ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಇಡೀ ದೇಶದ ಗಮನ ಸೆಳೆದ ಕ್ಷೇತ್ರ ಮಂಡ್ಯ ಲೋಕಸಭಾ ಕ್ಷೇತ್ರ. ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಹಾಗೂ ಸುಮಲತಾ ಅಂಬರೀಶ್ ಅವರ ನಡುವಿನ ಜಿದ್ದಜಿದ್ದಿನ ಕಣವಾಗಿದ್ದು ಎಲ್ಲರ ಗಮನ ಕೇಂದ್ರೀಕರಿಸಿತ್ತು.
ಚುನಾವಣೆ ಮುಗಿದಿದೆ.. ಕೇಂದ್ರದಲ್ಲಿ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿದಾಗಿದೆ. ರಾಜ್ಯದಲ್ಲಿ 28ರಲ್ಲಿ 25 ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದು ಬೀಗಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ತಲಾ 1 ಕ್ಷೇತ್ರಗಳಲ್ಲಿ ಮಾತ್ರ ಗೆದ್ದಿವೆ. ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರು ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರ ವಿರುದ್ಧ ಪ್ರಚಂಡ ಗೆಲುವು ಸಾಧಿಸಿ ಇತಿಹಾಸ ನಿರ್ಮಿಸಿದ್ದಾರೆ.
ಎಲೆಕ್ಷನ್ ಮುಗಿದು, ಫಲಿತಾಂಶ ಬಂದು ಕೇಂದ್ರದಲ್ಲಿ ಹೊಸ ಸರ್ಕಾರ ರಚನೆಯಾದರೂ ಮಂಡ್ಯ ರಾಜಕಾರಣದ ಟಾಕ್ ನಿಂತಿಲ್ಲ. ಸುಮಲತಾ ಇತ್ತೀಚೆಗೆ ಧಾರವಾಡಕ್ಕೆ ಹೋಗಿದ್ದಾಗ ‘ ನಿಖಿಲ್ ಎಲ್ಲಿದ್ದಿಯಪ್ಪಾ’ ಅನ್ನೋ ಕೂಗು ಪ್ರತಿಧ್ವನಿಸಿತ್ತು. ಸುಮಲತಾ ದೆಹಲಿಯಲ್ಲಿ ಮಂಡ್ಯ ರೈತರ ಪರ ಧ್ವನಿಯಾಗಿ ಸುದ್ದಿಯಾಗಿದ್ದರು.
ಇಂದು ನಿಖಿಲ್ ಕುಮಾರಸ್ವಾಮಿ ಕಾವೇರಿ ವಿಚಾರದ ಬಗ್ಗೆ ಸುಮಲತಾ ಅವರಿಗೆ ಜವಬ್ದಾರಿ ಹೊರಿಸಿದ್ದಾರೆ. ಮಂಡ್ಯಕ್ಕೆ ಅವರು ಹೋದಾಗ ಕಾವೇರಿ ವಿಚಾರದ ಪ್ರಶ್ನೆ ಎದುರಾಯ್ತು. ಆಗ ಅವರು ದೇವೇಗೌಡ್ರು ನಡೆಸಿಕೊಂಡು ಬಂದಿರುವ ಹೋರಾಟವನ್ನು ಪ್ರಾಮಾಣಿಕವಾಗಿ ಮುಂದುವರೆಸುತ್ತೇವೆ. ಆದರೆ, ಆ ಬಗ್ಗೆ ನನ್ನ ಕೇಳುವುದಲ್ಲ. ಆರಿಸಿ ಕಳುಹಿಸಿದ್ದೀರಲ್ಲ ಅವನ್ನು ಕೇಳಿ ಅಂದಿದ್ದಾರೆ. ಅಂದರೆ ನನ್ನ ಕೇಳ್ಬೇಡಿ ಸುಮಲತಾ ಅವರನ್ನು ಕೇಳಿ ಎಂದು ನಿಖಿಲ್ ಗರಂ ಆಗಿದ್ದಾರೆ.
ಸೋಲಿನ ಸೇಡನ್ನು ಕಾವೇರಿ ಜವಬ್ದಾರಿ ಹೊರಸುವ ಮೂಲಕ ನಿಖಿಲ್ ತೀರಿಸಿಕೊಳ್ಳುತ್ತಿದ್ದಾರೆ ಎಂಬ ಮಾತುಗಳ ಬಲವಾಗಿ ಕೇಳಿಬರುತ್ತಿವೆ.
ಸುಮಲತಾ ಅವರನ್ನೇ ಕೇಳಿ ನನ್ನ ಕೇಳ್ಬೇಡಿ ಎಂದು ನಿಖಿಲ್ ಕುಮಾರಸ್ವಾಮಿ..!
Date: