ನೀರವ್ ಮೋದಿಯನ್ನು ಲಂಡನ್ ನಿಂದ ಗಡಿಪಾರು ಮಾಡಿದರೆ ಯಾವ ಜೈಲಿನಲ್ಲಿ ಇಡಲಾಗುವುದು ಎಂದು ಇನ್ನು 14 ದಿನಗಳ ಒಳಗೆ ತಿಳಿಸಿ ಎಂದು ಭಾರತ ಸರ್ಕಾರಕ್ಕೆ ಯುಕೆ ವೆಸ್ಟ್ ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಸೂಚಿಸಿದೆ.
ನೀರವ್ ಮೋದಿ ವಿಚಾರದಲ್ಲಿ ದೆಹಲಿಯಿಂದ ಯುಕೆಗೆ ಕಳಿಸಲ್ಪಟ್ಟಿದ್ದ ವರದಿ, ದಾಖಲೆಯ ಉತ್ತಮ ಗುಣಮಟ್ಟದ ಬಗ್ಗೆ ನ್ಯಾಯಾಲಯ ಸಂತಸ ವ್ಯಕ್ತಪಡಿಸಿದೆ. ನೀರವ್ ಮೋದಿ ಜೂ. 27 ರ ವರೆಗೆ ನ್ಯಾಯಾಂಗ ಬಂಧನದಲ್ಲಿಯೇ ಇರಲಿದ್ದು, ಅಂದು ಮುಖ್ಯ ನ್ಯಾಯಾಧೀಶೆ ಎಮ್ಮಾ ಅರ್ಬತ್ ನಾಟ್ ವಿಚಾರಣೆ ನಡೆಸಲಿದ್ದಾರೆ.