ಪ್ರಜ್ವಲ್ ರೇವಣ್ಣ ಹಾಸನ ಲೋಕಸಭಾ ಕ್ಷೇತ್ರದಿಂದ ಗೆದ್ದಾಗಿದೆ ಆದ್ರೆ ಇದೀಗ ಅವರ ಸಂಸದ ಸ್ಥಾನ ಅನರ್ಹಗೊಳಿಸುವಂತೆ ಕಾಂಗ್ರೆಸ್ ಕಾರ್ಯಕರ್ತ ದೇವರಾಜ ಗೌಡ ಸಲ್ಲಿಸಿದ್ದ ಎಲೆಕ್ಷನ್ ಪಿಟಿಷನ್ ಅರ್ಜಿ ಇದೀಗ ಹೈಕೋರ್ಟ್ ಅಂಗಳಕ್ಕೆ ಬಂದಿದೆ.
ನಾಮಪತ್ರ ಸಲ್ಲಿಕೆ ವೇಳೆ ಪ್ರಜ್ವಲ್ ರೇವಣ್ಣ ಸುಳ್ಳು ದಾಖಲೆ ಸಲ್ಲಿಕೆ ಮಾಡಿದ ಅರೋಪದ ಮೇಲೆ ಕಳೆದ ವಾರವೇ ಇಪಿ ಫೈಲ್ ಮಾಡಲಾಗಿದೆ. ಪ್ರಜ್ವಲ್ ತನ್ನ ಅನೇಕ ಅಕ್ರಮ ಆಸ್ತಿಗಳ ಮಾಹಿತಿ ಮುಚ್ಚಿಟ್ಟಿದ್ದಾರೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದ್ದು representation of people act ಮತ್ತು anti corruption act ಉಲ್ಲಂಘನೆ ಮಾಡಿರೋ ಆರೋಪದ ಮೇಲೆ ಈ ದೂರನ್ನು ನಿಡಿದ್ದಾರೆ.
ಪ್ರಜ್ವಲ್ ರೇವಣ್ಣ ತಮ್ಮ ಚುನಾವಣಾ ಅಫಿಡವಿಟ್ನಲ್ಲಿ ಸುಮಾರು 12ಕ್ಕೂ ಹೆಚ್ಚು ಸುಳ್ಳು ಮಾಹಿತಿ ನೀಡಿದ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಮುಖ್ಯ ಚುನಾವಣಾ ಆಯೋಗಕ್ಕೆ ಪ್ರಜ್ವಲ್ ರೇವಣ್ಣ ವಿರುದ್ಧ ದೂರನ್ನು ಸಲ್ಲಿಸಲಾಗಿತ್ತು ಈ ಬಗ್ಗೆ ಪರಿಶೀಲನೆ ಮಾಡಿದ್ದ ಚುನಾವಣಾ ಆಯೋಗ, ಪ್ರಜ್ವಲ್ ರೇವಣ್ಣ ಸಂಸದ ಸ್ಥಾನದ ಅನರ್ಹತೆ ಬಗ್ಗೆ ಹೈಕೋರ್ಟ್ನಲ್ಲಿ ಪ್ರಶ್ನಿಸಿಲು ಸೂಚಿಸಿತ್ತು, ಅದರಂತೆ ಇದೀಗ ಪ್ರಜ್ವಲ್ ರೇವಣ್ಣ ಮೊಕದ್ದಮೆ ಹೈಕೋರ್ಟ್ ಮೆಟ್ಟಿಲೇರಿದೆ.