ಲೈಂಗಿಕ ಕ್ರಿಯೆ ಅನ್ನೋದು ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗ. ಲೈಂಗಿಕ ಸಮಸ್ಯೆ ಕೇವಲ ಹೆಣ್ಣನ್ನು ಮಾತ್ರ ಕಾಡುವುದಲ್ಲ. ಗಂಡಿಗೂ ಕಾಡುತ್ತೆ. ಕೆಲವರಿಗೆ ಅದೇ ಸ್ವಚ್ಛತಾ ಸಮಸ್ಯೆ ಹಾಗೂ ಇತರೆ ಕಾರಣಗಳಿದ್ದರೂ ಮತ್ತೆ ಕೆಲವರಿಗೆ ಬೇರೆಯದ್ದೇ ರೀತಿಯ ನೋವು ಕಾಡುತ್ತದೆ.
ಹೆಣ್ಣಿಗೆ ಕನ್ಯತ್ವ ಪೊರೆ ಹರಿಯುವಾಗ ಯೋನಿಯಲ್ಲಿ ಹೇಗೆ ರಕ್ತ ಸ್ರಾವವಾಗುತ್ತದೋ, ಹಾಗೆಯೇ ಪುರುಷರಿಗೂ ಲೈಂಗಿಕ ಕ್ರಿಯೆ ವೇಳೆ ರಕ್ತ ಸ್ರಾವವಾಗುವ ಸಾಧ್ಯತೆ ಇರುತ್ತೆ. ಆದ್ರೆ ಭಯ ಪಡುವ ಅವಶ್ಯಕತೆ ಇರುವುದಿಲ್ಲ. ಇದೊಂದು ಸಹಜ ಕ್ರಿಯೆ. ಮೊದಲ ಸಲ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಳ್ಳೋರಿಗೆ ಈ ಸಮಸ್ಯೆ ಕಾಡುತ್ತೆ. ಹದಿವಯಸ್ಸಿನಲ್ಲಿ ಇಂಥ ದುಸ್ಸಾಹಸಕ್ಕೆ ಕೈ ಹಾಕಿದ್ರೆ ಅಪಾಯ ಕಟ್ಟಿಟ್ಟ ಬುತ್ತಿ. ಪುರುಷರ ಶಿಶ್ನ ಮುಂದೊಲಗಿನ ಚರ್ಮ ವೃಷಣ ಕೋಶದವರೆಗೂ ಹಬ್ಬಿರುತ್ತದೆ.ಇದರ ಮೇಲೆ ಒತ್ತಡ ಹೆಚ್ಚಾದಾಗ ಇದು ಹರಿಯುವ ಸಾಧ್ಯತೆ ಇರುತ್ತದೆ. ಇಲ್ಲವೇ ಮೂತ್ರ ಕೋಶ ಉರಿ ಅಥವಾ ಅಲರ್ಜಿಯಾದರೂ ಶಿಶ್ನದಲ್ಲಿ ರಕ್ತ ಒಸರುತ್ತದೆ. ಅವಸರವಾಗಿಯೋ, ಏನು, ಎಂಥ ಅರಿವಿಲ್ಲದೇ ದುಸ್ಸಾಹಸಕ್ಕೆ ಕೈ ಹಾಕಿದರೆ ಶಿಶ್ನದಲ್ಲಿ ಬ್ಲೀಡ್ ಆಗುತ್ತದೆ. ಅತ್ಯಂತ ಸೂಕ್ಷ್ಮ ಚರ್ಮ ಹರಿದಾಗ ರಕ್ತ ಸ್ರಾವ ಕಾಣಿಸಿಕೊಳ್ಳುತ್ತದೆ ಎಂಬುದನ್ನು ಪುರುಷರು ನೆನಪಿನಲ್ಲಿಟ್ಟುಕೊಳ್ಳಬೇಕು. ಹೀಗೆ ಆದಾಗ ಕೆಲವೊಂದು ನಿಮಯಗಳನ್ನು ಪಾಲಿಸಲೇ ಬೇಕಾಗುತ್ತೆ.6 ವಾರಗಳ ಕಾಲ ಸೆಕ್ಸ್ನಲ್ಲಿ ಪಾಲ್ಗೊಳ್ಳದೇ ಇರುವುದು ಒಳಿತು. ಶಿಶ್ನ ಅಥವಾ ಯೋನಿ ಒಣಗಿದ್ದರೆ ಲೂಬ್ರಿಕೆಂಟ್ ಬಳಸಬೇಕು. ಅದಕ್ಕಿಂತ ಹೆಚ್ಚಾಗಿ ಕಾಂಡೋಮ್ ಬಳಸುವುದು ಸೂಕ್ತವಾಗಿರುತ್ತೆ.
ಲೈಂಗಿಕ ಕ್ರಿಯೆಯಲ್ಲಿ ರಕ್ತ ಬರುವುದು ಯಾಕೆ ಗೊತ್ತಾ..!
Date: