ಆತ ಮೈಸೂರಿನ ಹೆಚ್.ಡಿ ಕೋಟೆಯ ಹೆಬ್ಬಲಕುಪ್ಪೆಯವರು. ದೇಶ ಸೇವೆಯೇ ಅವರ ಉಸಿರು..! ಅಂದರೆ ಅವರು ಯೋಧ. ಹೆಸರು ಲೋಕೇಶ್. ಮದ್ವೆಯ ಪ್ರಾಯವಾಗಿದ್ದರಿಂದ ತನಗೆ ಸೂಕ್ತವಾದ ವಧುವನ್ನು ಹುಡುಕಿಕೊಳ್ಳಲು ಮ್ಯಾಟ್ರಿಮೋನಿ ಮೊರೆ ಹೋಗುತ್ತಾರೆ. ಮ್ಯಾಟ್ರಿಮೋನಿಯಲ್ಲಿ ತನ್ನ ವಿವರಗಳನ್ನು ದಾಖಲಿಸಿದ ಲೋಕೇಶ್ ಗೆ ಸಾವಿರಾರು ಪ್ರಪೋಸಲ್ಗಳೂ ಬಂದಿರಬಹುದು. ಆದರೆ. ಅವರ ಮನ ಮಿಡಿದಿದ್ದು ಆಕೆಯತ್ತ..!
ಆಕೆಯ ಹೆಸರು ಲಾವಾಣ್ಯ… ಮ್ಯಾಟ್ರಿಮೋನಿಯಲ್ಲಿ ಆಕೆ ತಾನು ಐಪಿಎಸ್ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದಳು. ಯೋಧ ಲೋಕೇಶ್ ಆ ಪ್ರೊಫೈಲ್ ಅನ್ನು ನಂಬುತ್ತಾರೆ. ಅವಳನ್ನು ಕಾಂಟೆಕ್ಟ್ ಕೂಡ ಮಾಡುತ್ತಾರೆ.
ಪರಿಚಯ ಇಬ್ಬರನ್ನು ಸನಿಹ ತಂದಿತು. ಆ ಸನಿಹದಿಂದ ಅವರಿಬ್ಬರು ಪರಸ್ಪರ ಒಪ್ಪಿ ಮದುವೆಗೆ ತೀರ್ಮಾನಿಸಿದರು. ನಿಶ್ಚಿತಾರ್ಥವೂ ಆಯ್ತು. ಲಾವಣ್ಯ ನಿಶ್ಚಿತಾರ್ಥದ ನೆಪದಲ್ಲಿ ಲೋಕೇಶ್ ಅವರಿಂದ ಲಕ್ಷಗಟ್ಟಲೆ ಹಣವನ್ನು ಕಿತ್ತಿದ್ದಳಂತೆ..! ನಂತರ ಮದುವೆ ಡೇಟ್ ಫಿಕ್ಸ್ ಆದ ಮೇಲೂ ದುಡ್ಡು ಕೇಳಿದ್ದಳಂತೆ. ಮದುವೆ 13 ಲಕ್ಷ ರೂ ಬೇಕು ಎಂದು ಪಟ್ಟು ಹಿಡಿದಾಗ ಲೋಕೇಶ್ ಗೆ ಇದು ಎಲ್ಲೋ ಉಲ್ಟಾ ಹೊಡೆಯುತ್ತಿದೆ ಎನ್ನುವ ಅನುಮಾನ ಕಾಡಿದೆ. ಅನುಮಾನ ಗೊಂಡ ಲೋಕೇಶ್ ಲಾವಣ್ಯ ಬಗ್ಗೆ ವಿಚಾರಣೆಗೆ ಮುಂದಾಗಿದ್ದಾರೆ. ಆಕೆಯ ಕುರಿತು ವಿಚಾರಿಸಿದಾಗ ಆಕೆ ಮದುವೆ ನೆಪದಲ್ಲಿ ತುಂಬಾ ಜನರಿಗೆ ವಂಚಿಸಿದ್ದಾಳೆ ಎನ್ನುವುದು ತಿಳಿದಿದೆ. ಆಗ ಲೋಕೇಶ್ ಪೊಲೀಸ್ ಮೊರೆ ಹೋಗಿದ್ದಾರೆ . ಹುಣಸೂರು ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಲಾವಣ್ಯಳನ್ನು ಅರೆಸ್ಟ್ ಮಾಡಿದ್ದಾರೆ.
ಹೀಗೆ ಮ್ಯಾಟ್ರಿಮೋನಿಯ ಮೂಲಕ ಲಾವಣ್ಯ ವಂಚಿಸಿದ್ದಾಳೆ. ರೀ ಯಾರನ್ನು ನಂಬೋದು? ಯಾರನ್ನು ಬಿಡೋದು? ಹುಷಾರಾಗಿರಿ…ಅಷ್ಟೇ..ಕಣ್ಣಾರೆ ಕಂಡರೂ ಪ್ರಾಮಾಣಿಸಿ ನೋಡಿ.
ಮ್ಯಾಟ್ರಿಮೋನಿಯಲ್ಲಿ ಸಿಕ್ಕ ಚೆಲುವೆ ಅವರಿಗೆ ಅದೆಂಥಾ ಮೋಸ ಮಾಡಿಬಿಟ್ಟಳು..! ಯಾರನ್ನು ನಂಬೋದು?
Date: