ವಿಶ್ವಕಪ್ ನಲ್ಲಿ ಎಲ್ಲಾ ಪಂದ್ಯಗಳಿಗಿಂತ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯತ್ತ ಎಲ್ಲರ ಚಿತ್ತ. ಭಾರತ ಮತ್ತು ಪಾಕ್ ಮುಖಾಮುಖಿ ಎಂದರೆ ಪ್ರತಿಬಾರಿಯೂ ಇಂಥಾ ಕ್ಯೂರಿಯಾ ಸಿಟಿ ಇದ್ದೇ ಇರುತ್ತದೆ.
ಪುಲ್ವಾಮಾ ದಾಳಿ ಬಳಿಕ ವಿಶ್ವಕಪ್ನಲ್ಲಿ ಭಾರತ ಪಾಕಿಸ್ತಾನದ ವಿರುದ್ಧ ಕ್ರಿಕೆಟ್ ಆಡಬಾರದು ಎಂಬ ಒತ್ತಡ ಬಂದಿತ್ತು. ಬಳಿಕ ಈ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದು, ಏನೇನೋ ಆಗಿ ಅಂತೂ-ಇಂತೂ ಭಾರತ ಪಾಕ್ ವಿರುದ್ಧ ಆಡಲೇ ಬೇಕಾಗಿದೆ.
ಜೂನ್ 16ರಂದು ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಫಿಕ್ಸ್ ಆಗಿದೆ. ಆದರೆ ಈ ಪಂದ್ಯ ರದ್ದಾಗುವ ಸಾಧ್ಯತೆ ಇದೆ. ಆದರೆ, ಇದಕ್ಕೆ ಕಾರಣ ರಾಜತಾಂತ್ರಿಕ ಕಾರಣವಲ್ಲ. ಬದಲಾಗಿ ಮಳೆ.
ಹೌದು, ಈಗಾಗಲೇ ನಾಲ್ಕೈದು ಮ್ಯಾಚ್ಗಳಿಗೆ ಅಡ್ಡಿ ಪಡಿಸಿರುವ ವರುಣ ಭಾರತ ಮತ್ತು ಪಾಕ್ ನಡುವಿನ ಪಂದ್ಯಕ್ಕೂ ಅಡ್ಡಿಪಡಿಸುವ ಸಾಧ್ಯತೆ ಇದೆ. ಹೀಗಾಗಿ ಅಭಿಮಾನಿಗಳು ನಿರಾಸರಾಗಿದ್ದಾರೆ. ಮಳೆ ಬರದಿರಲಿ ಎಂದು ಪ್ರಾರ್ಥನೆ ನಡೆಸುತ್ತಿದ್ದಾರೆ.
ಪುಲ್ವಾಮಾ ಉಗ್ರ ಆತ್ಮಾಹುತಿ ಬಾಂಬ್ ದಾಳಿ ಬಳಿಕ ವಿಶ್ವಕಪ್ ಟೂರ್ನಿಯಲ್ಲಿ ಪಾಕ್ ವಿರುದ್ಧದ ಪಂದ್ಯ ಆಡಬಾರದು ಎಂಬ ಕೂಗು ಭಾರತದಲ್ಲಿ ಜೋರಾಗಿತ್ತು. ಇದರ ಮಧ್ಯೆ ಪಾಕ್ ವಿರುದ್ಧದ ಪಂದ್ಯವನ್ನು ಆಡಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿತ್ತು. ಆದರೆ ಇದೀಗ ಇಂಡೋ-ಪಾಕ್ ಪಂದ್ಯ ರದ್ದಾಗುವ ಸಾಧ್ಯತೆ ಹೆಚ್ಚಾಗಿದೆ.
ಭಾರತ ತನ್ನ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು, ಎರಡನೇ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿದೆ. ಮೂರನೇ ಪಂದ್ಯ ನಾಳೆ ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿದೆ.
ಕ್ರಿಕೆಟ್ ಅಭಿಮಾನಿಗಳಿಗೆ ನಿರಾಸೆ ; ಇಂಡೋ-ಪಾಕ್ ವಾರ್ ರದ್ದು..?
Date: