ಮೈಸೂರಿನಲ್ಲಿ ಆಯೋಜಿಸಿದ್ದ ವಿಧಾನಸಭೆ ಹಾಗೂ ಪೌರಸಂಸ್ಥೆ ಚುನಾವಣೆಗಳ ಪರಾಜಿತ ಅಭ್ಯರ್ಥಿಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ರಾಜಕಾರಣದಲ್ಲಿ ಸೋಲು ಶಾಶ್ವತವಲ್ಲ, ಪ್ರಾದೇಶಿಕ ಶಕ್ತಿಯಾಗಿ ಕಟ್ಟಿ ಬೆಳೆಸಿರುವ ಪಕ್ಷವನ್ನು ಉಳಿಸಿಕೊಳ್ಳುತ್ತೇನೆ ಎಂದರು.
ಪಕ್ಷದಲ್ಲಿ ಯಾವ ಗೊಂದಲವೂ ಇಲ್ಲ. ಸೋದರ ಭಾವದಿಂದ ಜೆಡಿಎಸ್ ನೊಂದಿಗೆ ಮುಂದುವರಿಯುವುದು ಕಾಂಗ್ರೆಸ್ ಗೆ ಬಿಟ್ಟ ವಿಚಾರ. ನಾನು ಸರ್ಕಾರದ ಕಾರ್ಯನಿರ್ವಹಣೆಗೆ ಧಕ್ಕೆಯಾಗದಂತೆ ಪಕ್ಷ ಸಂಘಟನೆ ಕೆಲಸ ಮಾಡುತ್ತೇನೆ.4 ವರ್ಷಗಳಿಗೇ ಚುನಾವಣೆ ಬರಲಿ, ಅಲ್ಲಿಯವರೆಗೆ ಜನರ ಮಧ್ಯೆ ಪಕ್ಷವನ್ನು ಕೊಂಡೊಯ್ಯಬೇಕಿದೆ. ಆ ದುಡಿಮೆಗೆ ನಾನು ಸಿದ್ಧನಿದ್ದೇನೆ ಎಂದು ಹೇಳಿದರು.