ಡಿ.ಕೆ.ಶಿವಕುಮಾರ್ ಮೈಸೂರಿನಿಂದ ಬೆಂಗಳೂರಿನ ಕಡೆಗೆ ಆಗಮಿಸುತ್ತಿದ್ದರು. ವಿಷಯ ತಿಳಿದ ರೈತರು ಹೆದ್ದಾರಿ ಬಳಿ ಆಗಮಿಸಿ ಕಾರನ್ನು ಅಡ್ಡಗಟ್ಟಿ, ಕೆಆರ್ಎಸ್ನಿಂದ ನೀರು ಬಿಡಲು ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದರು. ಇದೇ ವೇಳೆ ಚುನಾವಣೆ ಪೂರ್ವದಲ್ಲಿ ಪ್ರಾಧಿಕಾರದ ಅನುಮತಿಗೂ ಕಾಯದೆ, ಅದನ್ನು ಲೆಕ್ಕಿಸದೆ ನೀರು ಬಿಟ್ಟಿರಿ.
ಈಗ ನೀರು ಬಿಡಿ ಎಂದರೆ ಪ್ರಾಧಿಕಾರದತ್ತ ಕೈ ತೋರಿಸುತ್ತೀರಿ ಎಂದು ಡಿಕೆಶಿ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಇದೇ ವೇಳೆ ಡಿ.ಕೆ.ಶಿವಕುಮಾರ್, ಪ್ರತಿಭಟನೆ ವಿಚಾರವೇ ಗೊತ್ತಿಲ್ಲ.ಗೊತ್ತಿದ್ದರೆ ನಾನೇ ರೈತರ ಬಳಿ ಮಾತನಾಡುತ್ತಿದ್ದೆ. ಸಮಸ್ಯೆ ಬಗ್ಗೆ ಗಮನಹರಿಸುತ್ತೇನೆ ಎಂದು ಭರವಸೆ ನೀಡಿದರು.