3ನೇ ವಿಶ್ವಕಪ್ ಗೆದ್ದು ತರಲು ವಿರಾಟ್ ಕೊಹ್ಲಿ ಸಾರಥ್ಯದ ಭಾರತ ತಂಡ ಸಕಲ ಸನ್ನದ್ಧವಾಗಿದೆ. ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾದ ವಿರುದ್ಧ ಭರ್ಜರಿ ಗೆಲುವುದ ದಾಖಲಿಸಿರುವ ಭಾರತ ಇಂದು ನ್ಯೂಜಿಲೆಂಡ್ ವಿರುದ್ಧ ಸೆಣೆಸಲಿದೆ.
ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸಿದ ಶಿಖರ್ ಧವನ್ ಪಂದ್ಯದ ವೇಳೆ ಗಾಯಗೊಂಡಿದ್ದಾರೆ. ಆದ್ದರಿಂದ ಇಂದಿನ ಪಂದ್ಯದಿಂದ ದೂರ ಉಳಿದಿದ್ದಾರೆ. ಅವರಿಗೆ ಮೂರು ವಾರಗಳ ವಿಶ್ರಾಂತಿ ಹಿನ್ನೆಲೆಯಲ್ಲಿ ಅವರ ಬದಲಿಗೆ ರಿಷಭ್ ಪಂತ್ ಅವರನ್ನು ಇಂಗ್ಲೆಂಡ್ಗೆ ಕಳುಹಿಸಿಕೊಡಲು ಬಿಸಿಸಿಐ ನಿರ್ಧರಿಸಿದೆ ಎಂದು ಆಸೀಸ್ ವಿರುದ್ಧದ ಪಂದ್ಯದ ಮರುದಿನವೇ ಸುದ್ದಿ ಹರಿದಾಡಿತ್ತು.
ಆದರೆ. ಶಿಖರ್ ಬದಲಿಗೆ ಯಾವ ಆಟಗಾರರನ್ನು ಕೂಡ ಕರೆಸಿಕೊಳ್ಳುವ ಯೋಚನೆ ಇಲ್ಲ. ಶಿಖರ್ ಅವರು ನಮಗೆ ಮುಖ್ಯ. ಅವರನ್ನು ಇಲ್ಲೇ ಉಳಿಸಿಕೊಳ್ಳಲಾಗುತ್ತದೆ. ಮೆಡಿಕಲ್ ಟೀಮ್ ಅವರನ್ನು ಅಬ್ಸರ್ವೇಷನ್ನಲ್ಲಿಟ್ಟಿದೆ ಎಂದು ಮ್ಯಾನೇಜ್ಮೆಂಟ್ ಹೇಳಿತ್ತು. ಆದರೆ. ಬಿಸಿಸಿಐ ಆಯ್ಕೆ ಸಮಿತಿ ಬೇರೆಯದೇ ಯೋಚನೆ ಮಾಡಿದೆ. ಬ್ಯಾಕಪ್ ಆಗಿ ರಿಷಭ್ ಪಂತ್ ಅವರನ್ನು ಕಳುಹಿಸಿಕೊಡಲು ಡಿಸೈಡ್ ಮಾಡಿದೆ. ಆಯ್ಕೆ ಸಮಿತಿ ಮುಖ್ಯಸ್ಥ ಎಂಎಸ್ಕೆ ಪ್ರಸಾದ್, ದೇವಂಗ್ ಗಾಂಧಿ ಹಾಗೂ ಸರನ್ದೀಪ್ ಸಿಂಗ್ ಅವರು ರಿಷಭ್ ಪಂತ್ ಅವರ ಹೆಸರನ್ನು ಘೋಷಿಸಿ ಅವರನ್ನು ಬೇಗನೇ ಇಂಗ್ಲೆಂಡ್ಗೆ ಕಳುಹಿಸಿಕೊಡಲು ಉತ್ಸುಕವಾಗಿದೆ.
ಶಿಖರ್ ಧವನ್ ಗಾಯಗೊಂಡ ಬೆನ್ನಲ್ಲೇ ಟೀಮ್ ಮ್ಯಾನೇಜ್ಮೆಂಟ್ ಮತ್ತು ಆಯ್ಕೆ ಸಮಿತಿ ನಡುವೆ ರಿಷಭ್ ಪಂತ್ ಆಯ್ಕೆಗಾಗಿ ಮುಸುಕಿನ ಗುದ್ದಾಟ ನಡೆದಿವೆ.
ರಿಷಭ್ ಪಂತ್ ಆಯ್ಕೆ ವಿಚಾರದಲ್ಲಿ ಬಿಸಿಸಿಐ ಮ್ಯಾನೇಜ್ಮೆಂಟ್, ಆಯ್ಕೆ ಸಮಿತಿ ನಡುವೆ ಮುಸುಕಿನ ಗುದ್ದಾಟ..!
Date: