ಆಂಧ್ರಪ್ರದೇಶ ಮುಖ್ಯಮಂತ್ರಿಯಾಗುತ್ತಿದ್ದಂತೆ ವೈ.ಎಸ್.ಜಗನ್‍ಮೋಹನ್ ರೆಡ್ಡಿ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ ಮಾಡಿದ್ದಾರೆ. ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಆರ್.ಪಿ.ಠಾಕೂರ್ ಅವರನ್ನು ನಿನ್ನೆ ರಾತ್ರಿ ಹುದ್ದೆಯಿಂದ ಕಿತ್ತೆಸೆದಿದ್ದಾರೆ.
ಭ್ರಷ್ಟಾಚಾರ ನಿಗ್ರಹ ದಳ-ಎಸಿಬಿ ಮಹಾ ನಿರ್ದೇಶಕ ಎ.ಬಿ.ವೆಂಕಟೇಶ್ವರ ರಾವ್ ಅವರನ್ನೂ ಸಹ ಹುದ್ದೆಯಿಂದ ತೆಗೆದು ಹಾಕಿದ್ದಾರೆ. ಠಾಕೂರ್ ಮತ್ತು ರಾವ್ ವೈಎಸ್‍ಆರ್ ಕಾಂಗ್ರೆಸ್‍ನ ಹಿಟ್ ಲಿಸ್ಟ್ ನಲ್ಲಿದ್ದರು.
ಜಗನ್ ನಿನ್ನೆ ಮಧ್ಯಾಹ್ನ ಆಂಧ್ರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ, ಇವರಿಬ್ಬರ ಹುದ್ದೆಗಳಿಗೆ ಸಂಚಕಾರ ಬರಲಿದೆ ಎಂಬುದು ಖಚಿತವಾಗಿತ್ತು.
ಎನ್. ಚಂದ್ರಬಾಬು ನಾಯ್ಡು ಮುಖ್ಯಮಂತ್ರಿಯಾಗಿದ್ದಾಗ ಟಿಡಿಪಿ ಸರ್ಕಾರಕ್ಕೆ ಇವರು ಬಹು ಆಪ್ತರಾಗಿದ್ದರು.ನಿರೀಕ್ಷೆಯಂತೆ ಜಗನ್ ಇವರಿಬ್ಬರನ್ನು ಹುದ್ದೆಯಿಂದ ತೆಗೆದು ಹಾಕಿದ್ದಾರೆ.