ಸಿನಿಮಾ ಸ್ಟಾರ್ ಗಳು ರಾಜಕಾರಣಿಗಳ ಪರ ಪ್ರಚಾರ ಮಾಡಿದ್ರೆ ಜನ ಸೇರ್ತಾರೆ, ಮತಗಳಾಗಿ ಪರಿವರ್ತನೆಯಾಗಲ್ಲ ಎಂಬುದು ಬಹಳ ಹಿಂದಿನಿಂದಲೂ ಚರ್ಚೆಯಾಗುತ್ತಿರುವ ವಿಷ್ಯ. ಆದರೂ ಪ್ರತಿ ಚುನಾವಣೆಯಲ್ಲೂ ಸಿನಿಮಾ ತಾರೆಯರು ಅಭ್ಯರ್ಥಿಗಳ ಪರ ಪ್ರಚಾರ ಮಾಡ್ತಾನೇ ಇರ್ತಾರೆ.
ದರ್ಶನ್ ಪ್ರಚಾರ ಮಾಡಿದ್ರೆ ಅವರ ಅಭ್ಯರ್ಥಿ ಗೆಲ್ಲಲ್ಲ ಎಂಬ ಮಾತು ಕೇಳಿಬರುತ್ತಿತ್ತು. ಅದಕ್ಕೆ ಉದಾಹರಣೆ ಎಂಬಂತೆ ಮಾಜಿ ಸಿಎಂ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕಂಡ ಸೋಲು ಕಣ್ಣ ಮುಂದೆ ಇತ್ತು.
ದರ್ಶನ್ ಪ್ರಚಾರ ಮಾಡಿದ್ದಕ್ಕೆ ಸಿದ್ದರಾಮಯ್ಯ ಗೆಲ್ಲಲಿಲ್ಲ. ಈಗ ಸುಮಲತಾನೂ ಗೆಲ್ಲಲ್ಲ ಎಂದು ಮಾತನಾಡಿದರು. ಆದ್ರೀಗ, ಡಿ ಬಾಸ್ ಮೇಲಿನ ಆಪಾದನೆ, ಆರೋಪವನ್ನ ಭರ್ಜರಿ ಗೆಲುವಿನ ಮೂಲಕ ಸುಮಲತಾ ಅಳಿಸಿಹಾಕಿದ್ದಾರೆ.. ದರ್ಶನ್ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.
ಸುಮಲತಾ ಗೆಲುವಿನಲ್ಲಿ ಡಿ ಬಾಸ್ ಅವರ ಪಾಲು ಇದೆ ಎಂದು ಅಭಿಮಾನಿಗಳು ಕಾಲರ್ ಎತ್ತಿದ್ದಾರೆ.ವಿರೋದಿಗಳ ಮಾತಿಗೆ ಮಂಡ್ಯ ಫಲತಾಂಶ ಉತ್ತರ ನೀಡಿದೆ. ಒಂದು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಅಂಬರೀಶ್ ಪತ್ನಿ ಜಯಗಳಿಸಿದ್ದು, ಇದು ದರ್ಶನ್ ಅಭಿಮಾನಿಗಳಿಗೆ ಖುಷಿ ತಂದಿದೆ.