ವರ್ಲ್ಡ್ ಕಪ್ ಗೆ ಹೋಗುವ ಮುನ್ನ ರಣರಂಗಕ್ಕೆ ಹೊರಟ ಆಸೀಸ್..!

Date:

ಮೇ.30 ರಿಂದ ಏಕದಿನ ಕ್ರಿಕೆಟ್ ವಿಶ್ವಕಪ್. ಇಂಗ್ಲೆಂಡ್ ಮತ್ತು ವೇಲ್ಸ್ ನಲ್ಲಿ ನಡೆಯಲಿರುವ ವಿಶ್ವಕಪ್ ಗೆ ವಿಶ್ವದ ಎಲ್ಲಾ ದೇಶಗಳ ಅಂತರಾಷ್ಟ್ರೀಯ ಕ್ರಿಕೆಟ್ ತಂಡಗಳು ಸನ್ನದ್ಧರಾಗಿವೆ.‌ಅಂತಿಮ ಹಂತದ ತಾಲೀಮು ನಡೆಸುತ್ತಾ ಬ್ಯುಸಿ ಆಗಿವೆ. ಆದರೆ, ವಿಶ್ವದ ಶ್ರೇಷ್ಠ ಕ್ರಿಕೆಟ್ ತಂಡಗಳಲ್ಲೊಂದಾಗಿರುವ ಆಸ್ಟ್ರೇಲಿಯಾ ಮಾತ್ರ ರಣರಂಗಕ್ಕೆ ಹೋಗಿದೆ.
ವಿಶ್ವಕಪ್ ಮತ್ತು ಆ್ಯಷನ್ ಸರಣಿಯನ್ನು ಆಡಲು ತವರನಿಂದ ಹೊರಟಿರುವ ಆಸೀಸ್ ಇಂಗ್ಲೆಂಡ್ ಗೆ ಹೋಗುವ ಮುನ್ನ ಟರ್ಕಿಗೆ ತೆರಳಿದೆ. ಅಲ್ಲಿನ ಗಾಲಿಪೊಲಿ ಯುದ್ಧಭೂಮಿಗೆ ಭೇಟಿ ನೀಡಲಿದ್ದಾರೆ. ಕೆಲವು ದಿನಗಳ ಕಾಲ ಇಲ್ಲೇ ನೆಲೆಸಿದೆ.
ಒಂದನೇ ವರ್ಲ್ಡ್ ವಾರ್ ನಲ್ಲಿ ಈ ಜಾಗದಲ್ಲಿ ಆಸ್ಟ್ರೇಲಿಯಾದ 10000 ಯೋಧರು ಜೀವ ತ್ಯಾಗ ಮಾಡಿದ್ದಾರೆ. ಇದೊಂದು ಐತಿಹಾಸಿಕ ಸ್ಥಳವಾಗಿದ್ದು, ಮಹತ್ವದ ಸರಣಿಗೆ ಮುನ್ನ ಅಲ್ಲಿಗೆ ಹೋದರೆ ಸ್ಫೂರ್ತಿ ಸಿಗುತ್ತದೆ. ತಂಡದಲ್ಲಿ ಒಗ್ಗಟ್ಟು ಮೂಡುತ್ತದೆ ಎಂದು ಜಸ್ಟಿನ್ ಲ್ಯಾಂಗರ್ ತಿಳಿಸಿದ್ದಾರೆ.
ಆಸೀಸ್ ವಿಶ್ವಕಪ್ ಮತ್ತು ಆ್ಯಷನ್ ಸರಣಿ ಹಿನ್ನೆಲೆಯಲ್ಲಿ 4 ತಿಂಗಳ ಕಾಲ ಆಸೀಸ್ ತಂಡ ಇಂಗ್ಲೆಂಡ್ ನಲ್ಲೇ ಉಳಿದು ಕೊಳ್ಳಲಿದೆ.
ಚೆಂಡು ವಿರೂಪ ಪ್ರಕರಣದ ನಂತರದಲ್ಲಿ ಕುಗ್ಗಿದ್ದ ತಂಡವನ್ನು ಫ್ರಾನ್ಸ್‌ನಲ್ಲಿರುವ ಯುದ್ಧಭೂಮಿಗೆ ಕರೆದೊಯ್ಯಲಾಗಿತ್ತು. ಆಟಗಾರರು ನಮ್ರತೆ, ಜೀವನದ ಮಹತ್ವ, ನಾವೆಷ್ಟು ಅದೃಷ್ಟವಂತರು ಎನ್ನುವ ವಿಚಾರಗಳನ್ನು ಅರ್ಥ ಮಾಡಿಕೊಂಡರು. ಆಟಗಾರರಲ್ಲಿ ಹೊಂದಾಣಿಕೆ ಹೆಚ್ಚಾಗಿತ್ತು ಎಂದೂ ಕೂಡ ಲ್ಯಾಂಗರ್ ತಿಳಿಸಿದ್ದಾರೆ.

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...