ಇಂದು ಐಪಿಎಲ್ 12ನೇ ಆವೃತ್ತಿಯ ಫೈನಲ್ ನಡೆಯಲಿದೆ. ಹೈದರಬಾದ್ನಲ್ಲಿ ರಾತ್ರಿ 7.30ಕ್ಕೆ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಚಾಂಪಿಯನ್ ಪಟ್ಟಕ್ಕಾಗಿ ಪ್ರಬಲ ಹೋರಾಟ ನಡೆಸಲಿವೆ. ಫೈನಲ್ ಪಂದ್ಯಕ್ಕೆ ಎರಡೂ ತಂಡಗಳು ಭಾರಿ ತಯಾರಿ ಮಾಡಿಕೊಂಡಿವೆ.
ಚೆನ್ನೈ ಮತ್ತು ಮುಂಬೈ ಎರಡೂ ತಂಡಗಳು ಐಪಿಎಲ್ ಇತಿಹಾಸದಲ್ಲಿ ಮೂರ್ಮೂರು ಸಲ ಐಪಿಎಲ್ ಕಪ್ ಗೆದ್ದಿವೆ. ಈ ಬಾರಿ ಗೆದ್ದ ತಂಡ 4ನೇ ಬಾರಿ ಪ್ರಶಸ್ತಿ ಗೆದ್ದಂತಾಗುತ್ತದೆ. ಈ 4ನೇ ಗೆಲುವು ಮುಂಬೈ ಇಂಡಿಯನ್ಸ್ನದ್ದು ಎಂದು ಹೇಳಲಾಗುತ್ತಿದೆ.
ರೋಹಿತ್ ಶರ್ಮಾ ನಾಯಕತ್ವದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಮುಂಬೈ 2013, 2015 ಮತ್ತು2017ರಲ್ಲಿ ಪ್ರಶಸ್ತಿ ಗೆದ್ದಿತ್ತು. ಚೆನ್ನೈ 2010,2011, 2018ರಲ್ಲಿ ಚಾಂಪಿಯನ್ ಆಗಿತ್ತು, ಆದರೆ, ಮುಂಬೈ ಎದುರು ಚೆನ್ನೈ ಆಡಿದ 27 ಪಂದ್ಯಗಳಲ್ಲಿ ಮುಂಬೈ 16 ಬಾರಿ ಜಯಿಸಿದೆ. ಚೆನ್ನೈ 11 ಪಂದ್ಯಗಳಲ್ಲಿ ಗೆದ್ದಿದೆ. ಅದಲ್ಲದೆ ಈ ಬಾರಿ ಆಡಿದ 3 ಪಂದ್ಯಗಳಲ್ಲಿ ಮುಂಬೈ ಎದುರು ಚೆನ್ನೈ ಒಂದೂ ಪಂದ್ಯವನ್ನೂ ಗೆದ್ದಿಲ್ಲ.
ಮುಂಬೈನಲ್ಲಿ ಸೂರ್ಯಕುಮಾರ್ ಯಾದವ್ ಭರ್ಜರಿ ಫಾರ್ಮ್ನಲ್ಲಿದ್ದಾರೆ. ಹಾರ್ದಿಕ್ ಪಾಂಡ್ಯ,ಕೃನಾಲ್ ಪಾಂಡ್ಯ ಸಹೋದರರು ಬಲ ನೀಡಿದ್ದಾರೆ. ಆದರೆ, ಚೆನ್ನೈಗೆ ವಾಟ್ಸನ್, ಡುಪ್ಲೆಸಿ ಫಾರ್ಮ್ ಗೆ ಮರಳಿದ್ದರೂ ನಿರಂತರ ಉತ್ತಮ ಪ್ರದರ್ಶನ ನೀಡುತ್ತಿಲ್ಲ. ಈ ಅಂಕಿ ಅಂಶಗಳ ಪ್ರಕಾರ ಚೆನ್ನೈಯೇ ಗೆಲ್ಲುವ ನೆಚ್ಚಿನ ತಂಡವಾಗಿದೆ. ಆದ್ದರಿಂದ ಮುಂಬೈನೇ ಚಾಂಪಿಯನ್ ಆಗುತ್ತದೆ ಎಂದು ನಿರೀಕ್ಷಿಸಲಾಗಿದೆ.
ಚಾಂಪಿಯನ್ ಆಗೋದು ಮುಂಬೈನೇ?! ಮ್ಯಾಚ್ಗೂ ಮುನ್ನ ಈ ವಿಷ್ಯ ರಿವೀಲ್ ಆಗಿದ್ದು ಹೇಗೆ?
Date: