ಉಪೇಂದ್ರ ಅಭಿನಯದ ಬಹು ನಿರೀಕ್ಷಿತ ಚಿತ್ರ ಉಪ್ಪಿ ಐ ಲವ್ ಯು ಸಿನಿಮಾ ಟ್ರೈಲರ್ ಮೂಲಕ ಈಗಾಗಲೇ ಭಾರಿ ಸದ್ದು ಮಾಡುತ್ತಿದೆ ಸ್ಯಾಂಡಲ್ವುಡ್ ಸೇರಿದಂತೆ ಟಾಲಿವುಡ್ನಲ್ಲಿಯೂ ಟೀಸರ್ ಮತ್ತು ಟ್ರೈಲರ್ಗಳು ತುಂಬಾನೇ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದು ಮೊದಲ ಬಾರಿಗೆ ಉಪ್ಪಿ ರಚಿತಾ ರಾಮ್ ಜೋಡಿ ತೆರೆ ಮೇಲೆ ಮೋಡಿ ಮಾಡಲೂ ರೆಡಿಯಾಗಿದ್ದಾರೆ ಅಲ್ಲದೆ ಈ ಸಿನಿಮಾದಲ್ಲಿ ಇದೇ ಮೊದಲ ಬಾರಿಗೆ ಡಿಂಪಲ್ ಕ್ವೀನ್ ರಚಿತಾರಾಮ್ ತುಂಬಾನೇ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.
ಆದ್ರೆ ಇದೀಗ ಬಂದಿರುವ ಸುದ್ದಿ ಏನಪ್ಪಾ ಅಂದ್ರೆ ಉಪ್ಪಿ ಐ ಲವ್ ಯು ಸಿನಿಮಾದಲ್ಲಿ ರಚಿತಾ ರಾಮ್ ಅವರ ಈ ಹಾಟ್ ಲುಕ್ ಕೆಲವರಿಗೆ ಇಷ್ಟವಾದ್ರೆ ಇನ್ನೂ ಕೆಲ ಅಭಿಮಾನಿಗಳಿಗೆ ಬೇಸರವುಂಟು ಮಾಡಿದ್ಯಂತೆ,
ಇದೇ ವಿಚಾರವಾಗಿ ಮಾದ್ಯಮಗಳೊಂದಿಗೆ ಮಾತನಾಡಿದ ರಚಿತಾ ಉಪ್ಪಿ ಐ ಲವ್ ಯು ಸಿನಿಮಾದಲ್ಲಿ ನಾನು ತುಂಬಾನೇ ಹಾಟ್ ಆಗಿ ನಟಿಸಿದ್ದೀನಿ. ನಾನು ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟು ಈಗಾಗಲೇ 6 ವರ್ಷ ಆಗಿದೆ. ಇಷ್ಟು ವರ್ಷಗಳಲ್ಲಿ ನಾನು ಇದೇ ಮೊದಲ ಬಾರಿಗೆ ಇಷ್ಟೊಂದು ಬೋಲ್ಡ್ ಕಾಣಿಸಿಕೊಂಡಿದ್ದೇನೆ ಆದ್ರೆ ಇದು ನನ್ನ ಕೆಲವು ಅಭಿಮಾನಿಗಳಿಗೆ ಇಷ್ಟವಾಗಿಲ್ಲ ಹಾಗಾಗಿ ನಮಗೆ ನಿಮ್ಮನ್ನು ಇಂತಹ ಪಾತ್ರದಲ್ಲಿ ನೋಡಲು ಇಷ್ಟವಾಗುತ್ತಿಲ್ಲ ಎಂದು ನನ್ನ ಅಭಿಮಾನಿಗಳು ಮೆಸೇಜ್ ಮಾಡುತ್ತಿದ್ದಾರೆ ಆದ್ದರಿಂದ ನಾನು ಇನ್ನು ಮುಂದೆ ಇಂತಹ ಬೋಲ್ಡ್ ಪಾತ್ರದಲ್ಲಿ ನಟಿಸಲ್ಲ ಎಂದು ರಚಿತಾ ಹೇಳಿದ್ದಾರೆ,