ಟಿಕ್​​​​​​ಟಾಕ್​ ಬರೀ ಆ್ಯಪ್ ಅಲ್ಲ..ಅದು ಡೆಡ್ಲಿ ಆ್ಯಪ್..!

Date:

ಟಿಕ್​​ಟಾಕ್​ ಹುಚ್ಚು ಕೆಲವರಿಗೆ ಹೆಚ್ಚಾಗಿದೆ. ಮಾಡುವ ಕೆಲಸವನ್ನು ಬಿಟ್ಟು ಟಿಕ್​ ಟಾಕ್​ ಹಿಂದೆ ಬಿದ್ದಿದ್ದಾರೆ. ಕೆಲವರು ಜೀವಕ್ಕಿಂತ ಹೆಚ್ಚು ಟಿಕ್​ ಟಾಕ್​ ಅನ್ನು ಪ್ರೀತಿಸ್ತಾರೆ. ನಟನೆಯ ಕೌಶಲ್ಯತೆಯನ್ನು ಹೊರ ಹಾಕಲು ಇರುವ ಆನ್​ಲೈನ್ ವೇದಿಕೆ ಇದಾಗಿದ್ದು, ಇದರ ಹುಚ್ಚು ಜನರಿಗೆ ನೆತ್ತಿಗೇರಿ ಬಿಟ್ಟಿದೆ.
ಮೊನ್ನೆ ಮೊನ್ನೆಯಷ್ಟೇ ಟಿಕ್ ಟಾಕ್​ ಮಾಡುತ್ತಾ ತಮಿಳುನಾಡುನ ಮಹಿಳೆಯೊಬ್ಬರು ವಿಷ ಕುಡಿದಿದ್ದರು. ಟಿಕ್ ಟಾಕ್ ಮಾಡೋದನ್ನು ಕಮ್ಮಿ ಮಾಡಿ ಸ್ವಲ್ಪ ಮಕ್ಕಳ ಕಡೆ ಗಮನ ಕೊಡು ಅಂದಿದ್ದಕ್ಕೇ ಆ ಮಹಿಳೆ ವಿಷ ಕುಡಿಯುತ್ತಾ ಟಿಕ್​ಟಾಕ್ ಮಾಡಿ ವಿಷ ಕುಡಿದು ಸಾವನ್ನಪ್ಪಿದ್ದರು. ಅಷ್ಟೇ ಅಲ್ಲದೆ ತುಮಕೂರಿನ ಯುವಕನೊಬ್ಬ ಟಿಕ್ ಟಾಕ್ ಮಾಡಲು ಹೋಗಿ ದುಸ್ಸಾಹಸಕ್ಕೆ ಯತ್ನಿಸಿ ಮೂಳೆ ಮುರಿದುಕೊಂಡು ಸಾವು-ಬುದಕಿನ ನಡುವೆ ಆಸ್ಪತ್ರೆಯಲ್ಲಿದ್ದಾನೆ.
ಈಗ 12 ವರ್ಷದ ಬಾಲಕ ಟಿಕ್​ಟಾಕ್​ಗಾಗಿ ಪ್ರಾಣ ಬಿಟ್ಟಿದ್ದಾನೆ. ರಾಜಸ್ಥಾನದ ಬಾಲಕ ಕುಶಾಲ್ ಮೃತ. ಈತ ಟಿಕ್​ ಟಾಕ್ ಮಾಡುತ್ತಾ ಕುತ್ತಿಗೆಗೆ ಕಬ್ಬಿಣದ ಸರಪಳಿ ಹಾಕಿಕೊಂಡು ನೇಣಿಗೆ ಶರಣಾಗಿದ್ದಾನೆ. ಟಿಕ್​ಟಾಕ್​ನಲ್ಲಿ ಸರಪಳಿ ಹಾಕಿಕೊಳ್ಳುವ ಚಾಲೆಂಜನ್ನು ನೋಡಿದ ಬಾಲಕ ತಾನು ಕೂಡ ಅದೇರೀತಿ ಮಾಡಲು ಮುಂದಾಗಿದ್ದಾನೆ. ಚಾಲೆಂಜಿಗಾಗಿ ತಡರಾತ್ರಿ ಎದ್ದು ಮಂಗಳಸೂತ್ರ ಮತ್ತು ಬಳೆಗಳನ್ನು ಧರಿಸಿ ಟಾಸ್ಕ್​ ಮಾಡಿದ್ದಾನೆ. ಬಳಿಕ ಕಬ್ಬಿಣದ ಸರಪಳಿಯನ್ನು ಕುತ್ತಿಗೆಗೆ ಹಾಕಿಕೊಂಡು ಸಾವನ್ನಪ್ಪಿದ್ದಾನೆ.

ಕುಶಾಲ್ ಬೆಳಗ್ಗೆ ಎಷ್ಟು ಹೊತ್ತಾದ್ರು ಎದ್ದೇಳದನ್ನು ಕಂಡು ಪೋಷಕರು ಅವನ ರೂಮ್​ಗೆ ಹೋದಾಗ ಅಲ್ಲೂ ಇರಲಿಲ್ಲ. ಬಳಿ ಬಾತ್ ರೂಮ್ಗ್ ಹೋದಾಗ ಆತ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಬಾತ್ ರೂಮ್​ ನಲ್ಲಿ ಅವನು ನೇಣಿಗೆ ಶರಣಾಗಿದ್ದನು. ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ ಅಷ್ಟೊತ್ತಿಗೆ ಪ್ರಾಣ ಪಕ್ಷಿ ಹಾರಿತ್ತು.
ಟಿಕ್​ ಟಾಕ್ ಹುಚ್ಚು ಒಬ್ಬ ಬಾಲಕನ ಜೀವವನ್ನೇ ತೆಗೆದಿದೆ. ನಟನೆಗೆ ವೇದಿಕೆಯಾಗಿದ್ದ ಆ್ಯಪ್ ಈಗ ಡೆಡ್ಲಿ ಆ್ಯಪ್ ಆಗಿದೆ. ಪೋಷಕರೇ ನೀವು ನಿಮ್ಮ ಮಕ್ಕಳ ಬಗ್ಗೆ ಎಚ್ಚರವಹಿಸಿ.. ಮೊಬೈಲ್ನಿಂದ ದೂರ ಇಡಿ.

Share post:

Subscribe

spot_imgspot_img

Popular

More like this
Related

ನಾರಾಯಣಗುರುಗಳ ಕನಸಿನ ಸಹೃದಯ ಭಾರತವನ್ನು ನಾವು ಗಟ್ಟಿಗೊಳಿಸಬೇಕು: ಸಿಎಂ ಸಿದ್ದರಾಮಯ್ಯ

ನಾರಾಯಣಗುರುಗಳ ಕನಸಿನ ಸಹೃದಯ ಭಾರತವನ್ನು ನಾವು ಗಟ್ಟಿಗೊಳಿಸಬೇಕು: ಸಿಎಂ ಸಿದ್ದರಾಮಯ್ಯ ತಿರುವನಂತಪುರ: ವೈವಿಧ್ಯತೆಯ...

ಕಲಬುರಗಿ ಸೆಂಟ್ರಲ್ ಜೈಲಿನ ಅಕ್ರಮಗಳು ಬಯಲು: ಕೈದಿಗಳ ಹೈಫೈ ಲೈಫ್ ವಿಡಿಯೋ ವೈರಲ್

ಕಲಬುರಗಿ ಸೆಂಟ್ರಲ್ ಜೈಲಿನ ಅಕ್ರಮಗಳು ಬಯಲು: ಕೈದಿಗಳ ಹೈಫೈ ಲೈಫ್ ವಿಡಿಯೋ...

ಸಾರಿಗೆ ಇಲಾಖೆ ಎಚ್ಚರಿಕೆಗೂ ಕ್ಯಾರಿಲ್ಲ: ಲಗೇಜ್ ತುಂಬಿಕೊಂಡು ಬಂದ ಬಸ್‌ಗಳು ಸೀಜ್

ಸಾರಿಗೆ ಇಲಾಖೆ ಎಚ್ಚರಿಕೆಗೂ ಕ್ಯಾರಿಲ್ಲ: ಲಗೇಜ್ ತುಂಬಿಕೊಂಡು ಬಂದ ಬಸ್‌ಗಳು ಸೀಜ್ ದೇವನಹಳ್ಳಿ:...

ಕೋಗಿಲು ಅಕ್ರಮ ಮನೆ ತೆರವು ವಿಚಾರ: ಸಿಎಂ–ಡಿಸಿಎಂ ಯೂಟರ್ನ್ ಹೊಡೆದಿದ್ದಾರೆ – ವಿಜಯೇಂದ್ರ ಟೀಕೆ

ಕೋಗಿಲು ಅಕ್ರಮ ಮನೆ ತೆರವು ವಿಚಾರ: ಸಿಎಂ–ಡಿಸಿಎಂ ಯೂಟರ್ನ್ ಹೊಡೆದಿದ್ದಾರೆ –...