ಮದುವೆಯ ಬಳಿಕ ಮುಂಬೈ ಗೆ ಅನುಷ್ಕಾ ಶರ್ಮಾ ಜೊತೆ ಶಿಫ್ಟ್ ಆಗಿರುವ ವಿರಾಟ್ ಕೊಹ್ಲಿ ಮುಂಬೈನಲ್ಲಿ ನಡೆದ ಎಲೆಕ್ಷನ್ ನಲ್ಲಿ ವೋಟರ್ ಐಡಿ ಇಲ್ಲದ ಕಾರಣ ಮತವನ್ನು ಚಲಾಯಿಸಿರಲಿಲ್ಲ,
ಹೀಗಾಗಿ ಇಂದು ನಡೆಯುತ್ತಿರುವ ಆರನೇ ಹಂತದ ಚುನಾವಣೆಯಲ್ಲಿ ಹರಿಯಾಣದ ಗುರುಗ್ರಾಮದ ಮತಗಟ್ಟೆಯಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಮತವನ್ನು ಚಲಾಯಿಸಿದ್ದಾರೆ.
ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ಏಳು ರಾಜ್ಯಗಳ 59 ಲೋಕಸಭಾ ಕ್ಷೇತ್ರಗಳಲ್ಲಿ ಇಂದು ಚುನಾವಣೆ ನಡೆಯುತ್ತಿದ್ದು ಬೆಳಗ್ಗೆಯಿಂದಲೇ ಎಲ್ಲ ಕಡೆ ಬಿರುಸಿನ ಮತದಾನ ಸಾಗಿದೆ.
ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಇಂದು ಬೆಳಿಗ್ಗೆ ಹರಿಯಾಣ ದಲ್ಲಿರುವ ಗುರು ಗ್ರಾಮದ ಫೈನ್ ಕ್ರೆಸ್ಟ್ ಶಾಲೆಯ ಪೋಲಿಂಗ್ ಬೂತ್ ಗೆ ಆಗಮಿಸಿ ಎಲ್ಲರಂತೆ ಸರದಿ ಸಾಲಿನಲ್ಲಿ ನಿಂತು ವೋಟು ಹಾಕಿದ್ದಾರೆ.
ವೋಟ್ ಹಾಕಲು ಗುರು ಗ್ರಾಮಕ್ಕೆ ಬಂದಿದ್ದ ವಿರಾಟ್ ಕೊಹ್ಲಿ ಅವರನ್ನು ನೋಡಲು ಜನರು ಕಿಕ್ಕಿರಿದು ಸೇರಿದ್ದ ಸೆಲ್ಫಿ ತೆಗೆದುಕೊಳ್ಳುವ ಸಂದರ್ಭದಲ್ಲಿ ನೂಕುನುಗ್ಗಲು ಸಂಭವಿಸಿದೆ.
ವೋಟ್ ಹಾಕಿದ ನಂತರ ತಮ್ಮ ಇನ್ಸ್ಟಾಗ್ರಾಮ್ ಅಕೌಂಟಿನಲ್ಲಿ ಫೋಟೋ ಒಂದನ್ನು ಹಂಚಿಕೊಂಡಿರುವ ವಿರಾಟ್ ಕೊಹ್ಲಿ
ದೇಶವನ್ನು ಕಟ್ಟುವಲ್ಲಿ ಮತದಾನ ನಿಮ್ಮ ಹಕ್ಕು ಹಾಗೂ ಜವಾಬ್ದಾರಿ ಹಾಗಾಗಿ ಮರೆಯದೆ ಎಲ್ಲರೂ ವೋಟ್ ಮಾಡಿ ಎಂದು ಬರೆದುಕೊಳ್ಳುವ ಮೂಲಕ ಯುವ ಜನತೆಗೆ ಮತ್ತು ತಮ್ಮ ಅಭಿಮಾನಿಗಳಿಗೆ ಕರೆ ನೀಡಿದ್ದಾರೆ.