ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡುಗೆ ಶನಿಕಾಟ ಶುರುವಾಗಿದೆ. ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ, ಚಂದ್ರಬಾಬು ನಾಯ್ಡು ಹಿಂದೆ ಬಿದ್ದಂತಿದೆ. ಜಗನ್ ಮೋಹನ್ ರೆಡ್ಡಿ, ಪ್ರಜಾ ವೇದಿಕಾ ಕಟ್ಟಡ ನೆಲಸಮಕ್ಕೆ ಆದೇಶ ನೀಡಿದ್ದಾರೆ.
ಚಂದ್ರಬಾಬು ನಾಯ್ಡು ಮನೆ ಮುಂದೆಯೇ ಈ ಕಟ್ಟಡವಿದೆ. ನಾಯ್ಡು ಮುಖ್ಯಮಂತ್ರಿಯಾಗಿದ್ದಾಗ ಆ ಕಟ್ಟಡದಲ್ಲಿ ಸರ್ಕಾರಿ ಸಭೆಗಳನ್ನು ನಡೆಸುತ್ತಿದ್ದರು. ಕಟ್ಟಡವನ್ನು ಬುಧವಾರ ನೆಲಸಮ ಮಾಡುವುದಾಗಿ ಜಗನ್ ಮೋಹನ್ ರೆಡ್ಡಿ ಹೇಳಿದ್ದಾರೆ. ಇದಕ್ಕೂ ಮುನ್ನ ಪ್ರಜಾ ವೇದಿಕಾ ಕಟ್ಟಡವನ್ನು ವಿರೋಧಿ ಪಕ್ಷದ ನಾಯಕನ ಅಧಿಕೃತ ನಿವಾಸವೆಂದು ಘೋಷಣೆ ಮಾಡುವಂತೆ ನಾಯ್ದು, ರೆಡ್ಡಿಗೆ ಪತ್ರ ಬರೆದಿದ್ದರು.
ಪ್ರಜಾ ವೇದಿಕಾ ಕಟ್ಟಡವನ್ನು 5 ಕೋಟಿ ವೆಚ್ಛದಲ್ಲಿ ಕಟ್ಟಲಾಗಿತ್ತು. ನಾಯ್ಡು ಪತ್ರಕ್ಕೆ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಮನ್ನಣೆ ನೀಡಿಲ್ಲ.ಇದನ್ನು ತೆಲಗು ದೇಶಂ ಪಕ್ಷ ಖಂಡಿಸಿದೆ. ನಾಯ್ಡು ಜೊತೆ ಮುಖ್ಯಮಂತ್ರಿಗಳ ವರ್ತನೆ ಸರಿಯಲ್ಲವೆಂದಿದೆ. ಜಗನ್ ಮೋಹನ್ ರೆಡ್ಡಿ ಪ್ರತಿಪಕ್ಷದಲ್ಲಿದ್ದಾಗ ನಾಯ್ಡು ನಡೆದುಕೊಂಡ ರೀತಿಯನ್ನೇ ಈಗ ಮುಖ್ಯಮಂತ್ರಿಗಳು ಪಾಲಿಸುತ್ತಿದ್ದಾರೆಂದು ಮುಖ್ಯಮಂತ್ರಿ ಆಪ್ತರು ಹೇಳಿದ್ದಾರೆ.