ಮಾನವನ ದೇಹದ ಪ್ರತಿಯೊಂದು ಅಂಗವನ್ನು ನಿಯಂತ್ರಣ ಮಾಡುವುದು ಮೆದುಳು. ಇದು ಎಲ್ಲಾರಿಗೂ ಗೊತ್ತಿರುವ ವಿಷಯವೇ. ಯಾವ ಅಂಗ ಏನು ಕಾರ್ಯ ಮಾಡಬೇಕೆಂದು ಮೆದುಳು ಸಂದೇಶ ನೀಡುತ್ತಿರುತ್ತದೆ. ಆದರೆ ಈ ಮೆದುಳಿನ ಸಾಮರ್ಥ್ಯವನ್ನು ನಾವೇ ಕೆಲವೊಂದು ಅಭ್ಯಾಸಗಳಿಂದಾಗಿ ಕಡಿಮೆ ಮಾಡುತ್ತಾ ಹೋಗುತ್ತೇವೆ. ಅದರಲ್ಲೂ ಈ ರೀತಿಯ ಅಭ್ಯಾಸಗಳಿದ್ದರೆ ಮೆದುಳಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತೆ ಗೊತ್ತಾ..?
ಪ್ರಯಿಯೊಬ್ಬರಿಗೂ ಸಿಹಿ ತಿಂಡಿಗಳ ಮೇಲೆ ಹೆಚ್ಚು ಒಲವು ಇರುತ್ತದೆ. ಹೆಚ್ಚಾಗಿ ಸೇವಿಸುತ್ತಾರೆ. ಇನ್ನು ಚಿಕ್ಕಮಕ್ಕಳಂತೂ ಕೇಳೋದೆ ಬೇಡ ಅತೀಯಾಗಿ ಸಿಹಿ ತಿಂಡಿ ತಿನ್ನುತ್ತಾರೆ. ಸಕ್ಕರೆಯಂಶ ಅಧಿಕವಿರುವ ತಿಂಡಿ ಅಥವಾ ಟೀ/ಕಾಫಿ ಕುಡಿಯುವುದು ಆರೋಗ್ಯಕ್ಕೆ ಮಾತ್ರವಲ್ಲ ಮೆದುಳಿಗೂ ಒಳ್ಳೆಯದಲ್ಲ. ಇದರಿಂದ ಮೆದುಳಿಗೆ ಪೋಷಕಾಂಶದ ಕೊರತೆ ಉಂಟಾಗಿ ನೆನಪಿನ ಶಕ್ತಿ ಕುಂದುವುದು.
ಸರಿಯಾದ ಸಮಯಕ್ಕೆ ನಿದ್ದೆ ಮಾಡದೇ ಫೋನ್, ಇಂಟರ್ನೆಟ್ನಲ್ಲಿ ಕಾಲ ಕಳೆಯುವುದರಿಂದ ನೆನಪಿನ ಶಕ್ತಿ ಕುಂದುವುದಕ್ಕೆ ಕಾರಣವಾಗಿರುತ್ತದೆ. ಇದರಿಂದ ನಮ್ಮ ಮೆದುಳಿಗೆ ಆಮ್ಲಜನಕ ಸರಿಯಾಗಿ ಪೂರೈಕೆ ಆಗುವುದಿಲ್ಲ. ಇದರಿಂದಲೂ ನೆನಪಿನ ಶಕ್ತಿಗೆ ಆಪತ್ತು ಎದುರಾಗುತ್ತೆ.
ನಮ್ಮ ದೇಹಕ್ಕೆ ಎಷ್ಟು ಅಗತ್ಯವೋ ಅಷ್ಟು ಆಹಾರವನ್ನು ತಿನ್ನಬೇಕು. ಬಾಯಿ ಚಪಲಕ್ಕೆ ಬಿದ್ದು ಅಧಿಕ ತಿನ್ನುವುದರಿಂದ ಮೈತೂಕ ಹೆಚ್ಚುವುದು, ಇದರಿಂದ ರಕ್ತ ಸಂಚಲ ಸರಾಗವಾಗಿ ನಡೆಯದೆ ಮೆದುಳಿನ ಸಾಮರ್ಥ್ಯ ಕಡಿಮೆಯಾಗುವುದು. ಇದಕ್ಕೆ ವಿರುದ್ಧವಾಗಿ ಡಯಟ್ ಹೆಸರಿನಲ್ಲಿ ಬೆಳಗಿನ ಬ್ರೇಕ್ಫಾಸ್ಟ್ ಮಾಡದೆ ಇದ್ದರೆ ನೆನಪಿನ ಶಕ್ತಿ ಕಡಿಮೆಯಗುವುದು.
ನಮ್ಮ ಮೆದುಳಿನ ಸ್ನಾಯುಗಳಿಗೆ ವ್ಯಾಯಾಮ ದೊರೆಯಬೇಕೆಂದರೆ ನಾವು ಮಾತನಾಡಬೇಕು. ಯೋಚನೆ ಮಾಡುತ್ತಾ ಇರುವುದರಿಂದ, ಮಾತನಾಡುವುದರಿಂದ ಮೆದುಳಿನ ಸಾಮರ್ಥ್ಯ ಹೆಚ್ಚುವುದು