ದಿನಕಳೆಯುತಿದ್ದಂತೆ ಬಿಜೆಪಿ ಬಣ್ಣ ಬಯಲಾಗಲಿದೆ : ಪರಮೇಶ್ವರ್

Date:

ಭಾರತೀಯ ಜನತಾ ಪಕ್ಷದವರ ಉದ್ದೇಶ ಕೆಲ ದಿನಗಳು ಕಳೆದ ನಂತರ ಜನರಿಗೆ ಅರಿವಾಗಲಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆ ನೋಡಿದ್ದೇವೆ. ಅದರ ಪರಿಣಾಮ ಸ್ಥಳೀಯ ಸಂಸ್ಥೆ ಚುನಾವಣೆ ಮೇಲೂ ಆಗಿದೆ. ರಾಜಕಾರಣ ನಿಂತ ನೀರಲ್ಲ. ಬದಲಾವಣೆ ಆಗೇ ಆಗುತ್ತದೆ ಎಂದು ತಿಳಿಸಿದರು.

ಚುನಾವಣೆಯಲ್ಲಿ ಏಳುಬೀಳು ಸಾಮಾನ್ಯ. ಕೇಂದ್ರದಲ್ಲೂ ಹಾಗೇ ಆಗಿದೆ. 10 ವರ್ಷಗಳ ಕಾಲ ಮನ್‍ಮೋಹನ್‍ಸಿಂಗ್ ಅಧಿಕಾರದಲ್ಲಿದ್ದರು. ಈಗ ಬಿಜೆಪಿ ಬಂದಿರಬಹುದು. ನಾವು ಬೌನ್ಸ್ ಬ್ಯಾಕ್ ಆಗಲಿದ್ದೇವೆ. ನಮ್ಮ ಉದ್ದೇಶ ಒಳ್ಳೆಯದಿದೆ, ನಾವು ಮತ್ತೆ ಅಧಿಕಾರಕ್ಕೆ ಬರುವ ವಿಶ್ವಾಸವಿದೆ ಎಂದುಹೇಳಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ವಿಧಾನ ಸಭಾಧ್ಯಕ್ಷರಾದ ರಮೇಶ್‍ಕುಮಾರ್ ಹಿರಿಯ ನಾಯಕರು ಅವರು ಅನುಭವದ ಆಧಾರದ ಮೇಲೆ ಮಾತನಾಡಿರುತ್ತಾರೆ ಎಂದರು.
ನಕ್ಸಲರ ಚಟುವಟಿಕೆ ಇದೆ. ಜನರ ರಕ್ಷಣೆ ಮುಖ್ಯ. ನ್ಯಾಷನಲ್ ಇಂಟೆಲಿಜೆನ್ಸ್ ತಂಡ ಈ ಬಗ್ಗೆ ಗಮನಹರಿಸಲಿದೆ ಎಂದು ಮತ್ತೊಂದು ಪ್ರಶ್ನೆಗೆ ಉತ್ತರಿಸಿದರು.

Share post:

Subscribe

spot_imgspot_img

Popular

More like this
Related

ಕಾರೊಂದು ಸೇತುವೆ ಮೇಲಿಂದ ಉರುಳಿ ಓರ್ವ ಸಾವು, ನಾಲ್ವರು ಗಂಭೀರ

ಕಾರೊಂದು ಸೇತುವೆ ಮೇಲಿಂದ ಉರುಳಿ ಓರ್ವ ಸಾವು, ನಾಲ್ವರು ಗಂಭೀರ ಕೋಲಾರ:- ಜಿಲ್ಲೆ...

ಸಮೀಕ್ಷೆ ನಡೆಸದಿದ್ದರೆ ಸಮಾಜದಲ್ಲಿ ಜನರ ಸ್ಥಿತಿಗತಿ ಬಗ್ಗೆ ಅರಿಯಲು ಸಾಧ್ಯವಿಲ್ಲ: ಸಿಎಂ ಸಿದ್ದರಾ,ಯ್ಯ

ಸಮೀಕ್ಷೆ ನಡೆಸದಿದ್ದರೆ ಸಮಾಜದಲ್ಲಿ ಜನರ ಸ್ಥಿತಿಗತಿ ಬಗ್ಗೆ ಅರಿಯಲು ಸಾಧ್ಯವಿಲ್ಲ: ಸಿಎಂ...

ಬೆರಳಿನ ಮೇಲೆ ಕೂದಲು ಇದ್ದರೆ ಅದೃಷ್ಟಾನಾ? ಶಾಸ್ತ್ರ ಹೇಳುವುದೇನು?

ಬೆರಳಿನ ಮೇಲೆ ಕೂದಲು ಇದ್ದರೆ ಅದೃಷ್ಟಾನಾ? ಶಾಸ್ತ್ರ ಹೇಳುವುದೇನು? ಕೆಲವರಿಗೆ ಕೈ ಅಥವಾ...

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ!

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ! ಬೆಂಗಳೂರು:...