ಪ್ರತಿಯೊಬ್ಬರ ಜೀವನದಲ್ಲೂ ಮೊದಲ ರಾತ್ರಿ ಎಂದೂ ಮರೆಯಲಾಗದ ಅನುಭೂತಿ. ಮೊದಲ ರಾತ್ರಿ ಅಂದ್ರೆ ಏನೋ ಒಂಥಾರ ಭಯ ಮತ್ತು ಮಧುರ ಅನುಭವ. ಆದ್ರೆ ಭಯ ಹೆಚ್ಚಾದ್ರೆ ಅಂದುಕೊಂಡಿದ್ದು ಸಾದ್ಯವಾಗಲ್ಲ. ಒಬ್ಬರಿಗೊಬ್ಬರು ಅಪರಿಚಿತರಾಗಿರುವುದರಿಂದ ಅಥವಾ ಇಬ್ಬರಲ್ಲೂ ಮಾನಸಿಕ ಸಾಮೀಪ್ಯವೂ ಇಲ್ಲದಿರುವುದರಿಂದ ಮೊದಲ ರಾತ್ರಿ ಎಲ್ಲರಿಗೂ ಮಧುರವಾಗಿಯೇ ಇರುವುದಿಲ್ಲ. ಹೊಸ ಜಾಗಕ್ಕೆ ನಮ್ಮ ದೇಹ ಮತ್ತು ಮನಸ್ಸು ಹೊಂದಿಕೊಳ್ಳಲು ಸಮಯ ತೆಗೆದುಕೊಳ್ಳುತ್ತದೆ. ಮನಸ್ಸು ಪೂರ್ತಿಯಾಗಿ ಆರಾಮವಾಗಿ, ಕಂಫರ್ಟಬಲ್ ಆಗಿರದೆ ಇದ್ದರೆ ದೇಹ ಮನಸ್ಸು ಮತ್ತೊಬ್ಬರಿಗೆ ಸ್ಪಂದಿಸುವುದೇ ಇಲ್ಲ. ಸೆಕ್ಸುಯಲ್ ಅನುಭವದ ಬಗ್ಗೆ ಸೂಕ್ತ ಮಾಹಿತಿ ಇರದೇ ಪತಿ-ಪತ್ನಿಯರಲ್ಲಿ ಭಯ ಹೆಚ್ಚಾದ್ರೆ ಏನೂ ನಡೆಯದೆಯೂ ಇರಬಹುದು. ಹಲವಾರು ದಿನಗಳ ಮದುವೆ ಓಡಾಟ, ಜೊತೆಗೆ ಮದುವೆ ದಿನ ಪೂರ್ತಿ ನಿಂತು, ಸಂಪ್ರದಾಯ ಪೂರೈಸಿ ನವ ದಂಪತಿ ಬಳಲಿರುತ್ತಾರೆ. ನಿದ್ರೆಗೇ ಮೊದಲ ಪ್ರಾಶಸ್ತ್ಯ ಕೊಡುವಂತಾಗುತ್ತದೆ.
ಮೊದಲ ರಾತ್ರಿ ಹೇಗಿರಬೇಕು ಗೊತ್ತಾ.?
Date: