ಭಾರಿ ಗಾಳಿ ಮಳೆಯಿಂದ ಮೂರು ದಿನಗಳ ಹಿಂದೆ ಬೆಂಗಳೂರಿನಲ್ಲಿ ಸಾಕಷ್ಟು ಮರಗಳು ನೆಲಕ್ಕುರುಳಿದ್ದು ನಗರದ ಕೆಲವು ಭಾಗಗಳಲ್ಲಿ ಅವ್ಯವಸ್ಥೆ ತಾಂಡವವಾಡುತ್ತಿದೆ.
ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮನೆ ಮುಂದೆ ದೊಡ್ಡ ಮರವೊಂದು ಬಿದ್ದಿದೆ, ಅದೃಷ್ಟವಶಾತ್ ಮನೆಯಿಂದ ಕೊಂಚ ದೂರ ಕಾಂಪೌಂಡ್ ಮೇಲೆ ಬಿದ್ದಿರುವುದರಿಂದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮನೆಗೆ ಯಾವುದೆ ರೀತಿಯ ಹಾನಿಯಾಗಿಲ್ಲ.
ಆದ್ರೆ ಈಗ ಅಸಲೀ ವಿಷಯ ಏನಪ್ಪಾ ಅಂದ್ರೆ ಮರ ಬಿದ್ದು ಮೂರು ದಿನವಾದ್ರು ಇನ್ನು ಕೂಡ ಸಂಭಂಧಪಟ್ಟ ಅಧಿಕಾರಿಗಳು ಮರವನ್ನು ತೆರವುಗೊಳಿಸಿಲ್ಲ ಅಲ್ಲದೆ ಬಿಬಿಎಂಪಿ ಅಧಿಕಾರಿಗಳು ಇದನ್ನು ಕಂಡು ಕಾಣದಂತೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಬೆಂಗಳೂರಿನ ಹಲವುಕಡೆ ಬಿದ್ದ ಮರವನ್ನು ಕೆಲವೇ ಕ್ಷಣಗಳಲ್ಲಿ ತೆರವು ಗೊಳಿಸಲಾಗಿದೆ ಅಲ್ಲದೆ ರಾಜರಾಜೇಶ್ವರಿ ನಗರದಲ್ಲಿಯೂ ಸಹ ಕೆಲವು ಕಡೆ ಬಿದ್ದ ಮರಗಳನ್ನು ತೆರವುಗೊಳಿಸಲಾಗಿದೆ ಆದ್ರೆ ಚಾಲೆಂಜಿಂಗ್ ಸ್ಟಾರ್ ಮನೆ ಮುಂದೆ ಬಿದ್ದ ಮರವನ್ನು ಇನ್ನು ತೆರವುಗೊಳಿದೆ ಸುಮ್ಮನೆ ಇರುವುದನ್ನು ನೋಡಿದ್ರೆ ಇದು ರಾಜಕೀಯ ದುರುದ್ದೇಶ ಇರಬಹುದು ಎಂದು ಹೇಳಲಾಗುತ್ತಿದೆ.






