ಪ್ರಪಂಚ ಎನ್ನುವುದು ಲೆಕ್ಕವಿಲ್ಲದಷ್ಟು ಅಚ್ಚರಿಗಳನ್ನು ಹೊದ್ದಿರುವ ನಿಗೂಢ! ಇಲ್ಲಿ ನಾವು- ನೀವು ಎಂದೂ ನೋಡಿರದ ಅದೆಷ್ಟೋ ಅಚ್ಚರಿಯ ಸಂಗತಿಗಳು ಇವೆ. ಅಂತಹದ್ದೇ ಒಂದು ವಿಸ್ಮಯದ ಸ್ಟೋರಿ ಇದು.
ಅದು ಜಾರ್ಜಿಯಾದ ಸೈಂಟ್ ಸೀಮನ್ಸ್ ದ್ವೀಪ. ಅವರೊಬ್ಬರು ಮಹಿಳೆ ತನ್ನ ಮಗನ ಜೊತೆ ಆ ದ್ವೀಪದ ಸಮುದ್ರ ತೀರದಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಕಣ್ಣಿಗೆ ಕಾಣುಷ್ಟೂ ದೂರದ ಅನಂತ ಸಾಗರದ ದೃಶ್ಯಗಳನ್ನು ಸವಿಯುತ್ತಾ ನಡೆದುಕೊಂಡು ಹೋಗುತ್ತಿದ್ದ ಆ ತಾಯಿ-ಮಗಗೆ ಅಲ್ಲೊಂದು ಅಚ್ಚರಿ ಕಾದಿತ್ತು..! ಅವರಿಬ್ಬರೂ ಮಾತ್ರವಲ್ಲ..ಯಾರೂ ಕಂಡು ಕೇಳರಿಯದ ಅಚ್ಚರಿ ಅದು.
ಆ ತಾಯಿಗೆ ನಡೆದುಕೊಂಡು ಹೋಗುವಾಗ ಕಾಲಿಗೆ ಏನೋ ತಾಕಿದಂತಾಗುತ್ತದೆ. ಅದು ಏನೆಂದು ನೋಡಿದೆ..ದೊಡ್ಡದಾದ ಮೀನು!
ಮೀನಿನಲ್ಲಿ ಏನಿದೆ ಅಚ್ಚರಿ ಎಂದಿರಾ? ಅಲ್ಲೇ ಇರುವುದು ವಿಸ್ಮಯ… ಆ ಮೀನು ಅಂತಿಂಥಾ ಮೀನಲ್ಲ. ಅದು ಮಾನವನ ಹಲ್ಲುಗಳಂತೆ ಇರುವ ಹಲ್ಲುಗಳನ್ನು ಹೊಂದಿದ್ದ ಮೀನು. ಈ ಮೀನು ಸುಮಾರು 76 ಸೆಂಟಿಮೀಟರ್ ಬೆಳೆಯತ್ತದೆಯಂತೆ. ಗಲ್ಫ್ , ಅಟ್ಲಾಂಟಿಕ್ ,ಕರಾವಳಿ ಭಾಗದಲ್ಲಷ್ಟೇ ಈ ಮೀನು ಕಾಣುತ್ತದೆ. ಅದೂ ಸಹ ತುಂಬಾ ಅಪರೂಪ.
ಕಾಲಿಗೆ ತಾಕಿದ ಆ ಮೀನನ್ನು ನೋಡಿದ ತಾಯಿ ಮಗ ಆಶ್ಚರ್ಯಚಕಿತರಾಗಿದ್ದಾರೆ. ಈಗ ಆ ಮೀನಿನ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಓಡಾಡುತ್ತಿದೆ.
ಹೀಗೆ ಪ್ರಪಂಚ ಎನ್ನುವುದು ಅನೇಕ ವಿಸ್ಮಯ, ಅಚ್ಚರಿಗಳ ನಿಗೂಢ ತಾಣ ಎಂದರೆ ತಪ್ಪಾಗಲಾರದು.