ರೀನಾ ದ್ವಿವೇದಿ(32), ಇವರು ಉತ್ತರ ಪ್ರದೇಶದ ಪಿಡಬ್ಲ್ಯುಡಿ ಅಧಿಕಾರಿಯ ಕಿರಿಯ ಸಹಾಯಕಿ. ಮೇ 5ರಂದು ಲಖನೌದ ನಾಗ್ರಾಮ್‌ನಲ್ಲಿ ನಡೆದ 5ನೇ ಹಂತದ ಲೋಕಸಭೆ ಚುನಾವಣಾ ದಿನ ಹಳದಿ ಬಣ್ಣದ ಸೀರೆ ಧರಿಸಿ ಇವಿಯಂ ಹಿಡಿದು ಬಂದಿದ್ದರು.
ಚುನಾವಣಾ ಅಧಿಕಾರಿಯಾಗಿ ಬಂದು ತಮ್ಮ ಸೌಂದರ್ಯದಿಂದಲೇ ಒಂದೇ ದಿನದಲ್ಲಿ ಅಸಂಖ್ಯಾತ ಜನರ ಮನದಲ್ಲಿ ಸ್ಥಾನ ಗಿಟ್ಟಿಸಿ ಸೆಲೆಬ್ರಿಟಿಯಾದ ಅಧಿಕಾರಿ ಇವರು…
ತಮ್ಮ ಪೋಟೋ ಒಂದನ್ನು ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದೇ ತಡ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿ ಕಾಮೆಂಟ್ ಸುರಿಮಳೆಯೇ ಹರಿದುಬಂತು. ಒಂದೇ ದಿನದಲ್ಲಿ ರೀನಾ ಫುಲ್ ಫೇಮಸ್ ಆಗಿಬಿಟ್ಟರು.
ಇದೀಗ ರೀನಾ ಎಲ್ಲೆಡೆ ಗುರುತಿಸಿಕೊಂಡಿರುವುದರಿಂದ ಅವರು ವಾಟ್ಸಾಪ್ ಹಾಗೂ ಟಿಕ್ ಟಾಕ್ ಮೂಲಕವೂ ಮತ್ತಷ್ಟು ಜನಪ್ರಿಯತೆ ಗಳಿಸಿದ್ದಾರೆ. ರೀನಾ ಅವರಿಗೆ ಅತಿಥಿಯಾಗಿ ಬರಲು ದಿನಕ್ಕೆ ನೂರಾರು ಕರೆಗಳು ಬರುತ್ತಿವೆಯಂತೆ. ಅಲ್ಲದೆ, ಟಿಕ್ಟಾಕ್ ಹಾಗೂ ಸಾಮಾಜಿಕ ಜಾಲತಾಣದ ಫಾಲೋವರ್ಸ್ ಸಂಖ್ಯೆ ಹೆಚ್ಚಾಗುತ್ತಿದೆ.
ಇದರಿಂದ ರೀನಾ ಅವರು ಕೂಡ ಹರ್ಷ ವ್ಯಕ್ತಪಡಿಸಿದ್ದಾರೆ.
ನಾನು ಬಹುಬೇಗನೇ ವಿವಾಹ ಜೀವನಕ್ಕೆ ಕಾಲಿಟ್ಟೆ. ಆದರೆ, ಬಳಿಕ ನನ್ನ ವೃತ್ತಿ ಜೀವನವನ್ನು ನಾನೇ ಪಡೆದುಕೊಂಡೆ. ಇದೀಗ ಜನರು ನನ್ನನ್ನು ಇಷ್ಟಪಡುತ್ತಿದ್ದಾರೆ. ಪ್ರತಿಯೊಂದು ಕ್ಷಣವನ್ನು ನಾನು ಎಂಜಾಯ್ ಮಾಡುತ್ತಿದ್ದೇನೆ. ನನ್ನನ್ನು ಗುರುತಿಸಲಿ ಎಂದು ಯಾರು ತಾನೇ ಇಷ್ಟಪಡುವುದಿಲ್ಲ? ನಾನು ತುಂಬಾ ಸಂತೋಷವಾಗಿದ್ದೇನೆ ಎಂದು ರೀನಾ ತಿಳಿಸಿದ್ದಾರೆ.
ಇದೇ ನನ್ನ ಮೊದಲ ಚುನಾವಣೆಯಲ್ಲ. ಹಲವು ಚುನಾವಣೆಗಳಲ್ಲಿ ನಾನು ಕಾರ್ಯನಿರ್ವಹಿಸಿದ್ದೇನೆ. ಹಾಗೆಲ್ಲ ನನ್ನ ಫೋಟೋಗಳನ್ನು ತೆಗೆದುಕೊಳ್ಳುತ್ತಿದ್ದರು. ಆದರೆ, ಈ ಬಾರಿ ನಾನು ಸೆಲೆಬ್ರಿಟಿಯಾಗಿಬಿಟ್ಟಿದ್ದೇನೆ ಎಂದು ರೀನಾ ಹರ್ಷ ವ್ಯಕ್ತಪಡಿಸಿದ್ದಾರೆ.
ರೀನಾ ಅವರ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆಯೇ ಟ್ರೋಲ್ ಹಾಗೂ ಮೀಮ್ಸ್ಗಳು ಹರಿಬಂದಿತ್ತು. ಗ್ಯಾರಂಟಿ ರೀನಾ ಅವರು ಇರುವ ಬೂತ್ನಲ್ಲಿ ನೂರಕ್ಕೆ ನೂರರಷ್ಟು ಮತದಾನ ಆಗುವುದರಲ್ಲಿ ಡೌಟೇ ಇಲ್ಲ ಎಂದೆಲ್ಲ ಕಮೆಂಟ್ಗಳನ್ನು ಮಾಡಿದ್ದರು.