ರೆಬೆಲ್ ಸ್ಟಾರ್ ಅಂಬರೀಶ್ ಅವರ ಮಗ ಅಭಿಷೇಕ್ ಅಂಬರೀಶ್ ಅವರು ಅಮರ್ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಭರ್ಜರಿ ಎಂಟ್ರಿಕೊಡಲು ರೆಡಿಯಾಗಿದ್ದಾರೆ.
ನಾಗಶೇಖರ್ ನಿರ್ದೇಶನದ ಈ ಚಿತ್ರದಲ್ಲಿ ಯಜಮಾನ ದರ್ಶನ್ ಗೆ ಜೋಡಿಯಾಗಿದ್ದ ತಾನ್ಯ ಹೋಪ್ ನಾಯಕಿಯಾಗಿದ್ದಾರೆ.
ಅಂಬಿ ಅವರ ಮಗನ ಮೊದಲ ಸಿನಿಮಾ ಆಗಿದ್ದು ಈಗಾಗಲೇ ನಿರೀಕ್ಷೆ ಹೆಚ್ಚಿದೆ.
ಮಂಡ್ಯದಲ್ಲಿ ಇಷ್ಟು ದಿನ ತಾಯಿ ಸುಮಲತಾ ಪರ ಲೋಕಸಭಾ ಚುನಾವಣೆಯ ಪ್ರಚಾರದಲ್ಲಿ ಬ್ಯುಸಿ ಆಗಿದ್ದ ಅಭಿಷೇಕ್ ಈಗ ತಾಯಿಯ ಗೆಲುವಿನ ಸಂಭ್ರಮದಲ್ಲಿದ್ದಾರೆ.
ಚುನಾವಣೆ ಮುಗಿದಿದೆ. ಅಮ್ಮ ಗೆದ್ದಿದ್ದಾರೆ. ಇನ್ನು ಸಿನಿಮಾ ಕಡೆ ಗಮನ ಕೊಡುವುದು ಅವರ ಯೋಚನೆ.
ಅಮರ್ ಚಿತ್ರ ರಿಲೀಸ್ ಗೆ ರೆಡಿಯಾಗಿದೆ. ಪೋಸ್ಟರ್ , ಟೀಸರ್, ಟ್ರೇಲರ್ ನಿಂದ ಸದ್ದು ಮಾಡುತ್ತಿದೆ. ಅಂಬಿಯ ಸ್ಟೈಲ್, ಗತ್ತು ಮಗ ಅಭಿಯಲ್ಲೂ ಕಾಣುತ್ತಿದೆ.
ಎಲ್ಲಾ ಓಕೆ ಅಭಿ ತಮ್ಮ ಚೊಚ್ಚಲ ಸಿನಿಮಾ ಅಮರ್ ಗೆ ಎಷ್ಟು ಸಂಭಾವನೆ ಪಡೆದಿದ್ದಾರೆ ಎನ್ನುವುದು. ಅಭಿ ಮೊದಲ ಸಿನಿಮಾಕ್ಕೇ ಬರೋಬ್ಬರಿ 1ಕೋಟಿ ರೂ ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಅಭಿ ಇಷ್ಟು ಮೊತ್ತವನ್ನು ನಿಜಕ್ಕೂ ತೆಗೆದುಕೊಂಡಿದ್ದಾರೆ ಸ್ಯಾಂಡಲ್ ವುಡ್ ನಲ್ಲಿ ಮೊದಲ ಸಿನಿಮಾಕ್ಕೇ ಇಷ್ಟೊಂದು ದೊಡ್ಡ ಮೊತ್ತ ತೆಗೆದುಕೊಂಡ ನಟ ಅಭಿಯಾಗುತ್ತಾರೆ.
ಅಭಿ ಅಮರ್ ಮೂಲಕ ಸ್ಟಾರ್ ನಟರಾಗಿ ಬೆಳೀತಾರ ಕಾದುನೋಡಣ.