ಸಚಿನ್ ತೆಂಡೂಲ್ಕರ್ ವಿಶ್ವಕ್ರಿಕೆಟ್ನ ದಿಗ್ಗಜ. ಕ್ರಿಕೆಟ್ ದೇವರು ಎಂದೇ ಕರೆಯಲ್ಪಡುತ್ತಾರೆ. ವಿಶ್ವಕ್ರಿಕೆಟ್ನಲ್ಲಿ ಅತೀ ಹೆಚ್ಚು ರನ್ ಗಳಿಕೆ ಸೇರಿದಂತೆ ಲೆಕ್ಕವಿಲ್ಲದಷ್ಟು ದಾಖಲೆಗಳನ್ನು ಬರೆದಿರುವ ಆಟಗಾರ. ಕಿರಿಯ ವಯಸ್ಸಲ್ಲೇ ಟೀಮ್ ಇಂಡಿಯಾ ಪರ ಬ್ಯಾಟ್ ಹಿಡಿದು ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಬಹುದೊಡ್ಡ ತಾರೆಯಾಗಿ ಬೆಳೆದಿರುವ ಆಟಗಾರ. ಸಚಿನ್ ಕ್ರಿಕೆಟ್ಗೆ ರಾಜೀನಾಮೆ ನೀಡಿ ಬಹುಕಾಲವಾಗಿದ್ದರೂ ಸಚಿನ್ ಅವರನ್ನು ಇಂದಿಗೂ ಪೂಜಿಸುವ ಮಂದಿ ಇದ್ದಾರೆ. ಆದರೆ, ಸಚಿನ್ ಮೇಲೆ ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ.
ಹೌದು, ಕ್ರಿಕೆಟ್ ದೇವರು ಅಂತಲೂ ನೋಡದೇ ಮಹೇಂದ್ರ ಸಿಂಗ್ ಧೋನಿಯ ಅಭಿಮಾನಿಗಳು ಸಚಿನ್ ತೆಂಡೂಲ್ಕರ್ ಅವರನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ. ಸಚಿನ್ ಏನು ದೊಡ್ಡ ಹಿಟ್ಟರ್ ಆಗಿದ್ರಾ ಎಂದು ಧೋನಿ ಫ್ಯಾನ್ಸ್ ಕಿಡಿಕಾರಿದ್ದಾರೆ.
ಅಫ್ಘಾನಿಸ್ತಾನ್ ವಿರುದ್ಧದ ಪಂದ್ಯದಲ್ಲಿ ಧೋನಿಯ ನಿಧಾನ ಗತಿಯ ಬ್ಯಾಟಿಂಗ್ ಅನ್ನು ಸಚಿನ್ ತೆಂಡೂಲ್ಕರ್ ಟೀಕಿಸಿದ್ದರು. 52 ಎಸೆತಗಳಲ್ಲಿ ಧೋನಿ ಕೇವಲ 28ರನ್ ಮಾಡಿದ್ರು. ಈ ಬಗ್ಗೆ ಸಚಿನ್ ತೆಂಡೂಲ್ಕರ್ ಅಸಮಧಾನ ಹೊರ ಹಾಕಿದ್ರು. ಧೋನಿ , ಕೇದಾರ್ ಜಾಧವ್ ಜೊತೆಗೂಡಿ ಉತ್ತಮ ಜೊತೆಯಾಟ ಆಡಬಹುದಿತ್ತು ಎಂದು ಸಚಿನ್ ಹೇಳಿದ್ದರು. ಅದಲ್ಲದೆ ಧೋನಿ ಕೇದಾರ್ ಜಾಧವ್ ಜೊತೆ ಸೇರಿ ಉತ್ತಮ ಇನ್ನಿಂಗ್ಸ್ ಕಟ್ಟಬಹುದಿತ್ತು ಎಂದಿದ್ದರು. ಸಚಿನ್ ಅವರ ಈ ಮಾತುಗಳು ಧೋನಿ ಅಭಿಮಾನಿಗಳನ್ನು ಕೆರಳಿಸಿದೆ.
ಸಚಿನ್ ಅವರ ವಿರುದ್ಧ ಫುಲ್ ಗರಂ ಆಗಿರುವ ಧೋನಿ ಫ್ಯಾನ್ಸ್ ”ಸಚಿನ್ ಏನು ದೊಡ್ಡ ಹಿಟ್ಟರ್ ಆಗಿದ್ರಾ. ಅವರು ಬರೀ ದಾಖಲೆಗಳಿಗಾಗಿ ಆಡುತ್ತಿದ್ದವರು. ಧೋನಿ ನಾಯಕತ್ವದಲ್ಲಿ ಭಾರತ ಟಿ20, ಏಕದಿನ ವಿಶ್ವಕಪ್ ಗೆದ್ದಿದೆ. ಚಾಂಪಿಯನ್ ಟ್ರೋಫಿ ಗೆದ್ದಿದೆ. ಹೀಗಾಗಿ ತೆಂಡೂಲ್ಕರ್ಗಿಂತ ಧೋನಿಯೇ ಗ್ರೇಟ್ ಪ್ಲೇಯರ್ ಎಂದು ಕಿಡಿಕಾರಿದ್ದಾರೆ.
Twitter is hilarious. 2 vastly different tweets on the same matter. ???? pic.twitter.com/KS8ObtsbBa
— Adwait Dubey ?? (@AdwaitDubey) June 24, 2019