ಪುನೀತ್ ರಾಜ್ ಕುಮಾರ್ ಪ್ರತೀ ವರ್ಷ ಚಾಮುಂಡಿ ಬೆಟ್ಟಕ್ಕೆ ತೆರಳಿ ಅಧಿದೇವತೆ ಚಾಮುಂಡೇಶ್ವರಿಯ ದರ್ಶನ ಪಡೆಯುತ್ತಾರೆ, ಪ್ರತೀ ವರ್ಷದಂತೆ ಈವರ್ಷವೂ ಕೂಡಾ ತಾಯಿ ಚಾಮುಂಡೇಶ್ವರಿಯ ದರ್ಶನಕ್ಕೆ ಮೂಸೂರಿಗೆ ತೆರಳಿದ್ದು ವಿಶೇಷ ಅಂದ್ರೆ ಪವರ್ ಸ್ಟಾರ್ ಬರಿಗಾಲಿನಲ್ಲಿಯೇ ಬೆಟ್ಟ ಹತ್ತಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ದಿಢೀರ್ ಭೇಟಿ ನೋಡಿ ಅಲ್ಲಿದ್ದ ಅವರ ಅಭಿಮಾನಿಗಳು ಅಚ್ಚರಿಯ ಜೊತೆಗೆ ಖುಷಿಯಾಗಿದ್ದಲ್ಲದೆ ಬೆಟ್ಟ ಹತ್ತಲು ಸಾಥ್ ಕೂಡಾ ನೀಡಿದ್ದಾರೆ. ಬೆಟ್ಟ ಹತ್ತಿ ಮತ್ತೆ ಕೆಳಗೆ ಇಳಿದು ಬರುವ ವರೆಗೂ ಅಭಿಮಾನಿಗಳು ಪುನೀತ್ ಜೊತೆಗೆ ಹೆಜ್ಜೆ ಹಾಕಿದ್ದಾರೆ ವಿಶೇಷವಾಗಿತ್ತು.
ಸದ್ಯ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ‘ಯುವರತ್ನ’ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದು ಚಿತ್ರೀಕರಣ ಮೈಸೂರಿನಲ್ಲಿ ನಡೆಯುತ್ತಿದೆ.






