ಟೀಮ್ ಇಂಡಿಯಾ ವಿರಾಟ್ ಕೊಹ್ಲಿ ಹಾಗೂ ಉಪ ನಾಯಕ ರೋಹಿತ್ ಶರ್ಮಾ ನಡುವೆ ಭಾರೀ ಪೈಪೋಟಿ ಇದೆ..! ಅದು ಆ ಒಂದೇ ಒಂದು ಪಟ್ಟಕ್ಕಾಗಿ.
ಕೊಹ್ಲಿ ನಾಯಕತ್ವದ ಟೀಮ್ ಇಂಡಿಯಾ ವಿಶ್ವಕಪ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದೆ. ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನದ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದೆ. ನ್ಯೂಜಿಲೆಂಡ್ ವಿರುದ್ಧವೂ ಗೆಲುವು ದಾಖಲಿಸಿವ ವಿಶ್ವಾಸದಲ್ಲಿತ್ತು. ಆದ್ರೆ, ವರುಣ ಅಡ್ಡಿಪಡಿಸದ. ಮಳೆಯಿಂದ ಆ ಪಂದ್ಯ ರದ್ದಾಯಿತು.
ದಕ್ಷಿಣ ಆಫ್ರಿಕಾ ವಿರುದ್ಧ ಮತ್ತು ಪಾಕಿಸ್ತಾನದ ವಿರುದ್ಧ ರೋಹಿತ್ ಶರ್ಮಾ ಸೆಂಚುರಿ ಸಿಡಿಸಿದ್ರು. ಆಸೀಸ್ ವಿರುದ್ಧವೂ ಭರ್ಜರಿ ಅರ್ಧಶತಕ ಸಿಡಿಸಿದ್ದರು. ಮೂರು ಪಂದ್ಯಗಳಲ್ಲಿ 50+ರನ್ಗಳಿಸಿ ರೋಹಿತ್ ಉತ್ತಮ ಫಾರ್ಮ್ನಲ್ಲಿದ್ದಾರೆ.
ವಿಷಯ ಏನಪ್ಪ ಅಂದ್ರೆ ಐಸಿಸಿ ಏಕದಿನ ರ್ಯಾಂಕಿಂಗ್ ನಲ್ಲಿ ನಾಯಕ ವಿರಾಟ್ ಕೊಹ್ಲಿ 1 ಸ್ಥಾನದಲ್ಲಿದ್ದರೆ, ಉಪ ನಾಯಕ ರೋಹಿತ್ ಶರ್ಮಾ ನಂಬರ್ 2 ಸ್ಥಾನದಲ್ಲಿದ್ದಾರೆ. ವಿರಾಟ್ ಕೊಹ್ಲಿ 890 ರೇಟಿಂಗ್ ನೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ರೋಹಿತ್ ಶರ್ಮಾ 839 ರೇಟಿಂಗ್ನೊಂದಿಗೆ 2ನೇ ಸ್ಥಾನದಲ್ಲಿದ್ದಾರೆ. ರೋಹಿತ್ ವಿಶ್ವಕಪ್ನಲ್ಲಿ ಈಗಾಗಲ ಎರಡೆರಡು ಸೆಂಚುರಿ ಸಿಡಿಸಿದ್ದು, ಮುಂದಿನ ಪಂದ್ಯಗಳಲ್ಲೂ ಸೆಂಚುರಿ ಸಿಡಿಸು ವಿಶ್ವಾಸದಲ್ಲಿದ್ದಾರೆ. ರೋಹಿತ್ ಬ್ಯಾಟಿಂಗ್ ನಲ್ಲಿ ಮತ್ತಷ್ಟು ಸದ್ದು ಮಾಡಿದರೆ ಕೊಹ್ಲಿ ಸ್ಥಾನಕ್ಕೆ ಕುತ್ತು ಕನ್ಫರ್ಮ್.
ಭಾರತ 5ನೇ ಪಂದ್ಯವನ್ನು ಜೂನ್ 22ರಂದು ಅಪ್ಘಾನಿಸ್ತಾನದ ವಿರುದ್ಧ ಆಡಲಿದೆ. ಮೊದಲು ಭಾರತ ಬ್ಯಾಟಿಂಗ್ ನಡೆಸಿದ್ರೆ ದಾಖಲೆಯ ಮೊತ್ತವನ್ನು ದಾಖಲಿಸುವ ಸಾಧ್ಯತೆ ಇದೆ.
ಒಟ್ಟಿನಲ್ಲಿ ರೋಹಿತ್ತೋ, ವಿರಾಟೋ..ಮೊದಲ ಎರಡು ಸ್ಥಾನದಲ್ಲಿರೋದು ನಮ್ಮ ಭಾರತೀಯರೇ ಅಲ್ವಾ? ನಂಬರ್ 1 ಬೌಲರ್ ಕೂಡ ನಮ್ಮವರೇ ಜಸ್ಪ್ರೀತ್ ಬುಮ್ರಾ…!
ಕ್ಯಾಪ್ಟನ್ ಕೊಹ್ಲಿ ಸ್ಥಾನದ ಮೇಲೆ ಕಣ್ಣಿಟ್ಟ ರೋಹಿತ್ ಶರ್ಮಾ..! ವಿರಾಟ್ ಸ್ಥಾನಕ್ಕೆ ಸದ್ಯದಲ್ಲೇ ಕುತ್ತು?
Date: