ಪ್ರತಿಯೊಬ್ಬರೂ ತಮ್ಮ ಲೈಂಗಿಕ ಜೀವನ ಹಾಗಿರಬೇಕು.. ಹೀಗಿರಬೇಕು ಅಂತಾ ಕನಸು ಕಾಣುತ್ತಾರೆ.ಸೆಕ್ಸ್ ಬಗ್ಗೆ ತಮ್ಮದೇ ಆದ ಪರಿಕಲ್ಪನೆ ಹೊಂದಿರುತ್ತಾರೆ. ಅಂದುಕೊಂಡಂತೆ ಆಗಲಿಲ್ಲ ಅಂದ್ರೆ ಸಂಬಂಧವೇ ಮುರಿದು ಹೋಗುವ ಸಾಧ್ಯತೆ ಇರುತ್ತದೆ. ಆದ್ರೆ ಸೆಕ್ಸ್ಗೂ ಮೂಹುರ್ತ ಇರಬೇಕಾ..?
ಹಿಂದಿನ ಕಾಲದಲ್ಲಿ ಮದುವೆಯಾದ ನವ ಜೋಡಿಗಳು ಸಂಧಿಸುವುದಕ್ಕೆ ಮನೆಯವರು ಶಾಸ್ತ್ರದ ಮೂಲಕ ಅಮೃತ ಘಳಿಗೆ ಫಿಕ್ಸ್ ಮಾಡ್ತಿದ್ರು.. ಆದ್ರೀಗ ಅದೆಕ್ಕೆಲ್ಲಾ ಕೆಲವರು ಗೋಲಿ ಹೊಡೆದಿದ್ದಾರೆ. ಸಿನಿಮಾ ನೋಡಿ, ಬುಕ್ ಓದಿ ರೊಮ್ಯಾಂಟಿಕ್ ಸೆಕ್ಸ್ ಲೈಫ್ ಬಗ್ಗೆ ಎಲ್ಲರೂ ತಮ್ಮದೇ ಆದ ಕಲ್ಪನಾಲೋಕದಲ್ಲಿ ವಿಹರಿಸುತ್ತಿರುತ್ತಾರೆಇನ್ನು ಕೆಲವರು ಥ್ರಿಲ್ ಅನುಭವಿಸುತ್ತಾರೆ. ಆದರೆ, ಲೈಂಕಿಗತೆ ವಿಷಯದಲ್ಲಿ ಪ್ಲ್ಯಾನ್ನಂತೆ ಆಗುವುದಿಲ್ಲ. ಆ ಕ್ಷಣದ ಭಾವನೆ, ಮೂಡ್ ಹಾಗೂ ಗಂಡು ಹೆಣ್ಣಿನ ಮಾನಸಿಕ ಸ್ಥಿತಿ ಮೇಲೆ ಅವಲಂಬಿತವಾಗಿರುತ್ತದೆ.
ರೋಮ್ಯಾಂಟಿಕ್ ಮೂಡಿದ್ದರೆ ಮುಂದುವರಿಸುವುದೂ ಒಂದು ಕಲೆ. ಕೆಲವೊಮ್ಮೆ ಮನಸ್ಸಿನ ಒತ್ತಡ ಹೆಚ್ಚಿದ್ದರೆ, ಲೈಂಗಿಕ ಚಟುವಟಿಕೆ ಮೇಲೂ ಪರಿಣಾಮ ಬೀರುತ್ತದೆ. ಬ್ಯೂಟಿಫುಲ್ ಆಗಿ ಕಾಣಿಸುವ ಸಂಗಾತಿ ಎದುರು ಬಂದಾಕ್ಷಣವೇ ಇಬ್ಬರಲ್ಲಿ, ಒಬ್ಬರು ಲೈಂಗಿಕವಾಗಿ ಪ್ರಚೋದನೆಗೆ ಒಳಗಾಗುತ್ತಾರೆ. ಮತ್ತೊಬ್ಬರನ್ನು ಮೂಡಿಗೆ ಬರಿಸಿ, ರೊಮ್ಯಾನ್ಸ್ ಮಾಡುವುದು ಸ್ಪಾಂಟೇನಿಯಸ್ ಲೈಂಗಿಕ ಕ್ರಿಯೆ. ಇದು ಸಾಮಾನ್ಯವಾಗಿ ಎಲ್ಲ ಜೋಡಿಯ ವಿಷಯದಲ್ಲಿಯೂ ಆಗುವಂಥ ಪ್ರಕ್ರಿಯೆಯಾಗಿರುತ್ತದೆ. ಇಬ್ಬರೂ ಒಪ್ಪಿಗೆಯಿಂದ ಸಹಜವಾಗಿಯೇ ಭಾವನೆಗಳು ಲೈಂಗಿಕತೆಗೆ ಪ್ರಚೋದಿಸುತ್ತದೆ. ಇದಕ್ಕೆ ಆ ಸಮಯ, ಈ ಸಮಯವೆಂಬುವುದು ಇರುವುದಿಲ್ಲ. ಯಾವಾಗಲೂ ಬೇಕಾದರೂ ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಾರೆ. ಇದನ್ನ ಸಹಜ ಲೈಂಗಿಕ ಕ್ರಿಯೆ ಎನ್ನುತ್ತಾರೆ.
ಒತ್ತಡ ಹೆಚ್ಚಾದ ಜೋಡಿಗಳಿಗೂ ಸೆಕ್ಸ್ಗೂ ಸಮಯ ನಿಗದಿ ಮಾಡಿಕೊಳ್ಳುವುದು ಸಹಜ. ಇಂಥ ಪ್ರಕ್ರಿಯೆಯಲ್ಲಿ ಮನಸ್ಸಿದೆಯೋ, ಇಲ್ಲವೋ, ಇಬ್ಬರೂ ಯಾಂತ್ರಿಕವಾಗಿ ಕ್ರಿಯೆಯಲ್ಲಿ ಭಾಗಿಯಾಗುತ್ತಾರೆ. ಟೆನ್ಷನ್ನಲ್ಲಿಯೇ ಮುಂದುವರಿದರೆ ಇಬ್ಬರಿಗೂ ಸುಖ ಸಿಗೋಲ್ಲ.
ಒಟ್ಟಿನಲ್ಲಿ ಗಂಡು-ಹೆಣ್ಣು ಮಾನಸಿಕವಾಗಿ ಒಂದಾದರೆ ಮಾತ್ರ, ದೈಹಿಕವಾಗಿಯೂ ಸುಖ ಪಡೆಯಲು ಸಾಧ್ಯ ಎಂಬುದನ್ನ ಅರಿತುಕೊಳ್ಳಬೇಕು. ಆದ್ರೆ ಇದಕ್ಕೆ ಯಾವ ಹೊತ್ತು ಗೊತ್ತು.. ಸಮಯ ನಿಗಧಿ ಅಂತೇನು ಬೇಕಾಗಿಲ್ಲ. ಎಲ್ಲವಕ್ಕೂ ಮುಂಚೆ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಂಡು, ದೈಹಿಕ ಸ್ವಾಸ್ಥ್ಯ ಕಾಪಾಡಿಕೊಳ್ಳುವುದು ಅಗತ್ಯವಾಗಿರುತ್ತೆ ಅಷ್ಟೇ.