ಹುಡುಗಿ ಸಿಗದಿರೋದಕ್ಕೆ ಇವುಗಳೂ ಕಾರಣವಾಗಬಹುದು..!

Date:

ಕೆಲವರು ನೋಡೋಕೆ ಸಖತ್ ಆಗಿ ಇರ್ತಾರೆ. ಒಳ್ಳೆಯ ಹುಡುಗ ಕೂಡ ಆಗಿರ್ತಾರೆ. ಆದರೆ, ಒಂಟಿಯಾಗಿ ಇರುತ್ತಾರೆ. ಅದಕ್ಕೆ ಕೆಲವು ಕಾರಣಗಳೂ ಇರಬಹದು. ಆ ಕಾರಣಗಳು ತುಂಬಾ ಸರಳ ಕಾರಣ ಎನಿಸಿದರೂ ತುಂಬಾ ಗಂಭೀರ ಕಾರಣಗಳು ಎಂದರೆ ತಪ್ಪಾಗಲಾರದು.
*ಆತ್ಮ ವಿಶ್ವಾಸ ಇಲ್ಲದೇ ಇರುವುದು ಒಂಟಿಯಾಗಿರಲು ಪ್ರಮುಖ ಕಾರಣ. ಏಕೆಂದರೆ ಮನದಲ್ಲಿ ಅರಳಿದ ಪ್ರೀತಿಯನ್ನು ಹೇಳಿಕೊಳ್ಳಲು ಹಿಂಜರಿಯುವುದರಿಂದ ಪ್ರೀತಿ ನಿಮ್ಮಲ್ಲೇ ಉಳಿದುಕೊಳ್ಳಬಹುದು. ಆಕೆಯಲ್ಲೂ ಪ್ರೀತಿ ಇರಬಹುದು..ಅದು ಅರ್ಥವಾಗಲು ನೀವು ಹೇಳಿಕೊಂಡರೆ ಮಾತ್ರ ಸಾಧ್ಯ ಅಲ್ಲವೇ?
* ಇನ್ನು ಏಕಾಂಗಿತನಕ್ಕೆ ಚಂಚಲತೆ ಕೂಡ ಒಂದು ಕಾರಣ. ಏಕೆಂದರೆ ಒಮ್ಮೆ ಒಬ್ಬಳನ್ನು ಇಷ್ಟಪಟ್ಟ ಬಳಿಕ. ಕೆಲವರಿಗೆ ನೂರೆಂಟು ಯೋಚನೆಗಳು ಬರುತ್ತವೆ. ಅವಳು ನಂಗೆ ಸೂಟ್ ಆಗಲ್ಲ. ಫ್ರೆಂಡ್ಸ್ ಏನ್ ಅಂತಾರೋ? ಏನ್ ಕಥೆನೋ ಎಂಬ ಚಂಚಲತೆ ಪ್ರೀತಿಯನ್ನು ಆರಂಭದಲ್ಲೇ ಚಿವುಟಿ ಹಾಕಿ ಬಿಡುತ್ತದೆ.

* ನಿಮ್ಮಲ್ಲಿನ ಕೀಳಿರಿಮೆ ನಿಮ್ಮನ್ನು ಒಂಟಿಯಾಗಿ ಇಟ್ಟು ಬಿಡುತ್ತದೆ. ಅವಳು ನನಗಿಂಥಾ ಚೆನ್ನಾಗಿದ್ದಾಳೆ. ನನ್ನನ್ನು ಅವಳು ಒಪ್ಪಿಕೊಳ್ಳದಿದ್ದರೆ ಹೇಗೆ ಎನ್ನುವ ನಿಮ್ಮ ಕೀಳಿರಿಮೆ ನಿಮ್ಮನ್ನು ಒಂಟಿ ಮಾಡಿ ಬಿಡುತ್ತದೆ,
*ಇನ್ನು ನಿಮ್ಮ ಗೆಳೆಯರ ಗುಂಪು ಕೂಡ ನಿಮ್ಮ ಸಂಗಾತಿ ಆಯ್ಕೆಯಲ್ಲಿ ಪ್ರಮುಖವಾಗುತ್ತದೆ. ನೀವು ಇಷ್ಟಪಟ್ಟರೂ ನಿಮ್ಮ ಗೆಳೆಯರ ಗುಂಪು ಇಲ್ಲ ಸಲ್ಲದನ್ನು ತಲೆಗೆ ತುಂಬ ಬಹುದಲ್ಲವೇ? ಜೊತೆಗೆ ನಿಮ್ಮ ಡ್ರಸ್​ ಸೆನ್ಸ್​, ಟ್ಯಾಲೆಂಟ್ ಕೂಡ ಇಂಪಾರ್ಟೆಂಟ್. ಫಾರ್ಮಲ್ ಡ್ರೆಸ್​ನಲ್ಲಿ ಹುಡುಗರನ್ನು ಹುಡುಗಿಯರು ಇಷ್ಟಪಡುತ್ತಾರೆ.

Share post:

Subscribe

spot_imgspot_img

Popular

More like this
Related

ಕರಾವಳಿ–ದಕ್ಷಿಣ ಒಳನಾಡಿನಲ್ಲಿ ಮಳೆಯ ಮುನ್ಸೂಚನೆ: ಹವಾಮಾನ ಇಲಾಖೆ

ಕರಾವಳಿ–ದಕ್ಷಿಣ ಒಳನಾಡಿನಲ್ಲಿ ಮಳೆಯ ಮುನ್ಸೂಚನೆ: ಹವಾಮಾನ ಇಲಾಖೆ ಬೆಂಗಳೂರು: ರಾಜ್ಯದ ಹವಾಮಾನದಲ್ಲಿ ಮತ್ತೊಮ್ಮೆ...

ಪಿರಿಯಡ್ಸ್ ಸಮಯದಲ್ಲಿ ಯಾವ ರೀತಿಯ ಆಹಾರಗಳ ಸೇವನೆ ಮಾಡಬೇಕು? ಇಲ್ಲಿದೆ ಉತ್ತರ

ಪಿರಿಯಡ್ಸ್ ಸಮಯದಲ್ಲಿ ಯಾವ ರೀತಿಯ ಆಹಾರಗಳ ಸೇವನೆ ಮಾಡಬೇಕು? ಇಲ್ಲಿದೆ ಉತ್ತರ ಮಹಿಳೆಯರ...

ನನಗೆ ಈಗಲೇ ಅಧಿಕಾರ ಬೇಕು ಅಂತ ಇಲ್ಲ, ಪಕ್ಷಕ್ಕಾಗಿ ದುಡಿಯುತ್ತೇನೆ: ನಿಖಿಲ್ ಕುಮಾರಸ್ವಾಮಿ

ನನಗೆ ಈಗಲೇ ಅಧಿಕಾರ ಬೇಕು ಅಂತ ಇಲ್ಲ, ಪಕ್ಷಕ್ಕಾಗಿ ದುಡಿಯುತ್ತೇನೆ: ನಿಖಿಲ್...

ಹಿಟ್ಟಿನ ಹುಳಿ ರುಚಿಯನ್ನು ಕಡಿಮೆ ಮಾಡಲು ಕೆಲವು ಪರಿಣಾಮಕಾರಿ ವಿಧಾನ

ಇತ್ತೀಚಿನ ದಿನಗಳಲ್ಲಿ ಹವಾಮಾನ ಬದಲಾವಣೆ ಹಾಗೂ ಫ್ರಿಜ್ ತಾಪಮಾನ ಅಸ್ಥಿರತೆಯಿಂದಾಗಿ ಇಡ್ಲಿ–ದೋಸೆ...