ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ತಹಸೀಲ್ದಾರ್ ವಿರುದ್ಧ ಫುಲ್ ಗರಂ ಆಗಿದ್ದು, : ಕಪಾಳಕ್ಕೆ ಕೊಡ್ಬೇಕಾ..? ಏನ್ ತಮಾಷೆ ಮಾಡ್ತಿದ್ದೀಯಾ ಎಂದು ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಗರಂ ಆಗಿದ್ದಾರೆ.

ಛತ್ತರ ತಾಂಡಾದಲ್ಲಿ ಕುಡಿವ ನೀರು, ಉದ್ಯೋಗ, ನೀಡಿಲ್ಲ ಎಂದು ಗ್ರಾಮಸ್ಥರ ಅಹವಾಲು ನೀಡಿದ್ದು, ಅಹವಾಲು ಸ್ವೀಕರಿಸಿದ ಯಡಿಯೂರಪ್ಪ, ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡಿದ್ದಾರೆ.

ಇನ್ನು ಈ ವೇಳೆ ಮಾತನಾಡಿದ ಯಡಿಯೂರಪ್ಪ, ರಾಜ್ಯ ಸರ್ಕಾರ ಬರ ನಿರ್ವಹಣೆಯಲ್ಲಿ ವಿಫಲವಾಗಿದೆ.ಅಧಿಕಾರಿಗಳು ಕೆಲಸ ಮಾಡುತ್ತಿಲ್ಲ. ಕುಡಿಯುವ ನೀರು ಹಾಗು ಉದ್ಯೋಗ ನೀಡವಲ್ಲಿ ವಿಫಲವಾಗಿದೆ. ಇನ್ನೆರಡು ದಿನದಲ್ಲಿ ಉದ್ಯೋಗ ನೀಡಬೇಕು ಎಂದು ಬಿಎಸ್‌ವೈ ಆಗ್ರಹಿಸಿದ್ದಾರೆ.






