ರಿಯಲ್ ಸ್ಟಾರ್ ಸೂಪರ್ ಸ್ಟಾರ್ ಉಪೇಂದ್ರ ಅಭಿನಯದ ‘ಐ ಲವ್ ಯೂ’ ಸಿನಿಮಾ ಇದೆ ತಿಂಗಳು ಜೂನ್ ೧೪ ರಂದು ಬಿಡುಗಡೆಗೆ ಸಿದ್ಧವಾಗಿದ್ದು ಚಿತ್ರದ ಬಿಡುಗಡೆಗೆ ಒಂದು ವಿಷಯ ಎಲ್ಲರಲ್ಲೂ ಅಚ್ಚರಿ ಉಂಟು ಮಾಡಿದೆ.

ಕನ್ನಡದ ಬಹು ಯಶಸ್ವಿ ಚಿತ್ರ ‘ಕೆಜಿಎಫ್’ ಸಿನಿಮಾ ಇಡೀ ಭಾರತದ ತುಂಬ ಸದ್ದು ಮಾಡಿತ್ತು ಅದೇ ಕಾರಣಕ್ಕೆ ಚಿತ್ರದ ಬಿಡುಗಡೆಯಾಗಿದ್ದ ಚಿತ್ರಮಂದಿರಗಳ ಸಂಖ್ಯೆಯೂ ಕೂಡ ಹೆಚ್ಚಾಗಿತ್ತು.
ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲದೆ ಆಂಧ್ರ ಪ್ರದೇಶ, ತೆಲಂಗಾಣದಲ್ಲಿಯೂ ‘ಕೆಜಿಎಫ್’ ಸಿನಿಮಾದ ಬಿಡುಗಡೆಗೆ ಡಿಮ್ಯಾಂಡ್ ಇತ್ತು. ಆದರೆ, ಇದೀಗ, ‘ಐ ಲವ್ ಯೂ’ ಸಿನಿಮಾ ‘ಕೆಜಿಎಫ್’ ಚಿತ್ರವನ್ನು ಮೀರಿಸಿ ದಾಖಲೆಯನ್ನು ಬರೆಯುತ್ತಿದೆ.

ಐ ಲವ್ ಯೂ’ ಸಿನಿಮಾ ತೆಲುಗಿನಲ್ಲಿ ದಾಖಲೆಯ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಆಂಧ್ರ ಮತ್ತು ತೆಲಂಗಾಣದಲ್ಲಿ ‘ಐ ಲವ್ ಯೂ’ ಸಿನಿಮಾಗೆ ಬೇಡಿಕೆ ಜಾಸ್ತಿಯಾಗಿದೆ. ಹೀಗಾಗಿ, ಚಿತ್ರದ ಬಿಡುಗಡೆ ಆಗುತ್ತಿರುವ ಚಿತ್ರಮಂದಿರಗಳ ಸಂಖ್ಯೆಯೂ ಕೂಡ ದೊಡ್ಡದಾಗಿದೆ ಎಮದು ಹೇಳಲಾಗುತ್ತಿದೆ
ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಚಿತ್ರ ರಿಲೀಸ್ ಮಾಡಲಾಗುತ್ತಿದ್ದು ಸದ್ಯಕ್ಕೆ 600 ಚಿತ್ರಮಂದಿರದಲ್ಲಿ ‘ಐ ಲವ್ ಯೂ’ ಚಿತ್ರ ಬಿಡುಗಡೆಯಾಗಲಿದೆಯಂತೆ. ಅದರಲ್ಲಿ ಈಗಾಗಲೇ 400 ಥಿಯೇಟರ್ ಗಳು ಸಿಕ್ಕಿದೆ ಎಂದು ಮಾಹಿತಿ ಲಭ್ಯವಾಗಿದೆ.
ಈ ಹಿಂದೆ ಯಶ್ ಅಭಿನಯದ ‘ಕೆಜಿಎಫ್’ ಸಿನಿಮಾ ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ 350 ಥಿಯೇಟರ್ ಗಳಲ್ಲಿ ತೆರೆಗೆ ಬಂದಿತ್ತು ಈ ದಾಖಲೆಯನ್ನು ಉಪೇಂದ್ರ ಈಗ ಅಳಿಸಿ ಹಾಕಿದ್ದಾರೆ.






