ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸಿದ್ದ ಶಿಖರ್ ಧವನ್ ಎಡಗೈ ಹೆಬ್ಬರಳಿಗೆ ಪೆಟ್ಟು ಮಾಡಿಕೊಂಡಿದ್ದಾರೆ. ಹೀಗಾಗಿ ಮೂರು ವಾರಗಳ ಕಾಲ ಅವರು ಆಡಂಗಿಲ್ಲ ಎನ್ನುವ ಸುದ್ದಿ ಹೊರ ಬರುತ್ತಿದ್ದಂತೆ ಶುರುವಾಗಿದ್ದು ಓಪನರ್ ಯಾರು? ಆಡುವ 11ರ ಬಳಗದಲ್ಲಿ ಚಾನ್ಸ್ ಪಡೆಯುವ ಆಟಗಾರ ಯಾರು ಎನ್ನೋದು.
ಧವನ್ ಬದಲಿಗೆ ಓಪನರ್ ಆಗಿ ಕನ್ನಡಿಗ ಕೆ.ಎಲ್ ರಾಹುಲ್ ಅನ್ನೋದು ಫಿಕ್ಸ್ ಆಯ್ತು. ಸರಿ ರಾಹುಲ್ ಆರಂಭಿಕ ಆಟಗಾರ ಆಗಿ ಕಣಕ್ಕೆ ಇಳಿದರೆ 4ನೇ ಕ್ರಮಾಂಕಕ್ಕೆ ಯಾರು ಎನ್ನುವುದು ಮತ್ತೊಂದು ಪ್ರಶ್ನೆಯಾಯ್ತು. ಆಗ ರಿಷಭ್ ಪಂತ್ ಅವರನ್ನು ಇಂಗ್ಲೆಂಡ್ ಗೆ ಕರೆಸಿಕೊಳ್ಳುವ ಸುದ್ದಿ ಹರಿದಾಡಿತು. ಆದರೆ, ಟೀಮ್ ಮ್ಯಾನೇಜ್ಮೆಂಟ್ ಧವನ್ ಅವರು ಇಂಗ್ಲೆಂಡ್ನಲ್ಲೇ ಇರಲಿ ಸದ್ಯ ಹೆಚ್ಚುವರಿ ಆಟಗಾರ ಬೇಡ ಎನ್ನುವ ತೀರ್ಮಾನಕ್ಕೆ ಬಂತು. ಆಗ ದಿನೇಶ್ ಕಾರ್ತಿಕ್ ಮತ್ತು ವಿಜಯ್ ಶಂಕರ್ ಅವರಲ್ಲಿ ಯಾರು 4ನೇ ಕ್ರಮಾಂಕಕ್ಕೆ ಎನ್ನುವುದು ಚರ್ಚೆಗೆ ಗ್ರಾಸವಾಯ್ತು. ದಿನೇಶ್ ಕಾರ್ತಿಕ್ ಪಕ್ಕಾ ಎಂದು ಹೇಳಲಾಯಿತಾದರೂ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡಕ್ಕೂ ಆಗ್ತಾರೆ ಎಂದು ವಿಜಯ್ ಶಂಕರ್ ಆಯ್ಕೆಯ ಸಾಧ್ಯತೆಯೂ ಇತ್ತು. ಇಲ್ಲವೇ ರವೀಂದ್ರ ಜಡೇಜಾ ಅವರ ಹೆಸರು ಕೂಡ ಅಲ್ಲಲ್ಲಿ ಕೇಳಿಬಂದಿತ್ತು.
ಆದರೆ, ನ್ಯೂಜಿಲೆಂಡ್ ವಿರುದ್ಧದ ಪಂದ್ಯಕ್ಕೆ ರಾಹುಲ್ ಆರಂಭಿಕರಾಗಿ ಬರಲು ಸಾಧ್ಯವಾಗಿಲ್ಲ. ದಿನೇಶ್ ಕಾರ್ತಿಕ್, ವಿಜಯ್ ಶಂಕರ್ ಅವರಿಗೂ ಅವಕಾಶ ಸಿಗಲಿಲ್ಲ. ಕಾರಣ ವರುಣ..!
ಯೆಸ್, ಭಾರತ ಮತ್ತು ನ್ಯೂಜಿಲೆಂಡ್ ವಿರುದ್ಧದ ಪಂದ್ಯ ಕೂಡ ಮಳೆಯಿಂದ ರದ್ದಾಗಿದೆ. ಒಂದೇ ಒಂದು ಬಾಲ್ ಇರಲಿ, ಟಾಸ್ ಕೂಡ ಹಾಕಲು ಮಳೆ ಬಿಡಲಿಲ್ಲ. ಶ್ರೀಲಂಕಾ-ಪಾಕಿಸ್ತಾನ, ದಕ್ಷಿಣ ಆಫ್ರಿಕಾ-ವೆಸ್ಟ್ಇಂಡೀಸ್, ಶ್ರೀಲಂಕಾ – ಬಾಂಗ್ಲಾದೇಶ ಗಳ ನಡುವಿನ ಪಂದ್ಯವನ್ನು ನುಂಗಿದ್ದ ವರುಣ ಭಾರತ-ನ್ಯೂಜಿಲೆಂಡ್ ಪಂದ್ಯವನ್ನು ಕೊಚ್ಚಿ ಹಾಕಿದ್ದಾನೆ.
ರಾಹುಲ್ಗೂ ಬಿಡಲಿಲ್ಲ, ಕಾರ್ತಿಕ್, ವಿಜಯ್ಗೂ ಚಾನ್ಸ್ ಸಿಗಲಿಲ್ಲ..!
Date: