ಮಹಾತ್ಮ ಗಾಂಧಿ ಅವರನ್ನು ಅಪಮಾನಿಸಿರುವ ಪ್ರಜ್ಞಾ ಸಿಂಗ್ ನ್ನು ನಾನು ಎಂದಿಗೂ ಕ್ಷಮಿಸಲಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದರು.
ಮಹಾತ್ಮ ಗಾಂಧಿ ಅವರ ಹತ್ಯೆ ಮಾಡಿರುವ ನಾಥೂರಾಮ್ ಗೋಡ್ಸೆ ಅವರು ದೇಶಭಕ್ತ ಎಂದು ಪ್ರಜ್ಞಾ ಸಿಂಗ್ ಅವರು ಹೇಳಿದ್ದರು. ಇದಕ್ಕೆ ಟೀಕೆ ಬಂದ ಬಳಿಕ ಅವರು ಕ್ಷಮೆಯಾಚಿಸಿದ್ದರು.
ಬಾಪುವನ್ನು ಅಪಮಾನಿಸಿದ ಪ್ರಜ್ಞಾ ಸಿಂಗ್ ನ್ನು ನಾನು ಕ್ಷಮೆಸಲಾರೆ. ಆಕೆ ಕ್ಷಮೆಯಾಚಿಸಿರುವುದು ಬೇರೆ ವಿಚಾರ. ಆದರೆ ನನ್ನ ಹೃದಯದಲ್ಲಿ ಆಕೆಗೆ ಕ್ಷಮೆಯಿಲ್ಲ ಎಂದು ಹೇಳಿದರು.ಇದೇ ವೇಳೆ ಎನ್ ಡಿಎ 300ಕ್ಕೂ ಅಧಿಕ ಸ್ಥಾನಗಳನ್ನು ಪಡೆದುಕೊಂಡು ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.