“ಭಾರತವನ್ನು ತುಂಡು ತುಂಡಾಗಿ ಕತ್ತರಿಸುತ್ತೇವೆ. ಭಾರತವನ್ನು ಬರ್ಬಾದ್ ಮಾಡಿಯೇ ತೀರುತ್ತೇವೆ, ಅಫ್ಜಲ್ ಗುರು ಮತ್ತೆ ಹುಟ್ಟಿ ಬಾ, ಅಫ್ಜಲ್ ಗುರು ನೀನೊಬ್ಬ ಹುತಾತ್ಮ. ನಿನ್ನನ್ನು ಕೊಂದವರನ್ನು ನಾವು ಸುಮ್ಮನೆ ಬಿಡುವುದಿಲ್ಲಾ. ಮನೆ-ಮನೆಯಲ್ಲಿ ಅಫ್ಜಲ್ ಹುಟ್ಟಿಬರಲಿ….”. ಈ ಘೋಷಣೆಗಳನ್ನು ಎಲ್ಲೋ ಪಾಕಿಸ್ಥಾನಿ ಬೀದಿಗಳಲ್ಲೋ, ಅಫ್ಘಾನ್ ನ ಗುಡ್ಡದಲ್ಲೋ ಭಯೋತ್ಪಾದಕರು ಕೂಗಿದ್ದರೆ ತಲೆತಿರುಗಿದ ಮತಾಂಧರು ಎಂದು ಸುಮ್ಮನಿರಬಹುದಿತ್ತು. ಆದರೆ ಈ ಘೋಷಣೆಗಳನ್ನು ಕೂಗಿದ್ದು , “ಜನನಿ ನನ್ಮ ಭೂಮಿಸ್ಚ ಸ್ವರ್ಗಾದಪಿ ಗರೀಯಸಿ” ಎನ್ನುವ ಪುಣ್ಯಭೂಮಿಯಲ್ಲಿ, ನಮ್ಮ-ನಿಮ್ಮ ತೆರಿಗೆಯ ಹಣದಲ್ಲಿ ಉಚಿತವಾಗಿ ಶಿಕ್ಷಣ ಮತ್ತು ವಸತಿ ಊಟಗಳನ್ನು ಪಡೆಯುತ್ತಿರುವ ದೆಹಲಿಯ ಜವಹರಲಾಲ್ ನೆಹರು ವಿಶ್ವವಿದ್ಯಾಲಯದ ‘ಭಾರತೀಯ’ ವಿಧ್ಯಾರ್ಥಿಗಳು. ಹೇಗೆ ಸ್ವಾಮಿ ಸುಮ್ಮನಿರಲಾಗುತ್ತದೆ. ಈ ಘಟನೆ ದೇಶದೊಳಗಿನ ಶತ್ರುಗಳನ್ನು ಪರಿಚಯಿಸುವುದರೊಂದಿಗೆ,ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶದ ಮಾನವನ್ನು ಸಹ ಹರಾಜು ಹಾಕಿದೆ.
ಅಷ್ಟಕ್ಕೂ ಅಂದು ಜವಹಾರ್ ಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ನಡೆದಿದ್ದೇನು?
ಫೆಬ್ರವರಿ ಒಂಬತ್ತು 2016, ಇಡೀ ದೇಶವೇ ಸಿಯಾಚಿನ್ ಗಡಿಯಲಿ ದೇಶಕಾಯುತ್ತಿರುವಾಗ, ಹಿಮಪಾತಕ್ಕೆ ಸಿಲುಕಿ ಹುತಾತ್ಮರಾದ ಅಮರ ಯೋಧರಿಗಾಗಿ ಕಂಬನಿ ಮಿಡಿಯುತ್ತಿದ್ದರೆ, ಸಾಂಸ್ಕೃತಿಕ ಕಾರ್ಯಕ್ರಮವೊಂದನ್ನು ನೆಡೆಸುತ್ತೇವೆಂದು ಅನುಮತಿ ಪಡೆದುಕೊಳ್ಳುವ ಜೆ.ಎನ್.ಯು ವಿಧ್ಯಾರ್ಥಿಗಳು ಉಮರ್ ಖಾಲೀದ್ ಎಂಬ ವಿಧ್ಯಾರ್ಥಿಯ ನೇತ್ರೃತ್ವದಲ್ಲಿ ದೇಶ ವಿರೋಧಿ ಘೋಷಣೆಗಳನ್ನು ಕೂಗಲಾರಂಭಿಸುತ್ತಾರೆ. ಅದೇ ಕ್ಯಾಂಪಸ್ ನಲ್ಲಿದ್ದ ವಿಧ್ಯಾರ್ಥಿ ಪರಿಷತ್ ವಿಧ್ಯಾರ್ಥಿಗಳ ವಿರೋಧವನ್ನು ಲೆಕ್ಕಿಸದೆ, ಪುಂಖಾನು-ಪುಂಖವಾಗಿ ದೇಶ ವಿರೋಧಿ ಘೋಷಣೆಗಳನ್ನು ಕೂಗುವುದರ ಜೊತೆಗೆ, ಸಂಸತ್ ಮೇಲಿನ ದಾಳಿಯ ರೂವಾರಿಯಾಗಿ ಗಲ್ಲು ಶಿಕ್ಷೆಗೆ ಗುರಿಯಾದ ಭಯೋತ್ಪಾದಕ ಅಫ್ಜಲ್ ಗುರು ಎಂಬ ಉಗ್ರನನ್ನು ಹುತಾತ್ಮನೆನ್ನುತ್ತಾ , ಮನೆ ಮನೆಯಲ್ಲಿ ಅಫ್ಜಲ್ ಗುರು ಹುಟ್ಟಿಬರಲಿ, ಭಾರತವನ್ನು ಬರ್ಬಾದ್ ಮಾಡಲಿ ಎಂಬ ಘೋಷಣೆ ಕೂಗುತ್ತಾರೆ. ಇಷ್ಟೆಲ್ಲಾ ನಡೆಯುತ್ತಿದ್ದರೂ ದೆಹಲಿ ಪೋಲೀಸರುಮಾತ್ರ ನಮಗೂ ಇದಕ್ಕೂ ಸಂಬಂಧವಿಲ್ಲವೆಂಬಂತೆ ಮೌನವಾಗಿರುತ್ತಾರೆ. ಮರುದಿನ ಈ ಸುದ್ದಿ ಪತ್ರಿಕೆಗಳಲ್ಲಿ ಬಿತ್ತರವಾಗಿದ್ದೆ ತಡ. ಇಡೀ ದೇಶವೇ ಬೆಚ್ಚಿ ಬೀಳುತ್ತದೆ.ಇಡೀ ದೇಶ ಪಕ್ಷ ಭೇದ, ಜಾತಿ ಭೇದ ಮರೆತು ಜೆ.ಎನ್.ಯು ವಿಧ್ಯಾರ್ಥಿಗಳಿಗೆ ಛೀಮಾರಿ ಹಾಕಲಾರಂಭಿಸುತ್ತದೆ. ತಕ್ಷಣ ಕಾರ್ಯಪ್ರವೃತವಾದ ಕೇಂದ್ರ ಸರಕಾರ, ದೊರೆತ ವೀಡಿಯೋ ಮತ್ತು ಫೋಟೋಗಳ ಆಧಾರದ ಮೇಲೆ ಅಂದು ದೇಶವಿರೋಧಿ ಘೋಷಣೆ ಕೂಗಿದ ವಿಧ್ಯಾರ್ಥಿಗಳನ್ನು ಗುರುತಿಸಿ ಬಂಧಿಸುವಂತೆ ಆದೇಶಿಸುತ್ತದೆ. ತನಿಖೆಯ ಮೊದಲ ಹಂತವಾಗಿ ದೇಶವಿರೋಧಿ ಘೋಷಣೆ ಕೂಗಿದ ಕೆಲವರನ್ನು ಗುರುತಿಸಿ, ಅದರಲ್ಲಿ ಮೊದಲಿಗೆ ಕನಯ್ಯ ಎಂಬ ವಿಧ್ಯಾರ್ಥಿಯನ್ನು ಬಂಧಿಸಲಾಗುತ್ತದೆ. ಆಗ ಪ್ರಾರಂಭವಾಗುತ್ತದೆ ನೋಡಿ ಹೊಲಸು ರಾಜಕೀಯ.
2014ರ ಪ್ರಧಾನಿ ಅಭ್ಯರ್ಥಿ ಎಂದೇ ಬಿಂಬಿಸಿಕೊಂಡಿದ್ದ ಒಂದು ಪಕ್ಷದ ನೇತಾರನೊಬ್ಬ ಸೀದಾ ಜೆ.ಎನ್.ಯು ಗೆ ಹೋಗಿ ‘ನಾನು ನಿಮ್ಮೊಡನಿದ್ದೇನೆ, ಕನಯ್ಯನನ್ನು ಬಂಧಿಸಿರುವುದು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಮಾಡಿದ ಅಪಮಾನ, ಕೇಂದ್ರ ಸರಕಾರದ ವಿರುದ್ಧ ಹೋರಾಡೋಣ” ಎನ್ನುತ್ತಾ ಉರಿಯುವ ಬೆಂಕಿಗೆ ತುಪ್ಪ ಸುರಿಯುತ್ತಾನೆ. ಇದನ್ನೇ ಕಾಯುತ್ತಿದ್ದ ಅವನ ಹಿಂಬಾಲಕರು, ಎಂಜಲು ಕಾಸಿಗೆ ಕೈ ಚಾಚುವ ಕೆಲವು ಪತ್ರಕರ್ತರು , ಬಟ್ಟಲು ಬಿರಿಯಾನಿ ತೊಟ್ಟು ಸರಾಯಿಗೆ ಬಾಯಿಕಳೆಯುವ ಕೆಲವು ಬುದ್ಧಿಜೀವಿಗಳು ಕೂಡ ದೇಶದ್ರೋಹಿಗಳ ಪರ ನಿಂತು ಬಿಡುತ್ತಾರೆ. ಯಾವ ದೇಶದ್ರೋಹಿಗಳನ್ನು, ಪಕ್ಷಭೇದ ಮರೆತು ಶಿಕ್ಷಿಸಬೇಕಾಗಿತ್ತೋ ಅಂತಹವರ ಪರವಾಗಿ ನಿಂತು ಬಿಡುತ್ತದೆ ಒಂದು ವರ್ಗ. ಕೊಳಕು ರಾಜಕೀಯಕ್ಕಾಗಿ ದೇಶದ ಹಿತಾಸಕ್ತಿಯೇ ಬಲಿಯಾಗಿಬಿಡುತ್ತದೆ. ಅಂದ ಹಾಗೆ ಅಂತಹ ದೇಶದ್ರೋಹಿಗಳಿಗೆ ಬೆನ್ನೆಲುಬಾಗಿ ನಿಂತ ನಾಯಕನ ಹೆಸರು ರಾಹುಲ್ ಗಾಂಧಿ.
ರಾಹುಲ್ ಗಾಂಧಿ ಮತ್ತವರ ಬೆಂಬಲಿಗರು ಜೆ.ಎನ್.ಯು ದೇಶದ್ರೋಹಿಗಳನ್ನು ಬೆಂಬಲಿಸಲು, ಅಸ್ತ್ರವಾಗಿ ಬಳಸಿದ್ದು, ಅಭಿವ್ಯಕ್ತಿ ಸ್ವಾತಂತ್ರ್ಯ ಹರಣ ಎಂಬ ಅಸ್ತ್ರವನ್ನು. ಹಾಗಾದರೆ ಏನಿದು ಅಭಿವ್ಯಕ್ತಿ ಸ್ವಾತಂತ್ರ್ಯ, ನಮ್ಮ ಸಂವಿಧಾನ ಏನು ಹೇಳುತ್ತದೆ ಇದರ ಬಗ್ಗೆ ? ನಮ್ಮ ಸಂವಿಧಾನದ 19(1) ವಿಧಿಯಲ್ಲಿ ” ಪ್ರತಿಯೊಬ್ಬ ದೇಶವಾಸಿಯು ತನಗೆ ಅನಿಸಿದನ್ನು ಮುಕ್ತವಾಗಿ ಮತ್ತು ಸ್ಪಷ್ಟವಾಗಿ ಅಭಿವ್ಯಕ್ತಿಸುವ ಸ್ವಾತಂತ್ರ್ಯವನ್ನು ಹೊಂದಿದ್ದಾನೆ , ಯವುದೇ ಅಧಿಕಾರ ಅಥವಾ ಬಲ ಇದನ್ನು ಹತ್ತಿಕ್ಕಲು ಸಾಧ್ಯವಿಲ್ಲ ಮತ್ತು 19 ನೇ ವಿಧಿಯಲ್ಲಿ ತಿಳಿಸಿರುವ ಉಳಿದ ಐದು ಸ್ವಾತಂತ್ರ್ಯಗಳ ಜೊತೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಸಹ ಉಳಿದ ನಾಗರೀಕರು ಗೌರವಿಸಬೇಕಾಗುತ್ತದೆ. ತಪ್ಪಿದಲ್ಲಿ ಕಾನೂನಿನ ಪ್ರಕಾರ ಶಿಕ್ಷೆಗೆ ಗುರಿಪಡಿಸುವುದು” . ಇದು ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶದ ಜನರಿಗೆ ನಮ್ಮ ಸಂವಿಧಾನ ನೀಡಿರುವ ಬಹುದೊಡ್ಡ ಕೊಡುಗೆ. ಹಾಗಾದರೆ ಅಭಿವ್ಯಕ್ತಿ ಸ್ವಾತಂತ್ರದಡಿಯಲ್ಲಿ ಯಾರು ಯೇನು ಬೇಕಾದರು ಮಾತನಾಡಬಹುದೇ..? ಖಂಡಿತ ಇಲ್ಲಾ, ರಾಹುಲ್ ಗಾಂಧಿಯಂತಹ ನಾಯಕರು ಕೇವಲ 19(1)ವಿಧಿಯನ್ನು ಬಂಡವಾಳವಾಗಿಸಿಕೊಂಡಿದ್ದಾರಷ್ಟೇ. ಸಂವಿಧಾನ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕೊಡುವುದರ ಜೊತೆಗೆ ಕೆಲವು ಷರತ್ತುಗಳನ್ನು ಸಹ ಹಾಕಿದೆ. ಸಂವಿಧಾನದ 19(2) ವಿಧಿ ಹೇಳುತ್ತದೆ…”ಒಂದು ವೇಳೆ ಯಾವುದೇ ಮಾತು ಅಥವಾ ನಿಲುವು, ರಾಜ್ಯದ ಹಿತಾಸಕ್ತಿಗೆ ಅಥವಾ ಭದ್ರತೆಗೆ ಧಕ್ಕೆ ಬರುವಂತಿದ್ದರೆ, ಅಂತರಾಷ್ಟೀಯ ಸ್ನೇಹ ಸಬಂಧಗಳಿಗೆ ತೊಡಕಾಗುವಂತಿದ್ದರೆ, ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿದ್ದರೆ , ನ್ಯಾಯಾಂಗ ನಿಂದನೆಯಂತಹ ಸಂಧರ್ಭಗಳಲ್ಲಿ, ಮಾನನಷ್ಟ ಪ್ರಕರಣ ಸಾಭೀತಾದಲ್ಲಿ, ಭಾರತದ ಸಾರ್ವಭೌಮತೆ ಮತ್ತು ಸಮಗ್ರತೆಗೆ ದಕ್ಕೆ ತರುವಂತದ್ದಾಗಿದ್ದರೆ ಅಂತಹ ಸಂಧರ್ಭಗಳನ್ನು ಅಭಿವ್ಯಕ್ತಿ ಸ್ವಾತಂತ್ರ್ಯದಡಿಗೆ ತರದೆ, ಪ್ರಕರಣದ ಅನುಸಾರ ತನಿಖೆ ಮತ್ತು ಶಿಕ್ಷೆಗೆ ಅವಕಾಶವಿದೆ”. ಇದು ಸ್ವಾಮಿ ನಮ್ಮ ಸಂವಿಧಾನ ಹೇಳಿರುವುದು.., ಅಂದಮೇಲೆ, ಅಂದು ಜೆ.ಎನ್.ಯು ವಿಧ್ಯಾರ್ಥಿಗಳು ಅಭಿವ್ಯಕ್ತಿಸಿದ ವಿಷಯಗಳೆಲ್ಲವೂ ನಮ್ಮ ಸಂವಿಧಾನದ ಪ್ರಕಾರ ಅಪರಾಧವೇ ಆಗಿದೆ. ರಾಹುಲ್ ಗಾಂಧಿ ಮತ್ತು ಬುದ್ಧಿಜೀವಿಗಳು ನಮ್ಮ ಸಂವಿಧಾನಕ್ಕಿಂತ ದೊಡ್ಡವರೇ..? ಇಂತಹ ಕೀಳುಮಟ್ಟದ ರಾಜಕಾರಣಿಗಳು ಮತ್ತು ಅವರನ್ನು ಬೆಂಬಲಿಸುವವರಿಂದಲೇ ಸ್ವಾಮಿ, ಕ್ಷಮತೆ ಇದ್ದರೂ ಭಾರತ ಸ್ವತಂತ್ರಗಳಿಸಿ ಅರವತ್ತು ವರುಷ ಕಳೆದರೂ, ಜಗತ್ತಿನ ಅಗ್ರಗಣ್ಯ ದೇಶಗಳ ಸಾಲಿನಲ್ಲಿ ನಿಲ್ಲದಿರುವುದು.
ಇಂದು ದೇಶದ ವಿರುದ್ಧ ಮಾತನಾಡುತ್ತಿರುವವರನ್ನು, ದೇಶದಲ್ಲಿ ಅಸಹಿಷ್ಣುತೆ ಇದೆ ಎಂಬುವವರನ್ನು ಸಿರಿಯಾದಂತಹ ಇಸ್ಲಾಮಿಕ್ ದೇಶಗಳಿಗೊಮ್ಮೆ ಕರೆದುಕೊಂಡು ಹೋಗಿ ಬರಬೇಕು. ಕಳೆದ ಹತ್ತು ತಿಂಗಳಿನಿಂದ ಅಲ್ಲಿನ ನಾಗರೀಕರಿಗೂ ಸರಕಾರಕ್ಕೂ ಘರ್ಷಣೆ ನಡೆಯುತ್ತಿದೆ. ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು ಮತ್ತು ವಿದ್ಯುತ್ ಕೇಳಿದಕ್ಕೆ, ಕೇಳಿದವರ ತಲೆಗಳನ್ನೇ ಉರುಳಿಸುತ್ತಿದೆ ಇಸ್ಲಾಮಿಕ್ ಸ್ಟೇಟ್. ಒಂದು ಕಾಲದಲ್ಲಿ ತೈಲ ಮಾರಾಟದ ಶ್ರೀಮಂತಿಕೆಯಿಂದ ಮೆರೆಯುತ್ತಿದ್ದ ಸಿರಿಯಾದ ಜನರು ಇಂದು ಉಗ್ರರ ಅಟ್ಟಹಾಸ ಹಾಗೂ ಸರಕಾರದ ನಿರ್ಲಕ್ಷ್ಯದಿಂದ ಅನ್ನ, ನೀರು ಸಿಕ್ಕದೆ ನಾಯಿ -ಬೆಕ್ಕುಗಳನ್ನು ತಿಂದು ಜೀವನ ಸಾಗಿಸುತ್ತಿದ್ದಾರೆ. ಕಳೆದ ಹತ್ತು ತಿಂಗಳಿಂದ ವಿದ್ಯುತ್ ಪೂರೈಕೆಯಿಲ್ಲ. ಅಪೌಷ್ಟಿಕತೆಯಿಂದ ನಿತ್ಯ ಸಾವಿರಾರು ಮಕ್ಕಳು, ಮಹಿಳೆಯರು ಬಳಲುತ್ತಿದ್ದಾರೆ. 2014ರ ಆರಂಭದಿಂದಲೂ 2 ಸಾವಿರ ಖೈದಿಗಳು ಮರಣಿಸಿದ್ದಾರೆ. 4 ಲಕ್ಷಕ್ಕೂ ಹೆಚ್ಚು ಜನ ಹಸಿವಿನಿಂದ ಸಾಯುತ್ತಿದ್ದಾರೆ. ಗಾಯದ ಮೇಲೆ ಬರೆ ಎಳೆದಂತೆ ಯಥೇಛ್ಚ ಹಿಮಪಾತ ಬೇರೆ. ಎಲೆ, ಹುಲ್ಲುಗಳನ್ನು ತಿಂದು ಬದುಕುತ್ತಿರುವವರು ಇದ್ದಾರೆ. ನಮ್ಮ ಕನಯ್ಯ ಅಥವಾ ಖಲೀದ್ ಗೆ ಈ ಪರಿಸ್ಥಿತಿ ಬಂದಿದೆಯೇ ? ಇಲ್ಲ ಅಲ್ಲವೇ, ಯಾರದೋ ತೆರಿಗೆ ದುಡ್ಡಿನಲ್ಲಿ ಮೋಜುಮಾಡುತ್ತಿರುವರಿಗೇನು ಗೊತ್ತು ಸ್ವಾತಂತ್ರ್ಯ ಎಂದರೇನೆಂದು, ಸಮಾನತೆ ಅರ್ಥವಾದರೂ ಗೊತ್ತಾ ಈ ದ್ರೋಹಿಗಳಿಗೆ. ಥೂ ನಾಚಿಕೆಯಾಗಬೇಕು ಇವರ ಜನ್ಮಕ್ಕೆ. ದೇಶದ್ರೋಹಿಗಳೆ ನಿಮಗೆ ಭಾರತ ಇಷ್ಟವಾಗದಿದ್ದಲ್ಲಿ ದಯವಿಟ್ಟು ಭಾರತವನ್ನು ಬಿಟ್ಟು ತೊಲಗಿ.
ಇನ್ನು, ಜೆ.ಎನ್.ಯು ಬಗ್ಗೆ ಹೇಳಬೇಕೆಂದರೆ ಅಲ್ಲಿ ಇಂತಹ ದೇಶದ್ರೋಹಿ ಕೆಲಸಗಳು ನಡೆಯುತ್ತಿರುವುದು ಇದೇ ಮೊದಲಲ್ಲ. ಸುಮಾರು ಇಪ್ಪತ್ತು ವರ್ಷಗಳ ಹಿಂದೆ, ಅಂದರೆ ಎರಡನೇ ಫೆಬ್ರವರಿ 1996 ರಂದು ಜೆ.ಎನ್.ಯು ನ ಅಂದಿನ ಉಪಕುಲಪತಿಗಳಾಗಿದ್ದ ಬದಲ್ ಘನ ಚಕ್ರವರ್ತಿಯವರು ಅಂದಿನ ಕೇಂದ್ರ ಸರಕಾರಕ್ಕೊಂದು ಎರಡು ಪುಟಗಳ ವಿಸ್ತೃತ ಪತ್ರಬರೆದಿರುತ್ತಾರೆ. ಆ ಎರಡು ಪುಟಗಳ ಪತ್ರದಲ್ಲಿ, ವಿಶ್ವವಿದ್ಯಾಲಯದಲ್ಲಿ ಪಾಕಿಸ್ಥಾನಿ ಏಜಂಟ್ ಗಳು ಆಗಾಗ್ಗೆ ಕಾಣಿಸಿಕೊಳ್ಳುತ್ತಿರುವುದರ ಮತ್ತು ದೇಶದ್ರೋಹಿ ಚಟುವಟಿಕೆಗಳು ಹೆಚ್ಚುತ್ತಿರುವ ಘಟನೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿರುತ್ತಾರೆ..ಆದರೆ ಅಂದಿನ ಕೇಂದ್ರ ಸರ್ಕಾರ ಮಾತ್ರ ಪತ್ರವನ್ನು ಮಡಚಿ ಮೂಲೆಗಿಟ್ಟು ಜಾಣಕುರುಡುತನ ತೋರಿಸುತ್ತದೆ. ಒಂದುವೇಳೆ ಅಂದು ಪಿ.ವಿ.ನರಸಿಂಹ ರಾವ್ ಪರಿಸ್ಥಿತಿಯ ಗಂಭೀರತೆ ಅರಿತು ಬದಲ್ ರವರಿಗೆ ಸಹಾಯ ಮಾಡಿರುತ್ತಿದ್ದರೇ ಇಂದು ಈ ಪರಿಸ್ಥಿತಿಯಿರುತ್ತಿರಲಿಲ್ಲ ಜೆ.ಎನ್.ಯುನಲ್ಲಿ. ಅಂದಿನ ಸರ್ಕಾರದ ದಿವ್ಯನಿರ್ಲಕ್ಷ್ಯದ ಪರಿಣಾಮವೇ ಇಂದಿನ ದುರಂತ. ಇಲ್ಲಿನ ಬಹುತೇಕ ವಿಧ್ಯಾರ್ಥಿಗಳನ್ನು ನೋಡಿದರೆ ಖಂಡಿತ ಅವರು ಭಾರತೀಯರೆಂದು ಹೇಳಲಾಗುವುದಿಲ್ಲ. ಅಷ್ಟರ ಮಟ್ಟಿಗೆ ಭಾರತ ದ್ವೇಷಿಗಳಾಗಿದ್ದಾರೆ ಅವರು. ಅವರ ಹಿಂದೆ ಅಂತಹುದೇ ಮನಸ್ಥಿತಿಯ ಹಲವಾರು ಪ್ರಾಧ್ಯಾಪಕರಿದ್ದಾರೆಂದರೆ ,ಭವಿಷ್ಯದಲ್ಲಿ ಎಂತಹ ಅನಾಹುತವೊಂದು ಭಾರತವನ್ನು ಎದುರು ನೋಡುತ್ತಿದೆಯೆಂಬುದರ ಅರಿವಾಗುತ್ತದೆ.
ಇನ್ನು, ಇವರು ಹುತಾತ್ಮನೆನ್ನುತಿರುವ ಅಫ್ಜಲ್ ಗುರುವಾದರು ಯಾರು? ದೇಶಭಕ್ತನೇ ? ಸ್ವಾತಂತ್ರ್ಯ ಹೋರಾಟಗಾರನೇ ? ದೇಶಕ್ಕಾಗಿ ಪ್ರಾಣತೆತ್ತ ಮಹಾನ್ ಯೋಧನೇ? ಅಥವಾ ಕನಿಷ್ಠ ಒಬ್ಬ ದೇಶಭಕ್ತನೇ…? ಖಂಡಿತ ಅಲ್ಲ. ಇವರು ಹುತಾತ್ಮನೆನ್ನುತ್ತಿರುವ ಅಫ್ಜಲ್ ಒಬ್ಬ ಭಯೋತ್ಪಾದಕ, ಒಬ್ಬ ಮತಾಂಧ. ಡಿಸೆಂಬರ್ 13 2001ರ ಸಂಸತ್ ದಾಳಿಯ ರೂವಾರಿ. 2001ರಲ್ಲೇ ಈತನನ್ನು ಬಂಧಿಸಲಾಗುತ್ತದೆ. 2002 ಡಿಸೆಂಬರ್ 18ರಂದು ಈತ ಸ್ವತಃ ಸಂಸತ್ ದಾಳಿಯಲ್ಲಿ ತನ್ನ ಪಾಲುದಾರಿಕೆಯನ್ನು ಒಪ್ಪಿಕೊಂಡ ಹಿನ್ನಲೆಯಲ್ಲಿ, ಪೋಟಾ ಕಾಯಿದೆಯಡಿ ಈತನಿಗೆ ಮರಣದಂಡನೆಯನ್ನು ವಿಧಿಸಲಾಗುತ್ತದೆ. ಅಫ್ಜಲ್ ನ ಹೆಂಡತಿ ಪ್ರಯತ್ನವೆಂಬಂತೆ ರಾಷ್ತ್ರಪತಿಗಳಿಗೆ ಕ್ಷಮಾ ಅರ್ಜಿಯನ್ನು ಸಲ್ಲಿಸುತ್ತಾಳೆ. ಆದರೆ ಅಂದಿನ ರಾಷ್ಟ್ರಪತಿಗಳು ಕ್ಷಮಾ ಅರ್ಜಿಯನ್ನು ತಿರಸ್ಕರಿಸುವುದರ ಮೂಲಕ ಅಫ್ಜಲ್ ಎಂಬ ದೇಶ ದ್ರೋಹಿ ಉಗ್ರನಿಗೆ ಮರಣದಂಡನೆ ಕಾಯಂ ಆಗುತ್ತದೆ. 2013 ಫೆಬ್ರವರಿ 09ರಂದು ದೆಹಲಿಯ ತಿಹಾರ್ ಜೈಲಿನಲ್ಲಿ ಉಗ್ರನನ್ನು ಗಲ್ಲಿಗೇರಿಸಲಾಗುತ್ತದೆ. ಈಗ ಹೇಳಿ ಅಫ್ಜಲ್ ಉಗ್ರನೋ, ಹುತಾತ್ಮನೋ?
ಇಲ್ಲಿ ಇನ್ನೊಂದು ಕುತೂಹಲಕಾರಿ ವಿಷಯವಿದೆ. 2013ರಲ್ಲಿ ಅಫ್ಜಲ್ ಗೆ ಗಲ್ಲು ಶಿಕ್ಷೆಯನ್ನು ಕಾಯಂಗೊಳಿಸಿದ್ದು ಅಂದು ಕೇಂದ್ರದಲ್ಲಿದ್ದ ಕಾಂಗ್ರೆಸ್ಸ್ ಸರ್ಕಾರ. ಕ್ಷಮಾ ಅರ್ಜಿಯನ್ನು ತಿರಸ್ಕರಿಸಿದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಕೂಡ ಕಾಂಗ್ರೆಸ್ಸಿನವರೇ..ಹಾಗಾದರೆ ಇಂದು ಜೆ.ಎನ್.ಯು ವಿಧ್ಯಾರ್ಥಿಗಳು ಅಫ್ಜಲ್ ಕೊಂದವರನ್ನು ಸುಮ್ಮನೇ ಬಿಡುವುದಿಲ್ಲವೆನ್ನುತ್ತಿರುವುದು ಕಾಂಗ್ರೆಸ್ಸಿಗರನ್ನೇ. ಆದರೆ ಕೇಂದ್ರದಲ್ಲಿ ಬೇರೆಯೊಂದು ಪಕ್ಷ ಅಧಿಕಾರದಲ್ಲಿದೆ ಎಂಬ ಏಕೈಕ ಕಾರಣಕ್ಕೆ ಜೆ,ಎನ್,ಯು ವಿಧ್ಯಾರ್ಥಿಗಳ ಬೆಂಬಲಕ್ಕೆ ನಿಂತಿದ್ದಾರೆ ಕಾಂಗ್ರೆಸ್ಸ್ ನೇತಾರರು. ಇದಕ್ಕಿಂತ ಉದಾಹರಣೆ ಬೇಕೆ ಇವರ ಹೊಲಸು ರಾಜಕಾರಣಕ್ಕೆ. ಸ್ವಾರ್ಥಕ್ಕಾಗಿ ದೇಶವನ್ನೇ ಮಾರುವ ಮಟ್ಟಿಗಿಳಿದು ಬಿಟ್ಟರಾ ಈ ರಾಜಕಾರಣಿಗಳು ?. ಅದು ಬಿ.ಜೆ.ಪಿ ಇರಲಿ, ಕಾಂಗ್ರೆಸ್ಸ್ ಇರಲಿ ಅಥವಾ ಇನ್ಯಾವುದೇ ಪಕ್ಷವಿರಲಿ ದೇಶದ ಹಿತ ಮೊದಲಾಗಬೇಕು.
ಹಾಗೇ ನೋಡಿದಲ್ಲಿ , ಹಿಂದಿನ ಪೀಳಿಗೆಗಳಿಗೆ ಹೋಲಿಸಿಕೊಂಡಲ್ಲಿ ಇಂದಿನ ಪೀಳಿಗೆಯವರಲ್ಲಿ ದೇಶಭಕ್ತಿ ಮತ್ತು ದೇಶಪ್ರೇಮ ಬಹಳ ಕಡಿಮೆಯಿದೆ. ಅವರ ದೇಶ ಪ್ರೇಮವೆನಿದ್ದರೂ ಫೇಸ್ ಬುಕ್ ನಲ್ಲಿ ಸ್ಟೇಟಸ್ ಹಾಕುವಲ್ಲಿಗಷ್ಟೇ ಸೀಮಿತ. ಇದಕ್ಕೆ ಕಾರಣಗಳು ಹಲವಾರಿದ್ದರೂ , ಮುಖ್ಯವಾಗಿ ಕಾಣುವುದು, ಬೋಧಕರ ಮತ್ತು ಪೋಷಕರ ನಿರ್ಲಕ್ಷ್ಯ. ಬಾಲ್ಯದಲ್ಲಿ ಕನಯ್ಯ ಮತ್ತು ಖಲೀದ್ ಗೆ ಪೋಷಕರು ಶಿವಾಜಿ ಮತ್ತು ಅಬ್ದುಲ್ ಕಲಾಂರ ಕಥೆಗಳನ್ನು ಹೇಳಿ ಬೆಳಸಿದ್ದಲ್ಲಿ, ಹರೆಯದಲ್ಲಿ ಪಾಕಿಸ್ಥಾನಿ ಏಜೆಂಟ್ ಗಳು ಹೇಳಿದ ಬಾಬರ್, ಅಲೆಗ್ಸಾಂಡರ್ ನ ಕಥೆಗಳಿಗೆ ಮಾರುಹೋಗಿ ಅಫ್ಜಲ್ ನಂತಹ ಉಗ್ರನನ್ನ ಮಾದರಿಯಾಗಿ ಆರಿಸಿಕೊಳ್ಳುತ್ತಿರಲಿಲ್ಲ. ಇನ್ನು, ಶಾಲಾ-ಕಾಲೇಜುಗಳಲ್ಲಿ ಕೂಡ ಶಿಕ್ಷಕರು ದೇಶ ಭಕ್ತರ , ದೇಶಕ್ಕಾಗಿ ದುಡಿದು ಮಡಿದವರ ಕಥೆಗಳನ್ನು ವಿಧ್ಯಾರ್ಥಿಗಳ ಮುಂದಿಟ್ಟು ಅವರಿಗೆ ಸರಿಯಾದ ಮಾದರಿ ವ್ಯಕ್ತಿಗಳನ್ನ ಆಯ್ದುಕೊಳ್ಳಲು ಸಹಕರಿಸಬೇಕು. ಆದರೆ ಇಂದಿನ ಶಿಕ್ಷಣ ವ್ಯವಸ್ಥೆಯನ್ನು ನೋಡಿದರೆ ಅದು ಮರೀಚಿಕೆಯೇ ಅನಿಸುತ್ತದೆ. ಏಕೆಂದರೆ, ಕೇಂದ್ರ ಶಿಕ್ಶಣ ಮಂಡಳಿಯ ನಾಲ್ಕನೇ ತರಗತಿಯ ಪಠ್ಯ-ಪುಸ್ತಕದಲ್ಲಿ ಕಾಶ್ಮೀರವನ್ನು ಉಲ್ಲೇಖಿಸುತ್ತಾ..ಕಾಶ್ಮೀರ ಭಾರತ ಪೀಡಿತ ಪ್ರದೇಶವೆಂದು ಬರೆಯುತ್ತಾರೆ. ಇದನ್ನು ಓದುವ ಮಕ್ಕಳು ಇನ್ನು ಹೇಗೆ ತಾನೇ ದೇಶ ಭಕ್ತರಾಗಲು ಸಾಧ್ಯ ? ನಮ್ಮ ಶಿಕ್ಷಣ ವ್ಯವಸ್ಥೆ ಇನ್ನಷ್ಟು ಕನಯ್ಯ ,ಖಾಲೀದ್ ರನ್ನು ಹುಟ್ಟುಹಾಕಲು ಹೊರಟಂತಿದೆ.
ಆಗುವುದೆಲ್ಲಾ ಒಳ್ಳೆಯದಕ್ಕೆ ಎಂಬಂತೆ, ಜೆ.ಎನ್.ಯು ವಿವಾದ ದೇಶದ್ರೋಹಿಗಳನ್ನು ಗುರುತಿಸುವಲ್ಲಿ ಮತ್ತು ದೇಶಪ್ರೇಮಿಗಳನ್ನು ಒಂದುಗೂಡಿಸುವಲ್ಲಿ ಯಶಸ್ವಿಯಾಗಿದೆ. ಉಮರ್ ಗೆ ಸೆರೆವಾಸ ಮುಂದುವರಿದಿದ್ದರೆ, ಕನಯ್ಯನಿಗೆ ದೆಹಲಿ ಹೈ-ಕೋರ್ಟ್ ಛೀಮಾರಿ ಹಾಕಿ ಜಾಮೀನು ಕೊಟ್ಟಿದೆ. ಕೆಲವು ರಾಜಕಾರಣಿಗಳ , ಪತ್ರಕರ್ತರ, ಸಂಘಟನೆಗಳ,ಬುದ್ದಿಜೀವಿಗಳ ಬಣ್ಣ ಬೆತ್ತಲಾಗಿದೆ.
ಅದೇನೇ ಇರಲಿ, ಅದ್ಯಾವ ಪಕ್ಷ ಅಥವಾ ಅದ್ಯಾವ ಸಂಘಟನೆಯೇ ಇರಲಿ. ದೇಶದ ವಿರುದ್ಧ ಮಾತನಾಡುವುದು ಎಂದಿಗೂ ತಪ್ಪೆ. ಅಂತಹ ವ್ಯಕ್ತಿಗಳಿಗೆ ಕಠಿಣಾತಿ-ಕಠಿಣ ಶಿಕ್ಷೆಗೆ ಗುರಿಪಡಿಸುವಂತೆ ಕಾನೂನನ್ನು ಜಾರಿಗೆ ತರಬೇಕಾದ ಅವಶ್ಯಕತೆಯಿದೆ. “My Faith is in the Younger Generation, the Modern Generation, out of them will come my workers. They will work out the whole problem, like Lions” ಎಂದ ವಿವೇಕಾನಂದರ ಆತ್ಮಕ್ಕೇನಾದರೂ ಈ ದೇಶ-ದ್ರೋಹಿ ಯುವಕರ ಬಗ್ಗೆ ತಿಳಿದರೆ ಖಂಡಿತ ನಮ್ಮನ್ನು ಕ್ಷಮಿಸುವುದಿಲ್ಲ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗಿರುವ ಪ್ರತಿಯೊಬ್ಬ ವಿಧ್ಯಾರ್ಥಿಯು ವಿವೇಕಾನಂದರ ಕನಸನ್ನು ಸಾಕಾರಗೊಳಿಸಲು ದುಡಿಯಬೇಕಾಗಿದೆ. ಪ್ರಬುದ್ಧ ಪ್ರಜೆಗಳಾಗಿ ನಾವು ಕೂಡ ನಮ್ಮ ಜವಾಬ್ದಾರಿಯರಿತು, ಕಿರಿಯರನ್ನು ಮುನ್ನಡೆಸಬೇಕಾಗಿದೆ. ಇನ್ನಾದರೂ ಜವಾಬ್ದಾರಿ ಅರಿತು ಕೆಲಸ ಮಾಡೋಣ. ದೇಶಪ್ರೇಮಿಗಳನ್ನು ಮನೆ-ಮನೆಗಳಲ್ಲಿ ಬೆಳೆಸೋಣ. ಮನೆಗೊಬ್ಬ ಅಫ್ಜಲ್ ನನ್ನಲ್ಲ, ಮನೆಗೊಬ್ಬ ಶಿವಾಜಿ, ಮನೆಗೊಬ್ಬ ಕಲಾಂರನ್ನು ಬೆಳೆಸೋಣ.
ಮೇರಾಭಾರತ್ ಮಹಾನ್ !
- ಅರ್ಜುನ್ ದೇವಾಲದಕೆರೆ
Download Android App Now Click Here
Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com
ಪ್ರತಿಯೊಬ್ಬರಿಗೂ ಈ ಅನುಭವ ಆಗಿರುತ್ತೆ..! ಆದ್ರೆ ಹೇಳ್ಕಳಕ್ಕಾಗಲ್ಲ, ಬಿಡಕ್ಕಾಗಲ್ಲ..!
ಅವತ್ತು ಗದ್ದೆ ಕೆಲಸ ಮಾಡ್ತಿದ್ದವರು…ಇವತ್ತು ಅಮೆರಿಕದಲ್ಲಿ ಕಂಪನಿ ಸಿಇಓ…!
ಮಗನ ಹೆಣ ಮನೆಯಲ್ಲಿಟ್ಟು ಮತ್ತೊಬ್ಬರ ಮಗನ ಪ್ರಾಣ ಉಳಿಸಿದ್ರು..!
ವಾಟ್ಸ್ ಆಪ್ ನಲ್ಲಿ ನಗ್ನ ಫೋಟೋ ಶೇರ್ ಮಾಡಿದ ಅಧಿಕಾರಿ ಬಂಧನ.!
Job ಆಫರ್! 70 ದಿನ ಮಲಗಿದ್ದರೆ 12.17ಲಕ್ಷ!
ಕುಡುಕರು ಹಾಡಿದ ಪರಮಾತ್ಮನ ಮಹಿಮೆ..! ಈ ವೀಡಿಯೋ ನೋಡಿದ್ರೆ ನಗದೇ ಇರೋಕೆ ಸಾಧ್ಯನೇ ಇಲ್ಲ.!