ದೋಸ್ತಿ ಸರ್ಕಾರ ಉಳಿಸಿಕೊಳ್ಳಲು ಮುಂದಾಗಿರುವ ನಾಯಕರು ಬಂಡಾಯ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಸಂಪುಟ ಪುನಾರಚನೆಗೆ ಮುಂದಾಗಿದ್ದಾರೆ.
ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದಿಂದ ತಲಾ ಮೂವರು ಸಚಿವರು ರಾಜೀನಾಮೆ ನೀಡಲಿದ್ದಾರೆ. ಜೆಡಿಎಸ್ ಕೋಟಾದಲ್ಲಿ ಉಳಿದ ಎರಡು ಸ್ಥಾನ, ಸಿ.ಎಸ್. ಶಿವಳ್ಳಿ ಅವರ ನಿಧನದಿಂದ ಖಾಲಿಯಾಗಿರುವ ಸ್ಥಾನ ಸೇರಿ 9 ಸಚಿವ ಸ್ಥಾನಗಳನ್ನು ಅತೃಪ್ತ ಶಾಸಕರಿಗೆ ನೀಡಲಾಗುವುದು ಎನ್ನಲಾಗಿದೆ.
ಇದಕ್ಕಾಗಿ ಕಾಂಗ್ರೆಸ್ ನಿಂದ ಪ್ರಿಯಾಂಕ್ ಖರ್ಗೆ, ಯು.ಟಿ. ಖಾದರ್, ಕೃಷ್ಣಭೈರೇಗೌಡ ಹಾಗೂ ಜೆಡಿಎಸ್ ನಿಂದ ಸಾ.ರಾ. ಮಹೇಶ್ ಸೇರಿದಂತೆ ಕೆಲ ಸಚಿವರು ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಸಂಪುಟ ವಿಸ್ತರಣೆ ಮಾಡಿ ಶಾಸಕರನ್ನು ಪಕ್ಷದಲ್ಲೇ ಉಳಿಸಿಕೊಂಡು ಸರ್ಕಾರವನ್ನು ಸೇಫ್ ಮಾಡಿಕೊಳ್ಳುವುದು ನಾಯಕರ ಸದ್ಯದ ಚಿಂತನೆಯಾಗಿದೆ.ಈ ಹಿನ್ನೆಲೆಯಲ್ಲಿ ದೋಸ್ತಿ ನಾಯಕರು ಚರ್ಚೆ ನಡೆಸಿದ್ದು, ಈ ತಿಂಗಳ ಅಂತ್ಯಕ್ಕೆ ಸಂಪುಟ ಪುನಾರಚನೆ ಮಾಡಲಾಗುವುದು ಎಂದು ಹೇಳಲಾಗಿದೆ.