No menu items!
13.5 C
Munich
Wednesday, April 22, 2026

ಕನ್ನಡದ ಮೊನಾಲಿಸಾ ಮೇಘನಾರ ಮುಂದಿನ ಚಿತ್ರ ಯಾವ್ದು ಗೊತ್ತಾ?

Must read

ಕನ್ನಡದ ಮೊನಾಲಿಸಾ ಮೇಘನಾ ಗಾವಂಕರ್ ಅವರು ಸದ್ದಿಲ್ಲದೆ ಒಂದೊಂದೇ ಸಿನಿಮಾಗಳ ಕೆಲಸಗಳನ್ನು ಮುಗಿಸುತ್ತಿದ್ದಾರೆ. 2010ರಲ್ಲಿ ತೆರೆಕಂಡ ನಮ್​ ಏರಿಯಾಲಿ ಒಂದ್​ದಿನ ಎನ್ನುವ ಸಿನಿಮಾ ಮೂಲಕ ಸ್ಯಾಂಡಲ್​ವುಡ್​ ಗೆ ಎಂಟ್ರಿ ಕೊಟ್ಟವರು. ನಂತರ 2011ರಲ್ಲಿ ವಿನಾಯಕ ಗೆಳೆಯರ ಬಳಗ ಹಾಗೂ ತುಘಲಕ್ ಎಂಬ ಎರಡು ಸಿನಿಮಾಗಳಲ್ಲಿ ನಟಿಸಿದ್ದರು.
2012ರಲ್ಲಿ ರಿಲೀಸ್ ಆದ ಚಾರ್​ಮಿನಾರ್ ಸಿನಿಮಾ ಸೂಪರ್ ಹಿಟ್ ಆಯಿತು. ಈ ಸಿನಿಮಾದಲ್ಲಿ ಮೇಘನಾ ರಾಧೆಯಾಗಿ ಪಾತ್ರಕ್ಕೆ ನ್ಯಾಯ ಒದಗಿಸಿದ್ರು. 2012ರಲ್ಲಿ ಭಕ್ತ ಶಂಕರ, 2016ರಲ್ಲಿ ಸಿಂಪಲ್​ ಆಗಿ ಇನ್ನೊಂದು ಲವ್ ಸ್ಟೋರಿ ಸಿನಿಮಾಗಳಲ್ಲಿ ಅಭಿನಯಿಸಿದ್ರು.

ಇದೀಗ ಕಾಳಿದಾಸ ಕನ್ನಡ ಮೇಷ್ಟ್ರು ಸಿನಿಮಾದ ಶೂಟಿಂಗ್ ಮುಗಿಸಿದ್ದಾರೆ. ಸದ್ದಿಲ್ಲದೆ ಈ ಸಿನಿಮಾದ ಶೂಟಿಂಗ್ ಮುಗಿಸಿರುವ ಮೇಘನಾ ಗಾವಂಕರ್ ಅವರು ಹೊಸ ಸಿನಿಮಾಕ್ಕೆ ಸಹಿ ಮಾಡಿದ್ದಾರೆ. ಆ ಸಿನಿಮಾದ ಹೆಸರಿನ್ನೂ ಫೈನಲ್ ಆಗಿಲ್ಲ. ಸಂತೋಷ್​ ಜಿ ಎನ್ನುವ ಹೊಸ ನಿರ್ದೇಶಕರಿಗೆ ಮೇಘನಾ ಕಾಲ್ ಶೀಟ್ ಕೊಟ್ಟಿದ್ದಾರೆ.
ಸಂತೋಷ್​ ಜಿ ಆ ಹೊಸ ಡೈರೆಕ್ಟರ್ ಸಿನಿಮಾ ಮಾಡ್ತಿದ್ದಾರೆ. ಅವರು ಅನೇಕ ಕಿರುಚಿತ್ರಗಳನ್ನು ಮಾಡಿದ್ದಾರೆ. ಅವರ ಚೊಚ್ಚಲ ಸಿನಿಮಾಕ್ಕೆ ಮೇಘನಾ ಗಾವಂಕರ್ ನಾಯಕಿ. ಈ ಸಿನಿಮಾ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ ಆಗಿದೆ ಎಂದು ತಿಳಿದುಬಂದಿದೆ, ಜೂದಾ ಸ್ಯಾಂಡಿ ಸಂಗೀತ6 ನೀಡಿದ್ದಾರೆ. ರಾಕೇಶ್ ಸಿನಿಮಾಟೋಗ್ರಪಿ ಹೊಣೆ ಹೊತ್ತಿದ್ದಾರೆ. ಆದರೆ, ಸಿನಿಮಾಕ್ಕಿನ್ನೂ ಹೆಸರಿಟ್ಟಿಲ್ಲ ಶೀಘ್ರದಲ್ಲೇ ಸಿನಿಮಾ ಹೆಸರು ಘೋಷಣೆಯಾಗಿ ಸೆಟ್ಟೇರಲಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article