ವಿಶ್ವಕಪ್ನಲ್ಲಿ ಎಲ್ಲರೂ ಎದುರು ನೋಡುತ್ತಿರುವ ಪಂದ್ಯ ಭಾರತ VS ಪಾಕ್. ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಅಂದರೆ ಅದು ವಿಶ್ವಕ್ರಿಕೆಟ್ನ ಹೈವೋಲ್ಟೇಜ್ ಪಂದ್ಯ. ಇನ್ನು ವಿಶ್ವಕಪ್ ನಲ್ಲಿ ಈ ತಂಡುಗಳು ಮುಖಾಮುಖಿ ಆಗುತ್ತವೆ ಎಂದರೆ ಕೇಳ ಬೇಕೆ? ಹಾಗೆಯೇ ನಾಳಿನ ಪಂದ್ಯದ ಮೇಲೆ ಕುತೂಹಲ ಸಹಜ.
ವಿಶ್ವಕಪ್ ಇತಿಹಾಸದಲ್ಲಿ ಪಾಕಿಸ್ತಾನ ಭಾರತದ ಎದುರು ಒಂದೇ ಒಂದು ಪಂದ್ಯವನ್ನು ಗೆದ್ದಿಲ್ಲ. ಭಾರತ ನಾಳೆಯೂ ಗೆದ್ದು ಅಜೇಯ ಓಟ ಮುಂದುವರೆಸುವ ಉತ್ಸಾಹದಲ್ಲಿದೆ. ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ವಿರುದ್ಧ ಭಾರತ ಗೆದ್ದಿದೆ. ನ್ಯೂಜಿಲೆಂಡ್ ವಿರುದ್ಧ ಭಾರತ ಗೆಲ್ಲುವ ಉತ್ಸಾಹದಲ್ಲಿತ್ತು. ಆದರೆ. ಆ ಪಂದ್ಯ ಮಳೆಯಿಂದಾಗಿ ರದ್ದಾಗಿದೆ.
ಪಾಕಿಸ್ತಾನ ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಪಂದ್ಯದಲ್ಲಿ ಸೋಲನುಭವಿಸಿತ್ತು. ಎರಡನೇ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಗೆದ್ದಿತು. ಶ್ರೀಲಂಕಾ ವಿರುದ್ಧದ ಪಂದ್ಯ ರದ್ದಾಗಿದೆ. ಆಸ್ಟ್ರೇಲಿಯಾ ವಿರುದ್ಧ ಪಾಕ್ ಸೋತಿದೆ. ಆದ್ದರಿಂದ 2 ಸೋಲುಂಡಿರುವ ಪಾಕ್ ಅಜೇಯ ಭಾರತದ ವಿರುದ್ಧ ಅದೂ ಇಷ್ಟು ದಿನ ಗೆಲ್ಲದೇ ಚೊಚ್ಚಲ ಗೆಲುವನ್ನು ಪಡೆಯಲು ಸಾಧ್ಯವೇ ಇಲ್ಲ.
ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧದ ಪಂದ್ಯದ ವೇಳೆ ಭಾರತ ಗೆಲ್ಲುತ್ತದೆ ಎಂದು ಭವಿಷ್ಯ ನುಡಿದಿದ್ದ ಪಾಕಿಸ್ತಾನದ ಮಾಜಿ ವೇಗಿ ಶೋಯಭ್ ಅಕ್ತರ್ ಭಾರತ ಮತ್ತು ಪಾಕ್ ವಿರುದ್ಧದ ಪಂದ್ಯದಲ್ಲಿ ಯಾರು ಗೆಲ್ಲುತ್ತಾರೆ ಎನ್ನುವ ಭವಿಷ್ಯವನ್ನೂ ನುಡಿದಿದ್ದಾರೆ.
ಮೀಮ್ ಟ್ವೀಟ್ ಮಾಡಿರುವ ಶೋಯೆಬ್ ಅಖ್ತರ್ ಅವರು ಭಾರತ-ಪಾಕಿಸ್ತಾನಗಳ ಪಂದ್ಯದಲ್ಲಿ ಗೆಲ್ಲುವುದು ಮಳೆ ಎಂದು ಭವಿಷ್ಯ ನುಡಿದಿದ್ದಾರೆ..! ಈ ಬಾರಿಯ ಟೂರ್ನಿಯಲ್ಲಿ ತಂಡಗಳಿಗಿಂತ ಮಳೆಯೇ ಹೆಚ್ಚು ಸದ್ದು ಮಾಡುತ್ತಿರುವುದರಿಂದ ಕ್ರಿಕೆಟ್ ಪ್ರಿಯರಿಗೆ ನಿರಾಶೆಯಾಗಿದೆ.
ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಪಾಕಿಸ್ತಾನದ ನಾಯಕ ಸರ್ಫರಾಜ್ ಅಹಮದ್ ಟಾಸ್ ಬಳಿಕ ಈಜುತ್ತಿರುವುದು. ಕ್ರಿಕೆಟ್ ವಿಶ್ಲೇಷಕರು ದೋಣಿಯಲ್ಲಿ ನಿಂತು ವಿಶ್ಲೇಸುತ್ತಿರುವುದರ ಬಗ್ಗೆ ಮೇಮ್ಸ್ ಹಾಕಿರುವ ಶೋಯಭ್ ಮಳೆಯೇ ಗೆಲ್ಲುವುದು ಎಂದು ತಮಾಷೆ ಮಾಡಿದ್ದಾರೆ.
ಈಗಾಗಲೇ 4 ಪಂದ್ಯಗಳನ್ನು ನುಂಗಿರುವ ಮಳೆ ಭಾರತ-ಪಾಕ್ ಕದನಕ್ಕೆ ಅನುವು ಮಾಡಿಕೊಡಲಿ ಎಂದು ಅಭಿಮಾನಿಗಳು ಪ್ರಾರ್ಥನೆ ಮಾಡುತ್ತಿದ್ದಾರೆ.