ಅರ್ಥವಿಲ್ಲದ ಪ್ರಶ್ನೆಗೆ ಸುಮ್ಮನಿರುವುದೇ ಉತ್ತರ ಎಂಬ ಕುವೆಂಪು ಮಾತಿನಂತೆ, ಗ್ರಾಮ ವಾಸ್ತವ್ಯ ಕುರಿತ ವಿರೋಧ ಪಕ್ಷದ ನಾಯಕರ ಹುರುಳಿಲ್ಲದ ಟೀಕೆಗೆ ಇದೇ ನನ್ನ ಉತ್ತರ ಎಂದು ಸಿಎಂ ಹೆಚ್.ಡಿ ಕುಮಾರಸ್ವಾಮಿಯವರು ಟ್ವಿಟರ್‌ನಲ್ಲಿ ತಿರುಗೇಟು ನೀಡಿದ್ದಾರೆ.
ಇನ್ನು ಇದೇ ವೇಳೆ ಅವರು ಇಂದು ಬೆಳಗ್ಗೆ ನಾನು ಎದ್ದಾಗ ಚಂಡರಕಿಯಲ್ಲಿ ಮಳೆಯಾಗಿದ್ದು ನೋಡಿ ಸಂತೋಷವಾಯಿತು.
ಬೆಳಗ್ಗೆ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಇತರ ಜಿಲ್ಲಾ ಆಡಳಿತ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದೇನೆ. ಸ್ಥಳೀಯ ಸಮಸ್ಯೆಗಳನ್ನು ಹಾಗೂ ಜನತಾ ದರ್ಶನದಲ್ಲಿ ಸ್ವೀಕೃತವಾಗಿರುವ ಅರ್ಜಿಗಳನ್ನು ಆದ್ಯತೆಯ ಮೇಲೆ ಇತ್ಯರ್ಥಗೊಳಿಸಲು ಸೂಚಿಸಿದ್ದೇನೆ ಅಂತ ಹೇಳಿಕೊಂಡಿದದಾರೆ. ಇದಲ್ಲದೇ ಅವರು ಕಲಬುರ್ಗಿಯ ಹೇರೂರು ಬಿ ಗ್ರಾಮದಲ್ಲಿ ಇಂದು ನಡೆಯಬೇಕಿದ್ದ ಜನತಾದರ್ಶನ ಮತ್ತು ಗ್ರಾಮ ವಾಸ್ತವ್ಯ ಮುಂದೂಡವೇಕಾಗಿ ಬಂದದ್ದು ನನಗೆ ತೀವ್ರ ನಿರಾಸೆ ಉಂಟುಮಾಡಿದೆ.
ಆದರೆ ಅದೇ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಮಳೆಯಾಗುತ್ತಿರುವದು ನನಗೆ ತುಂಬಾ ಸಂತೋಷ ಕೊಟ್ಟಿದೆ. ಸದ್ಯದಲ್ಲೇ ಭೇಟಿಯಾಗೋಣ ಅಂತ ಮನವಿ ಮಡಿಕೊಂಢಿದ್ದಾರೆ.