ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಡಬಲ್ ಸೆಂಚುರಿಗಳ ಸರದಾರ ರೋಹಿತ್ ಶರ್ಮಾ ಅವರ ನೇತೃತ್ವದ ಮುಂಬೈ ಇಂಡಿಯನ್ಸ್ ಗೆ ತಲೆಬಾಗಿದೆ. ಇದರೊಂದಿಗೆ ಮುಂಬೈ ಇಂಡಿಯನ್ಸ್ 4ನೇ ಬಾರಿ ಐಪಿಎಲ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
ಕಳೆದ ಬಾರಿಯ ಚಾಂಪಿಯನ್ ಚೆನ್ನೈ ವಿರುದ್ಧ ಚಾಂಪಿಯನ್ ಆಟ ಆಡಿದ ಮುಂಬೈ ಈ ಬಾರಿಯ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಹೈದರಾಬಾದ್ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ 149ರನ್ ಗಳಿಸಿತು.
ಸುಲಭ ಗುರಿ ಬೆನ್ನತ್ತಿದೆ ಚೆನ್ನೈ ಪರ ಶೇನ್ ವ್ಯಾಟ್ಸನ್ 80ರನ್ ಗಳ ಹೋರಾಟ ಮಾಡಿದ್ದು ಹೊರತು ಪಡಿಸಿದರೆ ಯಾರೊಬ್ಬ ಬ್ಯಾಟ್ಸ್ಮನ್ ಕೂಡ ಸವಾಲನ್ನು ಎದುರಿಸಿಲ್ಲ. ಮುಂಬೈ 1ರನ್ ಗಳಿಂದ ಗೆಲುವು ಸಾಧಿಸಿತು.
ಧೋನಿಯಿಂದ ಚಾಂಪಿಯನ್ ಪಟ್ಟ ಕಸಿದುಕೊಂಡ ರೋಹಿತ್ ..! 4ನೇ ಬಾರಿ ಮುಂಬೈ ಇಂಡಿಯನ್ಸ್ ಚಾಂಪಿಯನ್
Date: