ತುಮಕೂರಿನಲ್ಲಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಬಿಜೆಪಿ ಅಭ್ಯರ್ಥಿ ಜಿ.ಎಸ್ ಬಸವರಾಜ್ ಅವರ ವಿರುದ್ಧ ಸೋತಿದ್ದಾರೆ. ಕೊನೆಯ ಚುನಾವಣೆ ಎಂದು ತುಮಕೂರಿಂದ ಸ್ಪರ್ಧಿಸಿದ್ದ ಮಾಜಿ ಪ್ರಧಾನಿಗಳಿಗೆ ಸೋಲಾಗಿದೆ. ಸಂಸದರಾಗಿದ್ದ ಕಾಂಗ್ರೆಸ್ನ ಮುದ್ದಹನುಮೇಗೌಡರಿಗೆ ಟಿಕೆಟ್ ಕೊಡುವುದು ಬಿಟ್ಟು ದೇವೇಗೌಡರು ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು ಹಿನ್ನೆಡೆಗೆ ಕಾರಣ. ಆರಂಭದಲ್ಲಿ ದೇವೇಗೌಡರ ವಿರುದ್ಧ ಸ್ಪರ್ಧಿಸುವುದಾಗಿ ಹೇಳಿದ್ದ ಸಂಸದರಾಗಿದ್ದ ಮುದ್ದಹನುಮೇಗೌಡರು ಮತ್ತು ಮಾಜಿ ಶಾಸಕ ಕೆ.ಎನ್ ರಾಜಣ್ಣ ತದನಂತರದಲ್ಲಿ ಹಿಂದೆ ಸರಿದರೂ ಅವರು ದೇವೇಗೌಡರ ಪರ ಕೆಲಸ ಮಾಡಿಲ್ಲ. ಕೆ.ಎನ್ ರಾಜಣ್ಣ ಎಲೆಕ್ಷನ್ ದಿನ ಬಿಜೆಪಿ ಅಭ್ಯರ್ಥಿ ಬಸವರಾಜ್ ಅವರ ಜೊತೆಯಲ್ಲಿ ಕಾಣಿಸಿಕೊಂಡಿದ್ದರು.
ಇಂದು ಮಧುಗಿರಿಯ ಮಾಜಿ ಶಾಸಕ ಕೆ.ಎನ್ ರಾಜಣ್ಣ ತುಮಕೂರಿನಲ್ಲಿ ದೇವೇಗೌಡ ಸೋಲಿಗೆ ಕಾರಣ ನಿಖಿಲ್ ಕುಮಾರಸ್ವಾಮಿ ಎನ್ನವು ಹೇಳಿಕೆ ನೀಡಿದ್ದಾರೆ. ದೇವೇಗೌಡರು ಸೋಲುವುದನ್ನು ನಾನು ಅಂದೇ ನಿರೀಕ್ಷಿಸಿದ್ದೆ. ಮಧುಗಿರಿಯಲ್ಲಿ ದೇವೇಗೌಡರ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಕುಂಚಿಕ ಸಮುದಾಯದ ಹೆಣ್ಣುಮಗಳ ಜೊತೆಯಲ್ಲಿ ಎಂಗೇಜ್ಮೆಂಟ್ ಮಾಡಿಕೊಂಡಿದ್ದ. ಆಮೇಲೆ ಆ ಹುಡುಗಿಯನ್ನು ಬಿಟ್ಟ…! ಇದು ಈ ಭಾಗದಲ್ಲಿ ಮತ ಕಡಿಮೆ ಬಿದ್ದು, ದೇವೇಗೌಡರ ವಿರುದ್ಧದ ಫಲಿತಾಂಶಕ್ಕೆ ಕಾರಣ ಎಂದಿದ್ದಾರೆ.
ಮುಂದುವರೆದು ತಮ್ಮ ಪಕ್ಷ, ಸರ್ಕಾರದ ವಿರುದ್ಧವೇ ಕೆ.ಎನ್ ರಾಜಣ್ಣ ಮಾತಾಡಿದ್ದಾರೆ. ನಾನೂ ಒಬ್ಬ ರಾಜಕಾರಣಿ, ನಮ್ಮದೇ ಪಕ್ಷದ ಸಮ್ಮಿಶ್ರ ಸರಕಾರ ರಾಜ್ಯದಲ್ಲಿ ಇದೆ. ಆದರೆ, ಇ ರೀತಿಯ ಭ್ರಷ್ಟ ಸರಕಾರವನ್ನು ನನ್ನ ರಾಜಕೀಯ ವೃತ್ತಿಜೀವನದಲ್ಲೇ ನೋಡಿಲ್ಲ. ರಾಜ್ಯದಲ್ಲಿ ಬರಗಾಲವಿದೆ, ಮೇವಿನಲ್ಲೂ ಕೋಟ್ಯಾಂತರ ರೂಪಾಯಿ ಹಣ ಲೂಟಿ ಮಾಡಲಾಗುತ್ತಿದೆ. ಉಪಮುಖ್ಯಮಂತ್ರಿ ಪರಮೇಶ್ವರ್ ಅವರನ್ನು ನಾನು ಡಿಸಿಎಂ ಎಂದು ಕರೆಯುವುದೇ ಇಲ್ಲ ಎಂದು ಬಹಿರಂಗವಾಗಿ ಕಿಡಿಕಾರಿದ್ದಾರೆ.
ದೇವೇಗೌಡರ ಸೋಲಿಗೆ ನಿಖಿಲ್ ಕುಮಾರಸ್ವಾಮಿ ಕಾರಣವಂತೆ..!
Date: