ಬೆತ್ತಲಾದ ಓವೈಸಿ.. ಬಟ್ಟೆ ಮುಚ್ಚಿಕೊಂಡ ಅಫ್ರಿದಿ..!!

Date:

`ಭಾರತ್ ಮಾತಾಕಿ ಜೈ’ ಅನ್ನಬೇಕೆಂದು ಸಂವಿಧಾನದಲ್ಲಿ ಬರೆದಿಲ್ಲ, ಕತ್ತಿನ ಮೇಲೆ ಕತ್ತಿಯಿಟ್ಟರೂ ನಾನು `ಭಾರತ್ ಮಾತಾಕೀ ಜೈ’ ಅನ್ನಲ್ಲ ಎಂದಿದ್ದ ಓವೈಸಿ ಮೇಲೆ ಕೇಸ್ ಬಿದ್ದಿದೆ. ಈ ದೇಶದಲ್ಲಿ ಹುಟ್ಟಿ, ಈ ದೇಶದಲ್ಲಿ ಬೆಳೆದು, ಈ ದೇಶದ ಅನ್ನ, ಶಿಕ್ಷಣ, ಅಹಂಕಾರ, ಅಧಿಕಾರಗಳನ್ನು ಪಡೆದ ಅಸಾದುದ್ದೀನ್ ಒವೈಸಿ, ಪಾಕಿಸ್ತಾನದ ಕ್ರಿಕೇಟಿಗ ಶಾಹೀದ್ ಅಫ್ರಿದಿ ಮುಂದೆ ಬೆತ್ತಲಾಗಿದ್ದಾರೆ. ಇಲ್ಲಿ ಭಾರತ ಪಾಕಿಸ್ತಾನಕ್ಕಿಂತ ನಮ್ಮನ್ನು ಹೆಚ್ಚು ಪ್ರೀತಿಸುತ್ತದೆ ಎಂದಿದ್ದ ಆ ಪಾಕ್ ಕ್ರಿಕೇಟಿಗನಿಗೂ ಓವೈಸಿಗೂ ಸಾಕಷ್ಟು ವ್ಯತ್ಯಾಸವನ್ನು ಕಾಣಬಹುದು. ಅಫ್ರಿದಿ ಪಾಕಿಸ್ತಾನದಲ್ಲಿ ಹುಟ್ಟಿ ಬೆಳೆದಿರುವುದರಿಂದ ಅವನಿಗೆ ಆ ದೇಶದ ನೈಜ ಸ್ಥಿತಿಗಳ ಬಗ್ಗೆ ಅರಿವಿದೆ. ಆದರೆ ಈ ನಿಜಾಮರ ಕುಡಿಗಳಿಗೆ ನಮ್ಮ ದೇಶವೇಕೋ ನರಕವೆನಿಸಿದೆ. ಈ ದೇಶದಲ್ಲಿ ಸಮಸ್ಯೆಗಳು ಇಲ್ಲವೆಂದೇನಲ್ಲ. ಆದರೆ ಆ ಸಮಸ್ಯೆಗಳನ್ನು ಪ್ರತಿಭಟಿಸುವುದಕ್ಕೆ ಅನೇಕ ರಿವಾಜುಗಳಿವೆ. ಆದರೆ ಓವೈಸಿ ಭಾರತಮಾತೆಯ ಬುಡಕ್ಕೆ ಕೈ ಹಾಕಿ ಶಾಂತಿ ಕದಡುವ ಕೆಲಸ ಮಾಡಿದ್ದಾರೆ. ಈ ದೇಶಕ್ಕೆ ಜೈಕಾರ ಹಾಕುವುದಿಲ್ಲ ಎಂದು ಅವರು ಹೇಳಿದ್ದು ಅತ್ಯಂತ ಹೇಯ.

`ಭಾರತವನ್ನು ವಿರೋಧಿಸುವವರು, ಒಂದೇ ಒಂದು ಸಲ ಪಾಕಿಸ್ತಾನಕ್ಕೆ ಹೋಗಿಬರಲಿ. ಇಲ್ಲಿ ವಾಪಾಸಾದ ಮರುಕ್ಷಣವೇ ಈ ನೆಲವನ್ನು ಮುತ್ತಿಕ್ಕುತ್ತಾರೆ’ ಎಂದಿದ್ದು ಸಾಹಿತಿ ಜಾವೇದ್ ಅಖ್ತರ್. ಒಂದೇ ಧರ್ಮದಲ್ಲಿರುವವರ ಭಿನ್ನ ಮನಃಸ್ಥಿತಿಗಳಿವು. ವಿವಾದಾತ್ಮಕ ಹೇಳಿಕೆಗಳಿಂದ ಸಮಾಜದ ಸ್ವಾಸ್ತ್ಯ ಕೆಡುತ್ತದೆಯೇ ವಿನಃ ನೆಮ್ಮದಿ ನೆಲೆಸುವುದಿಲ್ಲ. ಈ ದೇಶದಲ್ಲಿ ಎಲ್ಲರೂ ಒಗ್ಗಟ್ಟಾಗಿರಲು ಕಿಡಿ ಹೊತ್ತಿಸುವ ಬೇರೆ ಬೇರೆ ಕೋಮಿನವರ ಮನಃಸ್ಥಿತಿಗಳ ಬದಲಾಗಬೇಕು. ಆಗ ಮಾತ್ರ ನಾಡು ಸುಭಿಕ್ಷವಾಗುತ್ತದೆ.

  • ರಾ.ಚಿಂತನ್

 

POPULAR  STORIES :

ಪೆಟ್ರೋಲ್ ರೇಟು.. ಮೋದಿ ಏಟು..!? ಒಂದು ಲೀಟರ್ ಪೆಟ್ರೋಲ್ಗೆ ಹನ್ನೆರಡು ರೂಪಾಯಿ..?!!

ಭೂಮಿಗೆ ಜ್ವರ ಬಂದಿದೆ..!?

ನಾಯಿ, ಬೆಕ್ಕುಗಳು ಮತ್ತು ಇಸ್ಲಾಂ ರಾಷ್ಟ್ರ..!?

ಭಿಕ್ಷೆ ಹಾಕದ ಆ ಹುಡುಗ ಅದೆಂಥಾ ಕಷ್ಟದಲ್ಲಿದ್ದ ಗೊತ್ತಾ..?! ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡ್ಬೇಕು..!

ನಮ್ಮನೆ ಒಂದು ದೇಶ, ಎದುರುಮನೆ ಮತ್ತೊಂದು ದೇಶ..! ಬೆರಗುಗೊಳಿಸುವ ಅಂತರರಾಷ್ಟ್ರೀಯ ಗಡಿಗಳು..

ಇಂಥಾ ಆನೆಯನ್ನೆಲ್ಲಾದರೂ ನೋಡಿದ್ದೀರಾ..? ಚಿಕ್ಕ ವೀಡೀಯೋ ದೊಡ್ಡ ಮೆಸೇಜ್..!

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...