ವಿಶ್ವಕಪ್ಗೆ ಟೀಮ್ ಇಂಡಿಯಾ ಆಯ್ಕೆ ಪ್ರಕ್ರಿಯೆಯ ಟಾಕ್ ಕೇಳಿ ಬರುತ್ತಿದ್ದ ಮೊದಲೇ 2019ರ ವಿಶ್ವಕಪ್ನ ಟೀಮ್ ಇಂಡಿಯಾದಲ್ಲಿ ರಿಷಭ್ ಪಂತ್ ಸ್ಥಾನ ಗಿಟ್ಟಿಸಿಕೊಳ್ಳುತ್ತಾರೆ ಎನ್ನುವ ಮಾತುಗಳು ಕೇಳಿಬಂದಿದ್ದವು. ಬಿಸಿಸಿಐ ಆಯ್ಕೆ ಸಮಿತಿ ಇವತ್ತು ವಿಶ್ವಕಪ್ಗೆ ವಿರಾಟ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾವನ್ನು ಆಯ್ಕೆ ಮಾಡುತ್ತದೆ ಎಂಬ ಸುದ್ದಿ ಬಂದಂತೆ, ರಿಷಭ್ ಪಂತ್ ಆಯ್ಕೆ ಖಚಿತ ಎಂದು ಹೇಳಲಾಗಿತ್ತು.
ವಿಶ್ವಕಪ್ಗೆ ಆಯ್ಕೆಯಾಗುವ 15 ಮಂದಿ ಸದಸ್ಯರ ತಂಡದಲ್ಲಿ ರಿಷಭ್ ಪಂತ್ ಗೆ ಸ್ಥಾನ ಖಚಿತ ಎಂದುಕೊಂಡಿದ್ದಾಗ ಶಾಕ್ ಕಾದಿತ್ತು. ರಿಷಭ್ ಪಂತ್ ಗೆ ವಿಶ್ವಕಪ್ ತಂಡದಲ್ಲಿ ಅವಕಾಶ ಸಿಕ್ಕಿರಲಿಲ್ಲ. ಆದರೆ, ಅವರಿಗೀಗ ಬಿಸಿಸಿಐ ಗುಡ್ ನ್ಯೂಸ್ ಕೊಟ್ಟಿದೆ.
ಟೀಮ್ ಇಂಡಿಯಾದ ಓಪನರ್ ಶಿಖರ್ ಧವನ್ ಅವರು ಗಾಯಗೊಂಡಿರೋದ್ರಿಂದ ಮೂರುವಾರಗಳ ಕಾಲ ವಿಶ್ರಾಂತಿ ಪಡೆಯಬೇಕಾಗಿದೆ. ಆದ್ದರಿಂದ ಅವರ ಬದಲಿಗೆ ರಿಷಭ್ ಪಂತ್ ಅವರನ್ನು ಇಂಗ್ಲೆಂಡ್ ಗೆ ಕಳುಹಿಸಿಕೊಡಲು ಬಿಸಿಸಿಐ ನಿರ್ಧರಿಸಿದೆ. ರಿಷಭ್ ಅವರಿಗೆ 48ಗಂಟೆಯೊಳಗೆ ಇಂಗ್ಲೆಂಡ್ಗೆ ಹೋಗುವಂತೆ ತಿಳಿಸಿದೆ ಎಂದು ತಿಳಿದುಬಂದಿದೆ.
ಜೂನ್ 13ರಂದು ಭಾರತ ನ್ಯೂಜಿಲೆಂಡ್ ವಿರುದ್ಧ ಆಡಲಿದೆ. ಮೊದಲ ಎರಡು ಪಂದ್ಯಗಳಲ್ಲಿ ಕ್ರಮವಾಗಿ ಸೌತ್ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ವಿರುದ್ಧ ಗೆಲುವು ಸಾಧಿಸಿದೆ. ಶಿಖರ್ ಧವನ್ ಆಸೀಸ್ ಎದುರು ಶತಕ ಬಾರಿಸಿ ಗೆಲುವಿನ ರೂವಾರಿ ಎನಿಸಿದ್ದರು. ಪಂದ್ಯದ ವೇಳೆ ಬೆರಳಿಗೆ ಪೆಟ್ಟು ಮಾಡಿಕೊಂಡಿದ್ದಾರೆ. ವಿಶ್ರಾಂತಿ ಅವರಿಗೆ ಅಗತ್ಯವಿದೆ.