ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಡಿಸಿಆರ್ ಮಾಡಲು ಹೊರಟಿರುವ ಕ್ರಮ ಸರಿಯಲ್ಲ. ಈಗಾಗಲೇ ಶಿವಮೊಗ್ಗದ ಜನರು ಇದರ ವಿರುದ್ಧ ಹೋರಾಟ ಕೈಗೊಂಡಿದ್ದಾರೆ. ವಾಸ್ತವದ ಆಧಾರದ ಮೇಲೆ ಬೆಂಗಳೂರಿಗೆ ನೀರು ತರುವ ಯೋಜನೆ ಕೈಗೆತ್ತಿಕೊಳ್ಳಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಇನ್ನು ತುಮಕೂರಿನಲ್ಲಿ ಡಿಸಿಎಂ ಸಂಚರಿಸುವು ಮಾರ್ಗದಲ್ಲಿ ಬಿಜೆಪಿ ಬಾವುಟ ತೆರವುಗೊಳಿಸಲು ನೋಟಿಸ್ ನೀಡಿದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿ ಒಂದು ರಾಷ್ಟ್ರೀಯ ಪಕ್ಷ.ರಾಷ್ಟ್ರೀಯ ಪಕ್ಷದ ಧ್ವಜ ಪ್ರದರ್ಶಿಸಬಾರದು ಎಂದರೆ ತಪ್ಪಾಗುತ್ತದೆ. ಜಿ.ಪರಮೇಶ್ವರ್ ಆ ರೀತಿ ಹೇಳಲು ಸಾಧ್ಯವಿಲ್ಲ. ನಾನು ಖುದ್ದಾಗಿ ಅವರ ಜೊತೆ ಮಾತನಾಡುತ್ತೇನೆ ಎಂದರು