ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ಮಗಳು ಲವ್ವಲ್ಲಿ ಬಿದ್ದಿದ್ದಾಳೆ. ಸಚಿನ್ ಪುತ್ರಿ ಸಾರಾ ತೆಂಡೂಲ್ಕರ್ ಅವರ ಹೃದಯ ಕದ್ದ ಚೋರ ಕೂಡ ಯುವ ಸ್ಟಾರ್ ಕ್ರಿಕೆಟಿಗ..!
ಟೀಮ್ ಇಂಡಿಯಾದಲ್ಲಿ ಮಿಂಚಲು ಸಿದ್ಧರಾಗಿರುವ ಯುವ ಆಟಗಾರ ಶುಭ್ಮನ್ ಗಿಲ್ ಅವರೊಡನೆ ಸಾರಾ ತೆಂಡೂಲ್ಕರ್ ಲವ್ವಲ್ಲಿ ಬಿದ್ದಿದ್ದಾರೆ ಎಂದು ಹೇಳಲಾಗುತ್ತಿದೆ. 2018ರ ಅಂಡರ್ 19 ವಿಶ್ವಕಪ್ ನಲ್ಲಿ ಅತ್ಯುತ್ತಮ ಪ್ರದರ್ಶನವನ್ನು ನೀಡಿದ್ದರು ಶುಭ್ಮನ್ ಗಿಲ್. ಅವರೀಗ ಸದ್ಯ ಪಂಜಾಬ್ ಪರ ಬ್ಯಾಟಿಂಗ್ ಮಾಡುತ್ತಿದ್ದಾರೆ.
ಶುಭ್ಮನ್ ಅವರು ಇನ್ಸ್ಟಾಗ್ರಾಮ್ನಲ್ಲಿ ಕಾರೊಂದರ ಮುಂದೆ ನಿಂತಿರುವ ಫೋಟೋವನ್ನು ಅಪ್ಲೋಡ್ ಮಾಡಿದ್ದಾರ. ತಮ್ಮ ಹೊಸ ಕಾರಿನ ಮುಂದೆ ನಿಂತಿರುವ ಫೋಟೋವದು. ಫೋಟೋಗೆ ಸಚಿನ್ ಮಗಳು ಸಾರಾ ಶುಭ ಕೋರಿ ಕಾಮೆಂಟ್ ಮಾಡಿದ್ದಾರೆ. ಅದಕ್ಕೆ ಗಿಲ್ ಧನ್ಯವಾದ ತಿಳಿಸಿದ್ದಾರೆ.
ಅಷ್ಟೇ ಆಗಿದ್ದರೆ ಲವ್ ಎನ್ನುವ ಅನುಮಾನ ಕಾಡ್ತಾ ಇರಲಿಲ್ಲ. ಆದರೆ, ಇದಕ್ಕೆ ಕಾರಣ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ..! ಹಾರ್ದಿಕ್ ಪಾಂಡ್ಯ ಕಾಮೆಂಟ್ ಮಾಡಿ,
‘ಮೋಸ್ಟ್ ವೆಲ್‍ಕಮ್ ಫ್ರಮ್ ಹರ್ ಎಂದು ಹೇಳಿದ್ದಾರೆ. ಈ ಪೋಸ್ಟ್ ಸಾರಾ ಮತ್ತು ಗಿಲ್ ನಡುವೆ ಪ್ರೀತಿ ಇದೆ..ಅವರಿಬ್ಬರ ಲವ್ ಕಥೆ ಹಾರ್ದಿಕ್ ಪಾಂಡ್ಯಗೆ ಗೊತ್ತಿದೆ ಎನ್ನುವಂತಿದೆ.
ಶುಭ್ ಮನ್ ಗಿಲ್ ಅವರು ಟೀಮ್ ಇಂಡಿಯಾದ ಕದ ತಟ್ಟುತ್ತಿರುವ ಯುವ ಬ್ಯಾಟ್ಸ್ಮನ್. ಮುಂದಿನ ದಿನಗಳಲ್ಲಿ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯುವುದರಲ್ಲಿ ನೋ ಡೌಟ್.