಅಲ್ಲ.
ಧ್ರುವ ಅವರ ಬದಲು ರಿಯಲ್ ಸ್ಟಾರ್ ಉಪೇಂದ್ರ ಅವರ ಅಣ್ಣನ ಮಗ ನಿರಂಜನ್ ಸುಧೀಂದ್ರ ಅದ್ದೂರಿ 2ನ ನಾಯಕ, ಈ ಸಿನಿಮಾದ ಮೂಲಕ ನಿರಂಜನ್ ನಾಯಕನಾಗಿ ಕನ್ನಡ ಚಿತ್ರರಂಗದಲ್ಲಿ ಹೊಸ ಹೆಜ್ಜೆ ಇಡುತ್ತಿದ್ದಾರೆ. ಇವರು ಇದಕ್ಕು ಮೊದಲು ಪ್ರಿಯಾಂಕ ಉಪೇಂದ್ರ ಅವರ ಸೆಕೆಂಡ್ ಹಾಫ್ ಸಿನಿಮಾದಲ್ಲಿ ನಟಿಸಿದ್ದರು. ಈಗ ನಾಯಕನಾಗಿ ಅದ್ದೂರಿಯಾಗಿ ಹೊಸ ಇನ್ನಿಂಗ್ಸ್ ಆರಂಭಿಸುತ್ತಿದ್ದು, ಗಟ್ಟಿಯಾಗಿ ನೆಲೆ ನಿಲ್ಲಲು ಉತ್ಸುಕರಾಗಿದ್ದಾರೆ.