ಅರೆ ಬೆಂದ ಸ್ಥಿತಿಯಲ್ಲಿ ಹೋಂ ಗಾರ್ಡ್ ಒಬ್ಬರ ಶವ ಪತ್ತೆಯಾಗಿದ್ದು , ಕೊಲೆ ಶಂಕೆ ವ್ಯಕ್ತವಾಗಿದೆ. ಮುಳಬಾಗಿಲು ತಾಲ್ಲೂಕು ಅಳ್ಳಾಲಸಂದ್ರ ಗೇಟ್ ಬಳಿ ಶವ ಪತ್ತೆಯಾಗಿದೆ.ಮೃತ ದೇಹ ತಾಲ್ಲೂಕಿನ ನೆಡಂಪಲ್ಲಿ ಗ್ರಾಮದ ನಾರಾಯಣ ರೆಡ್ಡಿ (36) ಅವರದ್ದೆಂದು ಗುರುತಿಸಲಾಗಿದೆ.
ನಾರಾಯಣ ರೆಡ್ಡಿ ತಂದೆ-ತಾಯಿ, ಪತ್ನಿ ಹಾಗೂ ಒಬ್ಬ ಪುತ್ರನೊಂದಿಗೆ ನೆಡಂಪಲ್ಲಿಯಲ್ಲಿ ವಾಸವಿದ್ದರು. ಅವರು ಮುಳಬಾಗಿಲಿನಲ್ಲಿ ಹೋಂಗಾರ್ಡ್ ಆಗಿ ಕೆಲಸ ನಿರ್ವಹಿಸುತ್ತಿದ್ದರು.
ಮಂಗಳವಾರ ಮಧ್ಯಾಹ್ನ ಹೊರ ಹೋಗಿದ್ದ ನಾರಾಯಣ ರೆಡ್ಡಿ ನಂತರ ಹಿಂದಿರುಗಿರಲಿಲ್ಲ. ನಿನ್ನೆ ಸಂಜೆ ಸಾರ್ವಜನಿಕರು ಅಳ್ಳಾಲಸಂದ್ರ ಗೇಟ್ ಬಲಿ ಅರೆ ಬೆಂದ ಶವ ಬಿದ್ದಿರುವುದನ್ನು ಪೊಲೀಸರಿಗೆ ತಿಳಿಸಿದ್ದಾರೆ.
ಕ್ಷಣ ಮುಳಬಾಗಿಲು ಗ್ರಾಮಾಂತರ ಠಾಣೆ ಪೊಲೀಸರು ಧಾವಿಸಿ ಪರಿಶೀಲಿಸಿದಾಗ ಶವ ನಾರಾಯಣ ರೆಡ್ಡಿಯವರದು ಎಂಬುದು ಗೊತ್ತಾಗಿದೆ.
ದೇಹ ಪತ್ತೆಯಾದ ಬಳಿಯೇ ನಾರಾಯಣ ರೆಡ್ಡಿಯವರ ಮೋಟಾರ್ ಬೈಕ್ ನಿಂತಿದ್ದು , ಅವರನ್ನು ಪೆಟ್ರೋಲ್ ಹಾಕಿ ಸುಟ್ಟಿರಬಹುದು. ಇದೊಂದು ಕೊಲೆ ಎಂದು ಪೊಲೀಸರು ಶಂಕಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.